ಗಾಜಾ ಮೇಲೆ ಇಸ್ರೇಲ್ ದಾಳಿ: ಪ್ಯಾಲೆಸ್ಟೀನ್‌ ಪರ ಬೆಂಗಳೂರಿನಲ್ಲಿ ದಿಢೀರ್ ಪ್ರತಿಭಟನೆ

ಇಸ್ರೇಲ್-ಹಮಾಸ್ ನಡುವಿನ ಯುದ್ಧ ತೀವ್ರಗೊಂಡಿದ್ದು, ಈ ನಡುವಲ್ಲೇ ಪ್ಯಾಲೆಸ್ತೀನ್ ಮೇಲೆ ಇಸ್ರೇಲ್ ನಡೆಸುತ್ತಿರುವ ದಾಳಿಯನ್ನು ಭಾರತ ಖಂಡಿಸಬೇಕೆಂದು ಒತ್ತಾಯಿಸಿ ನಗರದ ಎಂ.ಜಿ.ರಸ್ತೆಯಲ್ಲಿ ಸೋಮವಾರ ಪ್ರತಿಭಟನೆಗಳು ನಡೆದವು.
ಪ್ಯಾಲೆಸ್ತೀನ್'ಗೆ ಬೆಂಬಲ ವ್ಯಕ್ತಪಡಿಸಿ, ಪ್ರತಿಭಟಿಸುತ್ತಿರುವ ನಗರದ ಜನತೆ.
ಪ್ಯಾಲೆಸ್ತೀನ್'ಗೆ ಬೆಂಬಲ ವ್ಯಕ್ತಪಡಿಸಿ, ಪ್ರತಿಭಟಿಸುತ್ತಿರುವ ನಗರದ ಜನತೆ.

ಬೆಂಗಳೂರು: ಇಸ್ರೇಲ್-ಹಮಾಸ್ ನಡುವಿನ ಯುದ್ಧ ತೀವ್ರಗೊಂಡಿದ್ದು, ಈ ನಡುವಲ್ಲೇ ಪ್ಯಾಲೆಸ್ತೀನ್ ಮೇಲೆ ಇಸ್ರೇಲ್ ನಡೆಸುತ್ತಿರುವ ದಾಳಿಯನ್ನು ಭಾರತ ಖಂಡಿಸಬೇಕೆಂದು ಒತ್ತಾಯಿಸಿ ನಗರದ ಎಂ.ಜಿ.ರಸ್ತೆಯಲ್ಲಿ ಸೋಮವಾರ ಪ್ರತಿಭಟನೆಗಳು ನಡೆದವು.

ಬಹುತ್ವ ಕರ್ನಾಟಕ ಹಾಗೂ ಅಖಿಲ ಭಾರತೀಯ ವಿದ್ಯಾರ್ಥಿ ಸಂಘಟನೆ ಕಾರ್ಯಕರ್ತರು ದಿಢೀರ್ ಪ್ರತಿಟನೆ ನಡೆಸಿದರು.

ಬ್ರಿಗೇಡ್ ರಸ್ತೆಯ ಕಾವೇರಿ ಎಂಪೋರಿಯಂ ವೃತ್ತದಿಂದ ಎಂ.ಜಿರಸ್ತೆಯ ಮೆಟ್ರೋ ನಿಲ್ದಾಣದ ಪಾದಚಾರಿ ಮಾರ್ಹದವರೆಗೆ ಮಾನವ ಸರಪಳಿ ರಚಿಸಿಕೊಂಡ ಪ್ರತಿಭಟನಾಕಾರರು ಪ್ಯಾಲೆಸ್ಟೀನ್ ಪರ ಘೋಷಣೆ ಕೂಗಿದರು. ಬೈಕ್'ಗೆ ಪ್ಯಾಲೆಸ್ಟೀನ್ ಧ್ವಜ ಕಟ್ಟಿಕೊಂಡು, ಬಾಯಿಗೆ ಕಪ್ಪು ಪಟ್ಟಿ ಧರಿಸಿಕೊಂಡು ಇಂಡಿಯಾ ವಿತ್ ಪ್ಯಾಲೆಸ್ತೀನ್, ಪ್ಯಾಲೆಸ್ತೀನ್, ಸಂತ್ರಸ್ತರ ಪರ ಧ್ವನಿ ಎತ್ತೋಣ ಎಂಬ ಘೋಷಣಾ ಫಲಕಗಳನ್ನು ಪ್ರದರ್ಶಿಸಿದರು.

ಭಾರತವು ಇಸ್ರೇಲ್'ಗೆ ಘೋಷಿಸಿರುವ ಬೆಂಬಲವನ್ನು ವಾಪಸ್ ಪಡೆದು ಪ್ಯಾಲೆಸ್ತೀನ್ ಬೆಂಬಲ ನೀಡಬೇಕು. ಇಸ್ರೇಲ್ ನಲ್ಲಿ ಮುಗ್ಧ ಜನತೆಯ ಮೇಲೆ ದಬ್ಬಾಳಿಕೆ ನಡೆಸುತ್ತಿದೆ. ಹಿಂದೆ ಮಹಾತ್ಮಾ ಗಾಂಧೀಜಿ, ನೆಲ್ಸನ್ ಮಂಡೇಲಾ, ನೆಹರು ಸೇರಿ ಪ್ರಮುಖರು ಪ್ಯಾಲೆಸ್ತಾನ್ ಪರ ಧ್ವನಿ ಎತ್ತಿದ್ದರು. ಆದರೆ, ಪ್ರಧಾನಿ ಮೋದಿ ಹಾಗೂ ಇತರೆ ದೇಶಗಳ ಮುಖಂಡರು ಇಸ್ರೇಲ್'ಗೆ ಬೆಂಬಲ ಘೋಷಿಸಿರುವುದು ಖಂಡನೀಯ ಎಂದರು.

ಜಾಗತಿಕ ನಾಗರೀಕರಾಗಿ ನಾವು ಪ್ಯಾಲೆಸ್ತೀನ್'ಗೆ ಬೆಂಬಲ ನೀಡಬೇಕು, ಹಮಾಸ್ ಹಾಗೂ ಪ್ಯಾಲೆಸ್ತೀನ್ ನಡುವಿನ ವ್ಯತ್ಯಾಯವನ್ನು ತಿಳಿಯುವುದು ಮುಖ್ಯವಾಗಿದೆ. ಇಸ್ರೇಲ್ ಪ್ರತಿಕ್ರಿಯೆಗೆ ಹಮಾಸ್ ಪ್ರತಿಕ್ರಿಯೆ ನೀಡಿದೆ. ಅದು ಎಲ್ಲಾ ಪ್ಯಾಲೆಸ್ತೀನ್'ನ್ನು ಪ್ರತಿನಿಧಿಸುವುದಿಲ್ಲ. ಇಸ್ರೇಲ್ ಗೂ ಮೊದಲಿನ ಇತಿಹಾಸವನ್ನು ಪ್ಯಾಲೆಸ್ತೀನ್ ಹೊಂದಿದೆ. ದೀರ್ಘಕಾಲದಿಂದಲೂ ನೋವನ್ನು ಸಹಿಸಿಕೊಂಡಿದೆ. ಮಾಧ್ಯಮಗಳ ವರದಿಗಳೂ ಇಸ್ರೇಲ್ ಪರವಾಗಿದೆ. ಇದು ತಪ್ಪುಗ್ರಹಿಕೆಗೆ ಕಾರಣವಾಗುತ್ತದೆ. ಕಳೆದ 10 ದಿನಗಳಲ್ಲಿ 700ಕ್ಕೂ ಹೆಚ್ಚು ಮಕ್ಕಳ ಮೇಲೆ ಅಮಾನವೀಯತೆ ಮೆರೆಯಲಾಗಿದೆ. ಈ ದಬ್ಬಾಳಿಕೆಯ ವಿರುದ್ಧ ನಾವು ನಿಂತಿದ್ದೇವೆ. ಇಸ್ರೇಲ್ ದಬ್ಬಾಳಿಕೆಯನ್ನು ಪ್ಯಾಲೆಸ್ತೀನ್ ಎದುರಿಸುತ್ತಿದ್ದಾರೆ ಎಂದು ದುಬೈನ ವಿದ್ಯಾರ್ಥಿ ರುಕ್ಕಯ್ಯ ಐಮೆನ್ ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com