ಬೆಂಗಳೂರು: ಆನೇಕಲ್‌ನಲ್ಲಿ ಪೊಲೀಸರಿಂದ ಹಲ್ಲೆ ಆರೋಪ, ಕ್ರಮಕ್ಕೆ ಇಬ್ಬರು ವಿದ್ಯಾರ್ಥಿಗಳ ಆಗ್ರಹ

ಶನಿವಾರ ಸಂಜೆ 7.30ರ ಸುಮಾರಿಗೆ ಆನೇಕಲ್‌ನ ಚಂದಾಪುರ ವೃತ್ತದ ಬಳಿ ಪೊಲೀಸರು ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಇಬ್ಬರು ಕಾಲೇಜು ವಿದ್ಯಾರ್ಥಿಗಳು ಆರೋಪಿಸಿದ್ದು, ಅವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಶನಿವಾರ ಸಂಜೆ 7.30ರ ಸುಮಾರಿಗೆ ಆನೇಕಲ್‌ನ ಚಂದಾಪುರ ವೃತ್ತದ ಬಳಿ ಪೊಲೀಸರು ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಇಬ್ಬರು ಕಾಲೇಜು ವಿದ್ಯಾರ್ಥಿಗಳು ಆರೋಪಿಸಿದ್ದು, ಅವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ. 

ದೂರುದಾರರಲ್ಲಿ ಒಬ್ಬರಾದ ಸಾಯಿರಾಜ್ ನಟರಾಜ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಈ ಕುರಿತು ಅಳಲು ತೋಡಿಕೊಂಡಿದ್ದು, ಅವರ ದೇಹದ ಮೇಲಿನ ಗಾಯಗಳನ್ನು ಬಹಿರಂಗಪಡಿಸುವ ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ. ಪೊಲೀಸರು ಲಾಠಿಯಿಂದ ಹೊಡೆದಿದ್ದಾರೆ ಎಂದು ಆರೋಪಿಸಲಾಗಿದೆ.

ವಾರದ ಮಾರುಕಟ್ಟೆ ಹಾಗೂ ಚುನಾವಣಾ ವಿಜಯೋತ್ಸವದ ಮೆರವಣಿಗೆಯಿಂದ ಉಂಟಾದ ವಾಹನ ದಟ್ಟಣೆಯ ನಡುವೆಯೇ ಚಂದಾಪುರ ಸರ್ಕಲ್ ಬಳಿ ತಮ್ಮ ಸಂಬಂಧಿಯೊಂದಿಗೆ ಬೈಕ್‌ನಲ್ಲಿ ತೆರಳುತ್ತಿದ್ದೆ ಎಂದು ನಟರಾಜ್ ತಿಳಿಸಿದ್ದಾರೆ. 

'ನನ್ನ ಸೋದರಸಂಬಂಧಿ ನನಗೆ ಬಲ ತಿರುವು ತೆಗೆದುಕೊಳ್ಳುವಂತೆ ನಿರ್ದೇಶಿಸುತ್ತಿದ್ದನು. ಏಕೆಂದರೆ ನಾನು ನೇರವಾಗಿ ಹೋಗುತ್ತಿದ್ದೆ. ಇದನ್ನು ಪೊಲೀಸರು ತಪ್ಪಾಗಿ ಗ್ರಹಿಸಿದರು ಮತ್ತು ನಮ್ಮನ್ನು ತಡೆದರು. 5-6 ಪೊಲೀಸರು ಇದ್ದ ಬೂತ್ ಬಳಿಗೆ ನಮ್ಮನ್ನು ಕರೆದೊಯ್ದರು. ಅಲ್ಲಿದ್ದವರು ಕುಡಿದು ತಂಬಾಕು ಜಗಿಯುತ್ತಿದ್ದರು. ನಮ್ಮ ಕಾನೂನುಬಾಹಿರ ಬಂಧನವನ್ನು ನಾವು ಪ್ರಶ್ನಿಸಿದಾಗ, ಅವರು ನಮ್ಮನ್ನು ಹೊಡೆಯಲು ಪ್ರಾರಂಭಿಸಿದರು' ಎಂದು ನಟರಾಜ್ ತಮ್ಮ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ನಮ್ಮನ್ನು ಬಿಡುವ ಮುನ್ನ ಅವಾಚ್ಯ ಶಬ್ದಗಳಿಂದ ನಿಂದಿಸಿ, ಲಾಠಿ ಪ್ರಹಾರ ಮಾಡಿ, ಕಪಾಳಮೋಕ್ಷ ಮಾಡಿದ್ದಾರೆ. ಇದನ್ನು ಪ್ರಶ್ನಿಸಲು ಅವರು ತಮ್ಮ ಪೋಷಕರು ಮತ್ತು ಸಂಬಂಧಿಕರೊಂದಿಗೆ ಹಿಂತಿರುಗಿದಾಗ, ಅವರಿಗೂ ಕಿರುಕುಳ ನೀಡಲಾಯಿತು ಮತ್ತು ಅವರನ್ನು ಕಂಬಿಗಳ ಹಿಂದೆ ಹಾಕುವುದಾಗಿ ಬೆದರಿಕೆ ಹಾಕಲಾಯಿತು ಎಂದು ನಟರಾಜ್ ಪೊಲೀಸರಿಗೆ ಟ್ಯಾಗ್ ಮಾಡಿ, ಕ್ರಮಕ್ಕೆ ಆಗ್ರಹಿಸಿದ್ದಾರೆ. 

ಅವರ ಟ್ವೀಟ್ ವೈರಲ್ ಆದ ನಂತರ ಸೂರ್ಯನಗರ ಪೊಲೀಸರು ಅವರನ್ನು ಸಂಪರ್ಕಿಸಿ ಸಮಸ್ಯೆಯನ್ನು ಬಗೆಹರಿಸುವುದಾಗಿ ಭರವಸೆ ನೀಡಿದ್ದಾರೆ.

ಬೆಂಗಳೂರು ಗ್ರಾಮಾಂತರ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಟಿಎನ್‌ಐಇ ಜೊತೆ ಮಾತನಾಡಿ, 'ನನಗೆ ಬಂದ ಮಾಹಿತಿಯ ಪ್ರಕಾರ, ವಿದ್ಯಾರ್ಥಿಗಳು ಕುಡಿದು ಕರ್ತವ್ಯದಲ್ಲಿದ್ದ ಪೊಲೀಸರ ವಿರುದ್ಧ ಅಸಭ್ಯ ಭಾಷೆ ಬಳಸಿದ್ದಾರೆ. ದು ಸಿಬ್ಬಂದಿಯನ್ನು ಪ್ರಚೋದಿಸಿ ವಾಗ್ವಾದಕ್ಕೆ ಕಾರಣವಾಯಿತು. ಸೋಮವಾರ ವಿದ್ಯಾರ್ಥಿಗಳನ್ನು ವಿಚಾರಣೆಗೊಳಪಡಿಸಲಿದ್ದು, ನಂತರ ಯಾರ ತಪ್ಪಾಗಿದೆ ಎಂಬ ಬಗ್ಗೆ ಸ್ಪಷ್ಟನೆ ಸಿಗಲಿದೆ. ನಾವು ಇನ್ನೂ ಪ್ರಕರಣ ದಾಖಲಿಸಿಕೊಂಡಿಲ್ಲ' ಎಂದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com