ಬೆಂಗಳೂರು: ಲಂಚ ಸ್ವೀಕರಿಸುವಾಗ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಯುನಾನಿ ಮೆಡಿಸಿನ್‌ ಅಧಿಕಾರಿ ಸಿಬಿಐ ಬಲೆಗೆ

ಬಾಕಿ ಬಿಲ್‌ಗಳನ್ನು ಕ್ಲಿಯರ್ ಮಾಡಲು ಕ್ಯಾಂಟೀನ್ ಮಾಲೀಕರಿಂದ 1.10 ಲಕ್ಷ ರೂಪಾಯಿ ಲಂಚ ಕೇಳಿದ ಆರೋಪದ ಮೇಲೆ ಬೆಂಗಳೂರು ಮೂಲದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಯುನಾನಿ ಮೆಡಿಸಿನ್‌ನ ಆಡಳಿತ ಅಧಿಕಾರಿಯನ್ನು ಸಿಬಿಐ ಬಂಧಿಸಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಬಾಕಿ ಬಿಲ್‌ಗಳನ್ನು ಕ್ಲಿಯರ್ ಮಾಡಲು ಕ್ಯಾಂಟೀನ್ ಮಾಲೀಕರಿಂದ 1.10 ಲಕ್ಷ ರೂಪಾಯಿ ಲಂಚ ಕೇಳಿದ ಆರೋಪದ ಮೇಲೆ ಬೆಂಗಳೂರು ಮೂಲದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಯುನಾನಿ ಮೆಡಿಸಿನ್‌ನ ಆಡಳಿತ ಅಧಿಕಾರಿಯನ್ನು ಸಿಬಿಐ ಬಂಧಿಸಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.

ನದೀಮ್ ಎ ಸಿದ್ದಿಕಿ ಅವರು ತಾವು ಬೇಡಿಕೆಯಿಟ್ಟಿದ್ದ ಒಟ್ಟು ಲಂಚದ ಭಾಗವಾಗಿ 50,000 ರೂ. ಗಳನ್ನು ಪಡೆಯುತ್ತಿದ್ದಾಗ ಅವರನ್ನು ಬಂಧಿಸಲಾಯಿತು ಎಂದು ಅವರು ಹೇಳಿದರು.

ತನಿಖಾ ಸಂಸ್ಥೆಯ ಪ್ರಕಾರ, ದೂರುದಾರರು ಯುನಾನಿ ಆಸ್ಪತ್ರೆಯ ರೋಗಿಗಳಿಗೆ ಆಹಾರವನ್ನು ಪೂರೈಸುತ್ತಿದ್ದರು. ಇದಕ್ಕಾಗಿ ಬೆಂಗಳೂರಿನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಯುನಾನಿ ಮೆಡಿಸಿನ್ (NIUM) ಅದರ ಮಾಲೀಕರ ಖಾತೆಗೆ ತಿಂಗಳಿನ ಆಧಾರದ ಮೇಲೆ ಹಣ ಪಾವತಿ ಮಾಡಬೇಕಿತ್ತು.

ಮುಂದಿನ ಎರಡು ತಿಂಗಳೊಳಗೆ ಕ್ಯಾಂಟೀನ್‌ನ ಗುತ್ತಿಗೆ ಅವಧಿ ಮುಗಿಯಲಿದ್ದು, ಎರಡು ತಿಂಗಳ 3 ಲಕ್ಷ ರೂ. ಬಿಲ್ ಅನ್ನು ಎನ್‌ಐಯುಎಂ ಪಾವತಿಸಬೇಕಿತ್ತು ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಈ ಬಿಲ್ ಅನ್ನು ತೆರವುಗೊಳಿಸಲು ಸಿದ್ದಿಕಿ ಅವರು ಮಾಲೀಕನಿಂದ 1.10 ಲಕ್ಷ ರೂ. ಲಂಚಕ್ಕೆ ಬೇಡಿಕೆಯಿಟ್ಟಿದ್ದರು. ಹೀಗಾಗಿ, ಕ್ಯಾಂಟೀನ್ ಮಾಲೀಕರು ಕೇಂದ್ರೀಯ ತನಿಖಾ ದಳವನ್ನು (ಸಿಬಿಐ) (ಸಿಬಿಐ) ಸಂಪರ್ಕಿಸಿದ್ದರು. ಪರಿಶೀಲನೆಯ ನಂತರ, ಸಿಬಿಐ ಬಲೆ ಬೀಸಿತ್ತು. 

'ದೂರುದಾರರಿಂದ 50,000 ರೂ. ಲಂಚವನ್ನು ಸ್ವೀಕರಿಸುವಾಗ ಸಿಬಿಐ, ಆರೋಪಿಯನ್ನು ರೆಡ್‌ಹ್ಯಾಂಡ್‌ ಆಗಿ ಹಿಡಿದಿದೆ. ಈ ವೇಳೆ ಕಚೇರಿಯಲ್ಲಿ ಶೋಧ ನಡೆಸಲಾಗಿದ್ದು, 2 ಲಕ್ಷ ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ' ಎಂದು ಸಂಸ್ಥೆಯ ವಕ್ತಾರರು ತಿಳಿಸಿದ್ದಾರೆ.

ಆರೋಪಿಯನ್ನು ಬೆಂಗಳೂರಿನ ಸಿಬಿಐ ಪ್ರಕರಣಗಳ ವಿಶೇಷ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ವಕ್ತಾರರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com