ಚುನಾವಣಾ ನೀತಿ ಸಂಹಿತೆ ಜಾರಿಯಿಂದ ನಾಗರೀಕ ಕಾಮಗಾರಿಗಳಿಗೆ ಅಡ್ಡಿಯಿಲ್ಲ: ಬಿಬಿಎಂಪಿ ಸ್ಪಷ್ಟನೆ

ಚುನಾವಣಾ ನೀತಿ ಸಂಹಿತೆ ನಾಗರೀಕ ಕಾಮಗಾರಿಗಳಿಗೆ ತಡೆಯೊಡ್ಡಲಿದೆ ಎಂಬ ಮಾತುಗಳನ್ನು ಬಿಬಿಎಂಪಿ ಉನ್ನತಾಧಿಕಾರಿಗಳು ನಿರಾಕರಿಸಿದ್ದು, ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್ ಕನ್ಸಲ್ಟೆಂಟ್ (ಪಿಎಂಸಿ) ಎಂಬ ವ್ಯವಸ್ಥೆ ಅಡಿಯಲ್ಲಿ ಮಳೆನೀರು ಚರಂಡಿಗಳು, ಮೇಲ್ಸೇತುವೆಗಳು ಸೇರಿದಂತೆ 6,000 ಕೋಟಿ ರೂಪಾಯಿಗಳ ಕಾಮಗಾರಿಗಳನ್ನು ಕಾರ್ಯಗತಗೊಳಿಸಲಾಗುವುದು ಎಂದು ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ಚುನಾವಣಾ ನೀತಿ ಸಂಹಿತೆ ನಾಗರೀಕ ಕಾಮಗಾರಿಗಳಿಗೆ ತಡೆಯೊಡ್ಡಲಿದೆ ಎಂಬ ಮಾತುಗಳನ್ನು ಬಿಬಿಎಂಪಿ ಉನ್ನತಾಧಿಕಾರಿಗಳು ನಿರಾಕರಿಸಿದ್ದು, ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್ ಕನ್ಸಲ್ಟೆಂಟ್ (ಪಿಎಂಸಿ) ಎಂಬ ವ್ಯವಸ್ಥೆ ಅಡಿಯಲ್ಲಿ ಮಳೆನೀರು ಚರಂಡಿಗಳು, ಮೇಲ್ಸೇತುವೆಗಳು ಸೇರಿದಂತೆ 6,000 ಕೋಟಿ ರೂಪಾಯಿಗಳ ಕಾಮಗಾರಿಗಳನ್ನು ಕಾರ್ಯಗತಗೊಳಿಸಲಾಗುವುದು ಎಂದು ಹೇಳಿದ್ದಾರೆ.

ಇಂಜಿನಿಯರ್-ಇನ್-ಚೀಫ್ ಬಿಎಸ್ ಪ್ರಹ್ಲಾದ್ ಅವರು ಮಾತನಾಡಿ, “ಅಮೃತ್ ನಗರೋತ್ಥಾನ ಅಡಿಯಲ್ಲಿ ಕಾಮಗಾರಿ ಕಾರ್ಯಗಳು ನಡೆಯುತ್ತಿವೆ. ಕಾಲಮಿತಿಯಲ್ಲಿ ಈ ಕಾರ್ಯಗಳು ಪೂರ್ಣಗೊಳಿಸಬೇಕಾಗಿರುವುದರಿಂದ ಇಂಜಿನಿಯರಿಂಗ್ ವಿಭಾಗದಿಂದ ಹಲವು ಕಾಮಗಾರಿಗಳು ಕಾರ್ಯಗತಗೊಳ್ಳುತ್ತಿವೆ. ಪಿಎಂಸಿ ಎಂಬ ವ್ಯವಸ್ಥೆ ಅಡಿಯಲ್ಲಿ ಬಿಬಿಎಂಪಿ ಆ ಕಾರ್ಯಗಳನ್ನು  ನಡೆಸುತ್ತಿದೆ. ಈ ವ್ಯವಸ್ಥೆಯಡಿಯಲ್ಲಿ ಟೆಂಡರ್ ಪಡೆದ ಗುತ್ತಿಗೆದಾರನು ಸಮಯಕ್ಕೆ ಸರಿಯಾಗಿ ಕಾಮಗಾರಿಯನ್ನು ಪೂರ್ಣಗೊಳಿಸಬೇಕಾಗುತ್ತದೆ. ಈ ಸಂದರ್ಭದಲ್ಲಿ ಬಿಬಿಎಂಪಿ ಅಧಿಕಾರಿಗಳು ತಪಾಸಣೆ ಮತ್ತು ಗುಣಮಟ್ಟದ ಪರಿಶೀಲನೆಗಳನ್ನು ಕೈಗೊಳ್ಳಬೇಕಾಗುತ್ತದೆ ಎಂದು ಹೇಳಿದ್ದಾರೆ.

ನಗರೋತ್ಥಾನ ಅನುದಾನದಲ್ಲಿ 1500 ಕೋಟಿ ರೂ.ಗಳಲ್ಲಿ ಪಾಲಿಕೆ ರಸ್ತೆ ಡಾಂಬರೀಕರಣವನ್ನು ಆರಂಭಿಸಿದ್ದು, 477 ಕಿ.ಮೀ ರಸ್ತೆ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ ಎಂದು ತಿಳಿಸಿದ್ದಾರೆ.

ಕಳೆದ ಸೆಪ್ಟೆಂಬರ್‌ನಲ್ಲಿ ಉಂಟಾದ ಪ್ರವಾಹ ಪರಿಸ್ಥಿತಿ ಮರುಕಳಿಸದಂತೆ ತಡೆಯಲು ಮಳೆ ನೀರು ಚರಂಡಿ ದುರಸ್ತಿ ಕಾಮಗಾರಿಯನ್ನೂ ಕೈಗೆತ್ತಿಕೊಳ್ಳಲಾಗಿದೆ. ಅದೇ ರೀತಿ ಯಲಹಂಕದಲ್ಲಿ 170 ಕೋಟಿ ರೂ.ಗಳ ಎಲಿವೇಟೆಡ್ ಕಾರಿಡಾರ್ ಕಾಮಗಾರಿಯೂ ನಡೆಯುತ್ತಿದ್ದು, ಇದರ ಶೇ.40ರಷ್ಟು ಕಾಮಗಾರಿ ಮುಗಿದಿದೆ ಎಂದು ಮಾಹಿತಿ ನೀಡಿದ್ದಾರೆ.

ಪ್ರಸ್ತುತ ಪ್ರಗತಿಯಲ್ಲಿರುವ ಯಾವುದೇ ಕಾಮಗಾರಿಯನ್ನು ಸ್ಥಗಿತಗೊಳಿಸುವಂತಿಲ್ಲ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಸೂಚನೆ ನೀಡಿದ್ದಾರೆಂದು ಪ್ರಹ್ಲಾದ್ ಅವರು ಹೇಳಿದ್ದಾರೆ.

ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದೆ. ಆದರೆ, ಪ್ರಗತಿಯಲ್ಲಿರುವ ಕಾಮಾಗಾರಿಗಳಿಗೆ ಇದು ಅಡ್ಡಿಯುಂಟು ಮಾಡುವುದಿಲ್ಲ. ಹಿಂದಿನ ಚುನಾವಣೆಯಂತೆ ಈ ಬಾರಿ ಬಿಬಿಎಂಪಿ ಚುನಾವಣಾ ಕರ್ತವ್ಯಕ್ಕೆ ಇಂಜಿನಿಯರಿಂಗ್ ವಿಭಾಗದ ಹಲವು ಅಧಿಕಾರಿಗಳನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಳಿಸಿಲ್ಲ.

ಮಳೆಗಾಲ ಸಮೀಪಿಸುತ್ತಿರುವ ಕಾರಣ ಮಳೆನೀರು ಚರಂಡಿ ಕಾಮಗಾರಿಗೆ ಆದ್ಯತೆ ನೀಡಲಾಗಿದೆ. ಹಾಗಾಗಿ, ಈ ಬಾರಿ ಎಂಜಿನಿಯರ್‌ಗಳಿಗೆ ಕೆಲಸದ ಹೊರೆಯನ್ನು ಹೆಚ್ಚಿಸಲಾಗಿಲ್ಲ. ಚುನಾವಣೆ ಸಂಬಂಧಿತ ಕೆಲಸಗಳಿಗೆ ಕೆಎಎಸ್‌ ಅಧಿಕಾರಿಗಳನ್ನು ನಿಯೋಜನೆಗೊಳಿಸಲಾಗಿದೆ ಎಂದು ಗಿರಿನಾಥ್ ಅವರು ಮಾಹಿತಿ ನೀಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com