ಕರ್ನಾಟಕ, ಮಹಾರಾಷ್ಟ್ರದ ಬಿಪಿಎಲ್ ಕುಟುಂಬಗಳಲ್ಲಿ ಮುಟ್ಟಿನ ಬಗ್ಗೆ ಅತಿಹೆಚ್ಚು ಮೌಢ್ಯಗಳಿವೆ: ಸಮೀಕ್ಷೆ

ಕರ್ನಾಟಕ ಮತ್ತು ಮಹಾರಾಷ್ಟ್ರಗಳಲ್ಲಿನ ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಕುಟುಂಬಗಳಲ್ಲಿ ಅತಿ ಹೆಚ್ಚು ಮುಟ್ಟಿನ ಆರೋಗ್ಯ ಮತ್ತು ನೈರ್ಮಲ್ಯ ನಿರ್ವಹಣೆಗೆ ಸಂಬಂಧಿಸಿದ ಮೌಢ್ಯಗಳನ್ನು ಹೊಂದಿವೆ ಎಂದು ಯುನೆಸ್ಕೋ ಇತ್ತೀಚಿನ ಸಮೀಕ್ಷೆಯ ವರದಿಯನ್ನು ತೋರಿಸಿದೆ.
ಪ್ರಾತಿನಿಧಿ ಚಿತ್ರ
ಪ್ರಾತಿನಿಧಿ ಚಿತ್ರ
Updated on

ಬೆಂಗಳೂರು: ಕರ್ನಾಟಕ ಮತ್ತು ಮಹಾರಾಷ್ಟ್ರಗಳಲ್ಲಿನ ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಕುಟುಂಬಗಳಲ್ಲಿ ಅತಿ ಹೆಚ್ಚು ಮುಟ್ಟಿನ ಆರೋಗ್ಯ ಮತ್ತು ನೈರ್ಮಲ್ಯ ನಿರ್ವಹಣೆಗೆ ಸಂಬಂಧಿಸಿದ ಮೌಢ್ಯಗಳನ್ನು ಹೊಂದಿವೆ ಎಂದು ಯುನೆಸ್ಕೋ ಇತ್ತೀಚಿನ ಸಮೀಕ್ಷೆಯ ವರದಿಯನ್ನು ತೋರಿಸಿದೆ.

ಕರ್ನಾಟಕದ ಕೆಲವು ಸಮುದಾಯಗಳು ಇಂದಿಗೂ ಮಹಿಳೆಯರನ್ನು ಪ್ರತ್ಯೇಕಿಸುವ ಪದ್ಧತಿಯನ್ನು ಅನುಸರಿಸುತ್ತಿವೆ. ಅವರನ್ನು ಅಸ್ಪೃಶ್ಯರಂತೆ ನಡೆಸಿಕೊಳ್ಳಲಾಗುತ್ತದೆ ಮತ್ತು ಇತರ ಕುಟುಂಬದ ಸದಸ್ಯರೊಂದಿಗೆ ಊಟ ಮಾಡಲು ಸಹ ಅನುಮತಿಸುವುದಿಲ್ಲ. ಅಲ್ಲದೆ, ಮನೆಯೊಳಗೆ ಇರಲು ಕೂಡ ಅವಕಾಶವಿಲ್ಲ ಎಂದು ಸಮಗ್ರ ಶಿಕ್ಷಣ ಕರ್ನಾಟಕ, ಯೋಜನಾ ನಿರ್ದೇಶಕಿ ಬಿ.ಬಿ. ಕಾವೇರಿ ಹೇಳಿದರು.

2019 ರಲ್ಲಿ ಪ್ರಾರಂಭವಾದ ಯುನೆಸ್ಕೋ ಮತ್ತು ಪ್ರಾಕ್ಟರ್ ಮತ್ತು ಗ್ಯಾಂಬಲ್ (P&G) ವಿಸ್ಪರ್‌ನ #KeepGirlsinSchool ಅಭಿಯಾನವು 'ಸ್ಪಾಟ್‌ಲೈಟ್ ರೆಡ್' ಎಂಬ ಶೀರ್ಷಿಕೆಯಡಿ ಆರು ರಾಜ್ಯಗಳಲ್ಲಿ ಸಮೀಕ್ಷೆ ನಡೆಸಿತು. ಅವುಗಳೆಂದರೆ, ಕರ್ನಾಟಕ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಆಂಧ್ರ ಪ್ರದೇಶ, ಉತ್ತರ ಪ್ರದೇಶ ಮತ್ತು ಕೇಂದ್ರಾಡಳಿತ ಪ್ರದೇಶವಾದ ದೆಹಲಿಯಾಗಿದೆ.

ಸಮೀಕ್ಷೆಗೆ ಒಳಗಾದ ಒಟ್ಟು 1,800 ಜನರಲ್ಲಿ, ಕರ್ನಾಟಕದ ಗ್ರಾಮೀಣ ಭಾಗದ ಶೇ 33 ರಷ್ಟು ಹುಡುಗರು ಮುಟ್ಟಿನ ಕುರಿತು ತಪ್ಪು ಕಲ್ಪನೆಗಳನ್ನು ಹೊಂದಿದ್ದಾರೆ. ಮೌಢ್ಯ ಮತ್ತು ತಪ್ಪುಗ್ರಹಿಕೆಗಳಿಗೆ ಜಾತಿಯೂ ಕೂಡ ಪ್ರಮುಖ ಕಾರಣವಾಗಿದೆ ಎಂದು ಬಹಿರಂಗಪಡಿಸಿದೆ. 

'ಮಹಿಳೆಯರನ್ನು ದೇವಾಲಯಗಳಿಂದ ನಿರ್ಬಂಧಿಸುವುದು, ಧಾರ್ಮಿಕ ನೈವೇದ್ಯಗಳನ್ನು ಮುಟ್ಟದಿರುವುದು, ಅಡುಗೆ ಕೋಣೆ ಅಥವಾ ಮನೆಯಲ್ಲಿ ಪೂಜಾ ಕೊಠಡಿಗಳನ್ನು ಪ್ರವೇಶಿಸಬಾರದು' ಎನ್ನುವ ಕಟ್ಟುಪಾಡುಗಳು ಇಂದಿಗೂ ಚಾಲ್ತಿಯಲ್ಲಿವೆ ಎಂದು ಯುನೆಸ್ಕೋದ ಲಿಂಗ ತಜ್ಞ ಡಾ ಹುಮಾ ಮಸೂದ್ ಹೇಳಿದ್ದಾರೆ. 

ಸರ್ಕಾರವು ಕೈಗೊಂಡ ಹಲವಾರು ಯೋಜನೆಗಳು ಮತ್ತು ಉಪಕ್ರಮಗಳು ಮುಟ್ಟಿಗೆ ಸಂಬಂಧಿಸಿದ ನಿಷೇಧವನ್ನು ತೊಡೆದುಹಾಕಲು ಸಹಾಯ ಮಾಡಿಲ್ಲ ಎಂದು ಸಂಶೋಧನೆಗಳು ತೋರಿಸಿವೆ.

ಹುಡುಗಿಯರಿಗೆ ಸ್ಯಾನಿಟರಿ ಪ್ಯಾಡ್‌ಗಳನ್ನು ವಿತರಿಸುವ ಉದ್ದೇಶದಿಂದ ಜಾರಿಗೆ ತರಲಾಗಿದ್ದ ಕರ್ನಾಟಕದ ಶುಚಿ ಯೋಜನೆಯನ್ನು 2020 ರಲ್ಲಿ ನಿಲ್ಲಿಸಲಾಯಿತು ಮತ್ತು ನಂತರ ಯೋಜನೆಯನ್ನು ಶುರು ಮಾಡಿಲ್ಲ ಎಂದು ವರದಿಯು ಗಮನಸೆಳೆದಿದೆ. ಈ ಯೋಜನೆ ಜಾರಿಯಾಗದಿರುವುದಕ್ಕೆ ಪ್ಯಾಡ್‌ಗಳ ಕಳಪೆ ಗುಣಮಟ್ಟ ಮತ್ತು ಇಲಾಖೆ ವರ್ಗಾವಣೆಯಂತಹ ಅನೇಕ ಕಾರಣಗಳನ್ನು ರಾಜ್ಯ ಸರ್ಕಾರ ನೀಡಿದೆ. 

ಮಹಿಳೆಯರು ಋತುಚಕ್ರದ ಬಗ್ಗೆ ಮಾತನಾಡಲು ಪ್ರಾರಂಭಿಸಲು ಇದು ಸಕಾಲವಾಗಿದೆ. ಭಾರತದಲ್ಲಿ ಮುಟ್ಟಿನ ಆರೋಗ್ಯವನ್ನು ಸಾಮಾನ್ಯ ಎಂದು ಪರಿಗಣಿಸುವುದನ್ನು ಕ್ರಾಂತಿಗೊಳಿಸಬಹುದಾದ ಏಕೈಕ ಮಾರ್ಗವೆಂದರೆ ಎಲ್ಲಾ ಲಿಂಗಗಳು ಮುಟ್ಟನ್ನು ಸಾಮಾನ್ಯವಾಗಿ ಸ್ವೀಕರಿಸುವುದಾಗಿದೆ ಎಂದು ತಜ್ಞರು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com