Leopard in Bengaluru: ಬೆಂಗಳೂರಿನಲ್ಲಿ ಚಿರತೆ ಹಾವಳಿ: ವಿಶೇಷ ಕಾರ್ಯಪಡೆಗೆ ಫೆ.1ರಿಂದ 500ಕ್ಕೂ ಹೆಚ್ಚು ದೂರು

ಇತ್ತೀಚಿನ ದಿನಗಳಲ್ಲಿ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಚಿರತೆಗಳ ಹಾವಳಿ ಹೆಚ್ಚಾಗಿದ್ದು, ಚಿರತೆ ದಾಳಿ ವಿಶೇಷ ಕಾರ್ಯಪಡೆಗೆ ಇದೇ ಫೆಬ್ರವರಿಯಿಂದ ಈ ವರೆಗೂ ಸುಮಾರು 500 ದೂರುಗಳು ಬಂದಿವೆ ಎಂದು ತಿಳಿದುಬಂದಿದೆ.
ಬೆಂಗಳೂರಿನಲ್ಲಿ ಚಿರತೆ ಹಾವಳಿ (ಸಂಗ್ರಹ ಚಿತ್ರ)
ಬೆಂಗಳೂರಿನಲ್ಲಿ ಚಿರತೆ ಹಾವಳಿ (ಸಂಗ್ರಹ ಚಿತ್ರ)
Updated on

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಚಿರತೆಗಳ ಹಾವಳಿ ಹೆಚ್ಚಾಗಿದ್ದು, ಚಿರತೆ ದಾಳಿ ವಿಶೇಷ ಕಾರ್ಯಪಡೆಗೆ ಇದೇ ಫೆಬ್ರವರಿಯಿಂದ ಈ ವರೆಗೂ ಸುಮಾರು 500 ದೂರುಗಳು ಬಂದಿವೆ ಎಂದು ತಿಳಿದುಬಂದಿದೆ.

ಅರಣ್ಯ ಇಲಾಖೆಯ ಆನೆ ಕಾರ್ಯಪಡೆಯು ಖೆಡ್ಡಾ ಕಾರ್ಯಾಚರಣೆಗೆ (ಆನೆ ಸೆರೆಹಿಡಿಯುವಿಕೆಗೆ) ಹೆಸರುವಾಸಿಯಾಗಿದೆ ಈ ಬಗ್ಗೆ ಮಾಹಿತಿ ಇದೆ. ಆದರೆ ಮೈಸೂರಿನ ಟಿ ನರಸೀಪುರದಲ್ಲಿ ನಾಲ್ಕು ಮಾನವ ಸಾವುಗಳು ವರದಿಯಾದ ನಂತರ ಚಿರತೆಗಳನ್ನು ಹಿಡಿಯಲು ಜನವರಿಯಲ್ಲಿ ಚಿರತೆ ಕಾರ್ಯಪಡೆ (ಎಲ್‌ಟಿಎಫ್) ರಚಿಸಲಾಗಿತ್ತು. ಅರಣ್ಯ ಅಧಿಕಾರಿಗಳು ಮತ್ತು ಗುತ್ತಿಗೆ ಸಿಬ್ಬಂದಿ ಸೇರಿದಂತೆ 46 ಸದಸ್ಯರ ತಂಡದೊಂದಿಗೆ ಈ ತಂಡ ರಚಿಸಲಾಗಿದ್ದು, ಫೆಬ್ರವರಿ 1 ರಿಂದ ಇಲ್ಲಿಯವರೆಗೆ ಈ ಕಾರ್ಯಪಡೆಗೆ ಸುಮಾರು 500 ದೂರುಗಳು ಬಂದಿವೆ. 

ಚಿರತೆಗಳನ್ನು ಸೆರೆಹಿಡಿಯಲು ಮತ್ತು ರಕ್ಷಿಸಲು ಎಲ್‌ಟಿಎಫ್ 500 ಕ್ಕೂ ಹೆಚ್ಚು ಕರೆಗಳನ್ನು ಸ್ವೀಕರಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದು, ಮೈಸೂರು ಮತ್ತು ಮಂಡ್ಯದಲ್ಲಿ ರಚನೆಯಾದ ನಂತರ ತಂಡವು 46 ಚಿರತೆಗಳನ್ನು ರಕ್ಷಿಸಿ, ಪುನರ್ವಸತಿ ಕೇಂದ್ರಗಳಿಗೆ ಸ್ಥಳಾಂತರಿಸಿದೆ. ಅವುಗಳಲ್ಲಿ 15 ಮರಿಗಳಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಅವರ ಆಡಳಿತಾವಧಿಯಲ್ಲಿ ರಚನೆಯಾದ ತಂಡವನ್ನು ಮೈಸೂರು ಮತ್ತು ಮಂಡ್ಯ ವ್ಯಾಪ್ತಿಗೆ ಪರಿಚಯಿಸಲಾಯಿತು, ಆದರೆ ಕೆಲವೇ ತಿಂಗಳುಗಳಲ್ಲಿ ರಾಮನಗರ, ಭದ್ರಾವತಿ, ಚಾಮರಾಜಪೇಟೆ ಮತ್ತು ಈಗ ಬೆಂಗಳೂರಿನಿಂದಲೂ ಕರೆಗಳು ಬಂದಿವೆ. ಹೀಗಾಗಿ ತಂಡವು ವ್ಯಾಪ್ತಿಯ ಅರಣ್ಯಾಧಿಕಾರಿಗಳು, ಬೀಟ್ ಸಿಬ್ಬಂದಿಗಳು, ಉಪ ವಲಯ ಅರಣ್ಯಾಧಿಕಾರಿಗಳು ಮತ್ತು ಇತರ ಸಿಬ್ಬಂದಿಗಳ ಸಂಖ್ಯೆಯನ್ನು ಹೆಚ್ಚಿಸಿಕೊಂಡಿದೆ.ಅರಣ್ಯ ಇಲಾಖೆಯ (ಪ್ರಾದೇಶಿಕ ಮತ್ತು ವನ್ಯಜೀವಿ) ನ್ಯಾಯವ್ಯಾಪ್ತಿಯ ತಂಡಗಳು ನಿಯಮಿತ ಕರ್ತವ್ಯಗಳನ್ನು ಹೊಂದಿದ್ದರೆ, ವಿಶೇಷ ತಂಡವು ಬೆಂಗಳೂರಿನಲ್ಲಿರುವಂತೆ ರಕ್ಷಣಾ ಕಾರ್ಯಾಚರಣೆಗಳನ್ನು ತೆಗೆದುಕೊಳ್ಳುತ್ತದೆ. 

ಮೈಸೂರು ಉಪ ಅರಣ್ಯ ಸಂರಕ್ಷಣಾಧಿಕಾರಿ, ಎಲ್‌ಟಿಎಫ್ ಮುಖ್ಯಸ್ಥ ಸೌರಭ್ ಕುಮಾರ್ ಟಿಎನ್‌ಐಇಗೆ ಈ ಬಗ್ಗೆ ಮಾಹಿತಿ ನೀಡಿದ್ದು, ತಂಡವು ವಿಶೇಷ ಜಿಪಿಎಸ್ ಕ್ಯಾಮೆರಾಗಳು, ನೈಟ್ ವಿಷನ್ ಡಿವೈಸ್ ಗಳು, ಗನ್‌ಗಳು ಸೇರಿದಂತೆ ಚಿರತೆಗಳನ್ನು ಸೆರೆಹಿಡಿಯಲು ವಿಶೇಷ ಸಾಧನಗಳನ್ನು ಹೊಂದಿದೆ. ತಂಡವು ಮೊದಲು ಭೂಪ್ರದೇಶ ಮತ್ತು ನೆಲದ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ನ್ಯಾಯವ್ಯಾಪ್ತಿಯ ಸಿಬ್ಬಂದಿಯೊಂದಿಗೆ ಕಾರ್ಯದಲ್ಲಿ ತೊಡಗಿಸಿಕೊಂಡಿದೆ ಎಂದು ಅವರು ಹೇಳಿದರು. ಚಿರತೆ ಸೆರೆ ಸಿಕ್ಕ ನಂತರ ಸಂಪೂರ್ಣ ವೈದ್ಯಕೀಯ ಪರೀಕ್ಷೆ ಮತ್ತು ದೇಹವನ್ನು ಸ್ಕ್ಯಾನ್ ಮಾಡಲಾಗುತ್ತದೆ, ನಂತರ ಚಿರತೆ ಚಲನವಲನವನ್ನು ಪತ್ತೆಹಚ್ಚಲು ಮೈಕ್ರೋಚಿಪ್ ಅನ್ನು ಸೇರಿಸಲಾಗುತ್ತದೆ ಎಂದು ಕುಮಾರ್ ಹೇಳಿದರು. 

ಅರಣ್ಯ ಸಿಬ್ಬಂದಿಗಳು ಚಿರತೆ ಗುರುತು ಮತ್ತು ಕ್ಯಾಮರಾ ಟ್ರ್ಯಾಪ್‌ನಲ್ಲಿ ಕಿವಿ ಕೂಡ ಗುರುತಿಸಲಾಗಿದೆ. ಸೆರೆಹಿಡಿಯಲಾದ ಎಲ್ಲಾ ಚಿರತೆಗಳ ಡೇಟಾಬೇಸ್ ಅನ್ನು ನಿರ್ವಹಿಸಲಾಗುತ್ತಿದೆ. "ನಾವು ಅದೇ ವಿಧಾನವನ್ನು ಅನುಸರಿಸಲು ಮತ್ತು ಡೇಟಾವನ್ನು ಹಂಚಿಕೊಳ್ಳಲು ಇತರ ಅಧಿಕಾರಿಗಳನ್ನು ಕೇಳುತ್ತಿದ್ದೇವೆ. ನಾವು ಹುಲಿಗಳಿಗೆ ಇರುವಂತೆಯೇ ಸೆರೆಹಿಡಿಯಲಾದ ಪ್ರತೀ ಚಿರತೆಗೆ ವಿಶಿಷ್ಟವಾದ ಐಡಿಗಳನ್ನು ಸಹ ರಚಿಸುತ್ತಿದ್ದೇವೆ.

ಚಿರತೆಗಳ ಸೆರೆಹಿಡಿಯುವಿಕೆ ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನು ಕೈಗೊಳ್ಳಲು ತಂಡವು ತರಬೇತಿ ಪಡೆದಿದೆ ಮತ್ತು ಪ್ರತಿ ಪ್ರಕರಣದಲ್ಲಿ ಹೆಚ್ಚುವರಿ ಕೌಶಲ್ಯಗಳನ್ನು ಪಡೆದುಕೊಳ್ಳುತ್ತಿದೆ. ತಂಡವು ಟ್ರ್ಯಾಕಿಂಗ್, ಬೋನ್ ಗಳನ್ನು ಹೊಂದಿಸುವುದು ಮತ್ತು ಕ್ಯಾಮೆರಾ ಟ್ರ್ಯಾಪ್‌ಗಳಲ್ಲಿ ತರಬೇತಿ ಪಡೆದಿದೆ ಎಂದು ಎಲ್‌ಟಿಎಫ್ ಸದಸ್ಯರೊಬ್ಬರು ಹೇಳಿದರು.
 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com