ಬೆಂಗಳೂರು: ಕನ್ನಡ-ತಮಿಳು ಹಾಡಿಗಾಗಿ ಸ್ನೇಹಿತರ ನಡುವೆ ನಡೆದ ಜಗಳ ಕೊಲೆಯಲ್ಲಿ ಅಂತ್ಯ

ಜಾತ್ರೆಯೊಂದರಲ್ಲಿ ಕನ್ನಡ, ತಮಿಳು ಹಾಡುಗಳನ್ನು ಹಾಕುವ ವಿಚಾರವಾಗಿ ಸ್ನೇಹಿತರ ನಡುವೆ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ,
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಜಾತ್ರೆಯೊಂದರಲ್ಲಿ ಕನ್ನಡ, ತಮಿಳು ಹಾಡುಗಳನ್ನು ಹಾಕುವ ವಿಚಾರವಾಗಿ ಸ್ನೇಹಿತರ ನಡುವೆ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ,

ಹಳೇ ಬಾಗಲೂರು ಲೇಔಟ್ ನಿವಾಸಿ ಪ್ರವೀಣ್ (26) ಮೃತ ಯುವಕನಾಗಿದ್ದಾನೆ. ಹಳೇ ಬಾಗಲೂರು ಲೇಔಟ್ ನಿವಾಸಿಯಾಗಿದ್ದ ಪ್ರವೀಣ್ ಲಿಂಗರಾಜಪುರ ಜಾತ್ರೆಯಲ್ಲಿ ತನ್ನ ಸ್ನೇಹಿತರಾದ ಸುಂದರ್, ಆರ್ಮುಗಂ ಮತ್ತು ಪ್ರಭು ಅವರೊಂದಿಗೆ ಭಾಗಿಯಾಗಿದ್ದ. ಈ ವೇಳೆ ಕನ್ನಡ ಮತ್ತು ತಮಿಳು ಹಾಡು ಹಾಕುವ ವಿಚಾರವಾಗಿ ಪ್ರವೀಣ್ ಸ್ನೇಹಿತರೊಂದಿಗೆ ಜಗಳ ಮಾಡಿದ್ದಾನೆ. ಕೋಪದ ಭರದಲ್ಲಿ ಸ್ನೇಹಿತ ಪ್ರಭು ಪ್ರವೀಣ್ ಮೇಲೆ ಹೆಲ್ಮೆಟ್‌ನಿಂದ ಹಲ್ಲೆ ನಡೆಸಿದ್ದಾನೆ. ದಾಳಿಯಲ್ಲಿ ಪ್ರವೀಣ್ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಸಾವನ್ನಪ್ಪಿದ್ದಾನೆ.

ಬುಧವಾರ ನಸುಕಿನ 1.30ರ ಸುಮಾರಿಗೆ ಬಾಣಸವಾಡಿ ಬಳಿಯ ಲಿಂಗರಾಜಪುರ ಜಾತ್ರೆಯಲ್ಲಿ ಡಿಜೆಯಲ್ಲಿ ಯಾವ ಹಾಡು ಹಾಕಬೇಕೆಂದು ಪ್ರವೀಣ್ ಮತ್ತು ಆತನ ಸ್ನೇಹಿತನ ನಡುವೆ ಜಗಳವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೋಪದಲ್ಲಿ ಪ್ರವೀಣ್ ತನ್ನ ಸ್ನೇಹಿತ ಪ್ರಭು ಮೇಲೆ ಹೆಲ್ಮೆಟ್ ಬಳಸಿ ಹಲ್ಲೆ ಮಾಡಿದ್ದ. ಬಳಿಕ ಪ್ರಭು ಅದೇ ಹೆಲ್ಮೆಟ್ ಬಳಸಿ ಮತ್ತೆ ಪ್ರವೀಣ್ ತಲೆಗೆ ಹೊಡೆದಿದ್ದಾನೆ. ತಲೆಗೆ ಪೆಟ್ಟಾಗಿದ್ದರಿಂದ ಪ್ರವೀಣ್ ಅವರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಆತ ಮೃತಪಟ್ಟಿದ್ದಾನೆ.

ಪ್ರವೀಣ್ ಡೆಲಿವರಿ ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡುತ್ತಿದ್ದು, ಕೆಲ ವರ್ಷಗಳ ಹಿಂದೆ ಟ್ರಾಫಿಕ್ ಪೋಲೀಸ್ ಜೊತೆ ವಾಗ್ವಾದಕ್ಕಿಳಿದ ಬಳಿಕ ಆತನ ವಿರುದ್ಧ ಪ್ರಕರಣ ದಾಖಲಾಗಿತ್ತು.

ಘಟನೆ ಸಂಬಂಧ ಬಾಣಸವಾಡಿ ಪೊಲೀಸರು ಮೂವರೂ ಆರೋಪಿಗಳನ್ನು ಬಂಧಿಸಿದ್ದು, ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com