ಮಹಿಳೆ ಆತ್ಮಹತ್ಯೆ: ಗೋವಾದಲ್ಲಿ ಪಾರ್ಟಿ ಮಾಡಿ ಮುಂಬೈನತ್ತ ಹೊರಟಿದ್ದ ಪತಿ ಸೇರಿ ಐವರ ಬಂಧನ

ವರದಕ್ಷಿಣೆ  ಕಿರುಕುಳದಿಂದ ಎಂಬಿಎ ಪದವೀಧರೆ ಐಶ್ವರ್ಯಾ (26)  ಆತ್ಮಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಗೋವಿಂದರಾಜನಗರ ಠಾಣೆ ಪೊಲೀಸರು, ಗೋವಾದಲ್ಲಿ ಪಾರ್ಟಿ ಮಾಡಿ, ಮುಂಬೈನತ್ತ ಹೊರಟ್ಟಿದ್ದ ಪತಿ ಸೇರಿದಂತೆ ಐವರನ್ನು ಬಂಧಿಸಿದ್ದಾರೆ. 
ಐಶ್ವರ್ಯಾ  ಪತಿ ರಾಜೇಶ್
ಐಶ್ವರ್ಯಾ ಪತಿ ರಾಜೇಶ್
Updated on

ಬೆಂಗಳೂರು: ವರದಕ್ಷಿಣೆ  ಕಿರುಕುಳದಿಂದ ಎಂಬಿಎ ಪದವೀಧರೆ ಐಶ್ವರ್ಯಾ (26)  ಆತ್ಮಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಗೋವಿಂದರಾಜನಗರ ಠಾಣೆ ಪೊಲೀಸರು, ಗೋವಾದಲ್ಲಿ ಪಾರ್ಟಿ ಮಾಡಿ, ಮುಂಬೈನತ್ತ ಹೊರಟ್ಟಿದ್ದ ಪತಿ ಸೇರಿದಂತೆ ಐವರನ್ನು ಬಂಧಿಸಿದ್ದಾರೆ. 

ಐಶ್ವರ್ಯಾ ಆತ್ಮಹತ್ಯೆ ಮಾಡಿಕೊಂಡ ದಿನ ಆಕೆಯ ಪತಿ ರಾಜೇಶ್ ಹಾಗೂ ಅತ್ತೆ- ಮಾವ, ಮೈದುನ, ಆತನ ಪತ್ನಿ  ಗೋವಾಕ್ಕೆ ಹೋಗಿ ಎರಡು ವಿಭಿನ್ನ ರೆಸಾರ್ಟ್‌ಗಳಲ್ಲಿ ತಂಗಿದ್ದರು. ಕ್ಯಾಸಿನೊದಾ ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು. ಆತ್ಮಹತ್ಯೆಯ ಬಗ್ಗೆ ಪೊಲೀಸ್ ತನಿಖೆ ಮೇಲೆ ಕಣ್ಣಿಟ್ಟಿದ್ದ ಅವರು, ಪೊಲೀಸರು ತಮ್ಮನ್ನು ಬಂಧಿಸಲು ಗೋವಾಕ್ಕೆ ಬರುತ್ತಿದ್ದಾರೆ ಎಂದು ಅರಿತು ಮುಂಬೈ ಕಡೆಗೆ ಹೊರಟಿದ್ದಾಗ ಬಂಧಿಸಲಾಗಿದೆ. ಇನ್ನು ನಾಲ್ವರು ಆರೋಪಿಗಳ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ. ಈ ಪೈಕಿ ಇಬ್ಬರು ವಿದೇಶದಲ್ಲಿ ನೆಲೆಸಿದ್ದಾರೆ.

ಐಶ್ವರ್ಯಾ 2018 ರಲ್ಲಿ ರಾಜೇಶ್ ಅವರನ್ನು ವಿವಾಹವಾದರು, ದಂಪತಿಗಳು ವಿದೇಶದಲ್ಲಿ ಓದುತ್ತಿದ್ದ ಸಮಯದಿಂದಲೂ ಪರಸ್ಪರ ಪರಿಚಿತರಾಗಿದ್ದರು. ಐಶ್ವರ್ಯಾ ಚಂದ್ರಾ ಲೇಔಟ್‌ನಲ್ಲಿ ಖ್ಯಾತ ಐಸ್‌ಕ್ರೀಂ ಕಂಪನಿಯೊಂದರ ಮಾಲೀಕರಾದ ಗಿರಿಯಪ್ಪ ಗೌಡ ಮತ್ತು ಸೀತಮ್ಮ ಅವರೊಂದಿಗೆ ಬಂಧಿತರಾದ ಆಕೆಯ ಮೈದುನ ವಿಜಯ್ ಮತ್ತು ಆತನ ಪತ್ನಿ ತಸ್ಮಯಿ ಅವರೊಂದಿಗೆ ವಾಸವಾಗಿದ್ದರು.

ಐಶ್ವರ್ಯಾಗೆ ವರದಕ್ಷಿಣೆ ಬೇಡಿಕೆಯಿಟ್ಟ ನಂತರ ದಂಪತಿಗಳು ಅಪಾರ್ಟ್ ಮೆಂಟ್ ಗೆ ಸ್ಥಳಾಂತರಗೊಂಡಿದ್ದರು ಎಂದು ವರದಿಯಾಗಿದೆ. ವಿಜಯ್ ಮತ್ತು ತಸ್ಮಯಿ ಅವರ ಸೋಶಿಯಲ್ ಮೀಡಿಯಾ ಫೋಸ್ಟ್ ಆಧರಿಸಿ, ಐಶ್ವರ್ಯಾಳನ್ನು ಹತ್ಯೆ ಮಾಡಿದ್ದಾರೆ ಎಂದು ಅವರ ತಾಯಿ ಉಷಾ ಎಸ್ ಸಲ್ಲಿಸಿರುವ ದೂರಿನಲ್ಲಿ ತಿಳಿಸಿದ್ದಾರೆ.

ಕಾರ್ಪೊರೇಟ್ ಸಂಸ್ಥೆಯೊಂದರಲ್ಲಿ ಹಿರಿಯ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದ ಐಶ್ವರ್ಯಾ ಅವರನ್ನು ಕೆಲಸ ಬಿಡುವಂತೆ ನಾಲ್ಕು ತಿಂಗಳ ಹಿಂದೆ ಆಕೆಯ ಅತ್ತೆ-ಮಾವ ಒತ್ತಾಯಿಸಿದ್ದರು ಎಂದು ತನಿಖಾಧಿಕಾರಿ ತಿಳಿಸಿದ್ದಾರೆ.

ವರದಕ್ಷಿಣೆ ಬೇಡಿಕೆ ಮತ್ತು ಕಿರುಕುಳ ಆರೋಪದಿಂದ  20 ದಿನಗಳ ಹಿಂದೆ ವಿಜಯನಗರದಲ್ಲಿರುವ ತನ್ನ ತಾಯಿಯ ಮನೆಗೆ ಮರಳಿದ ಐಶ್ವರ್ಯಾ ನೇಣಿಗೆ ಶರಣಾಗಿದ್ದಾಳೆ. ಆಕೆಯ ಕೊಠಡಿಯಲ್ಲಿ ನಾಲ್ಕು ಪುಟಗಳ ಡೆತ್ ನೋಟ್ ಪತ್ತೆಯಾಗಿದ್ದು, ಅದರಲ್ಲಿಪ್ರಸ್ತುತ ವಿದೇಶದಲ್ಲಿರುವ ಆಕೆಯ ತಂದೆಯ ಚಿಕ್ಕಪ್ಪ ಮತ್ತು ಚಿಕ್ಕಮ್ಮನ ಹೆಸರು ಸೇರಿದಂತೆ ಒಂಬತ್ತು ಕುಟುಂಬ ಸದಸ್ಯರನ್ನು ಆರೋಪಿಗಳನ್ನಾಗಿ ಹೆಸರಿಸಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com