ಬೆಂಗಳೂರು: ಡೇಟಿಂಗ್‌ ಆ್ಯಪ್‌ ಜಾಲಕ್ಕೆ ಸಿಲುಕಿ ಲಕ್ಷಾಂತರ ರೂಪಾಯಿ ಕಳೆದುಕೊಂಡ ಟೆಕ್ಕಿ!

ಡೇಟಿಂಗ್​ ಆ್ಯಪ್'ನಲ್ಲಿ ಪರಿಚಯವಾಗಿದ್ದ ವ್ಯಕ್ತಿ ಸಾಫ್ಟ್​ವೇರ್ ಇಂಜಿಯರ್ ಒಬ್ಬಳಿಗೆ ಲಕ್ಷಾಂತರ ರೂಪಾಯಿ ವಂಚನೆ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಡೇಟಿಂಗ್​ ಆ್ಯಪ್'ನಲ್ಲಿ ಪರಿಚಯವಾಗಿದ್ದ ವ್ಯಕ್ತಿ ಸಾಫ್ಟ್​ವೇರ್ ಇಂಜಿಯರ್ ಒಬ್ಬಳಿಗೆ ಲಕ್ಷಾಂತರ ರೂಪಾಯಿ ವಂಚನೆ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

ಡೇಟಿಂಗ್​ ಆ್ಯಪ್'ನಲ್ಲಿ ಪರಿಚಯವಾಗಿದ್ದ ವ್ಯಕ್ತಿಯೊಂದಿಗೆ ಟೆಕ್ಕಿ ಹಲವು ದಿನಗಳ ಕಾಲ ಚಾಟ್ ಮಾಡಿದ್ದು, ನಂತರ ಇಬ್ಬರೂ ಸಂಪಿಗೆಹಳ್ಳಿಯ ಹೋಟೆಲ್ ನಲ್ಲಿ ಭೇಟಿಯಾಗಿದ್ದಾರೆ. ಈ ವೇಳೆ ಆರೋಪಿ ನಕಲಿ ಹೆಸರು, ವೃತ್ತಿ ಹಾಗೂ ವಾಸ್ತವ್ಯದ ಸ್ಥಳವನ್ನು ನೀಡಿದ್ದಾನೆ. ನಂತರ ಮದುವೆಯಾಗುವ ಭರವಸೆ ನೀಡಿ ಆಕೆಯೊಂದಿಗೆ ಹತ್ತಿರವಾಗಿದ್ದಾನೆ. ಈ ಸಂದರ್ಭದಲ್ಲಿ ತಾಯಿಗೆ ಅನಾರೋಗ್ಯ ಎದುರಾಗಿದ್ದು, ಯುಕೆಯಲ್ಲಿ ಚಿಕಿತ್ಸೆ ಕೊಡಿಸಬೇಕೆಂದು ಹೇಳಿ ಮಹಿಳೆಯಿಂದ ಹಣ ಪಡೆದುಕೊಂಡಿದ್ದಾನೆ.

ಹಣ ಪಡೆದುಕೊಂಡ ಬಳಿಕ ಆರೋಪಿ ಯುವತಿಯೊಂದಿಗಿನ ಸಂಪರ್ಕ ಕಡಿದುಕೊಂಡಿದ್ದಾನೆ. ಬಳಿಕ ಯುವತಿ ಆತನಿಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪತ್ತೆ ಮಾಡಿದಾಗ ಆತ ನೀಡಿರುವ ಮಾಹಿತಿಗಳೆಲ್ಲವೂ ನಕಲಿ ಎಂಬುದು ತಿಳಿದುಬಂದಿದೆ. ಅಲ್ಲದೆ, ಆತನ ತಾಯಿ ಕಾಶ್ಮೀರದಲ್ಲಿದ್ದು, ಆತ ತನ್ನ ಪತ್ನಿಯೊಂದಿಗೆ ಬಾಗಲೂರಿನಲ್ಲಿರುವುದಾಗಿ ತಿಳಿದುಬಂದಿದೆ.

“ಕಳೆದ ವರ್ಷ ಜುಲೈನಲ್ಲಿ ಡೇಟಿಂಗ್ ಆ್ಯಪ್ ಮೂಲಕ ಅನಿರುದ್ಧ ಎಂದು ಪರಿಚಯಿಸಿಗೊಂಡಿದ್ದ. ನಂತರ ನಮ್ಮಿಬ್ಬರ ಭೇಟಿಯಾಗಿತ್ತು. ಜನವರಿ 20 ರಂದು, ಲಂಡನ್‌ನಲ್ಲಿ ತಾಯಿಗೆ ಚಿಕಿತ್ಸೆಗಾಗಿ 1 ಲಕ್ಷ ರೂ ಕೇಳಿದ್ದನು. ಫೆಬ್ರವರಿ 27 ರಂದು ತಾಯಿಯ ನಿಧನದ ಬಗ್ಗೆ ಮಾಹಿತಿ ನೀಡಿದ್ದ. ಇದಾದ ಬಳಿಕ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಹುಡುಕಾಟ ನಡೆಸಿದ ಬಳಿಕ ಆತನ ಸಹೋದರ ಸಂಪರ್ಕಕ್ಕೆ ಸಿಕ್ಕಿದ್ದ. ಈ ವೇಳೆ ಆತ ಮಾಹಿತಿ ನೀಡಿದ್ದ ಎಂದು ಯುವತಿ ಅಧಿಕಾರಿಗಳೊಂದಿಗೆ ಮಾಹಿತಿ ನೀಡಿದ್ದಾರೆ.

ಆರೋಪಿಯನ್ನು ಮುದಾಸಿರ್ ಎಂದು ಗುರ್ತಿಸಲಾಗಿದೆ. ಯುವತಿ ಭುವನೇಶ್ವರಿನಗರದ ನಿವಾಸಿಯಾಗಿದ್ದು, ಆರೋಪಿ ಹಣ ಹಿಂತಿರುಗಿಸದ ಹಿನ್ನೆಲೆಯಲ್ಲಿ ಪೊಲೀಸರಿಗೆ ದೂರು ನೀಡಿದ್ದಾಳೆ. ದೂರಿನಲ್ಲಿ ಇಬ್ಬರ ನಡುವೆ ದೈಹಿಕ ಸಂಬಂಧ ಇರುವುದಾಗಿಯೂ ಹೇಳಿಕೊಂಡಿದ್ದಾಳೆಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ಸಂಬಂಧ ಅಮೃತಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದು, ವಿಚಾರಣೆಗೊಳಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com