ಬೆಂಗಳೂರು: ಚೀಟಿ ಹೆಸರಲ್ಲಿ ಕೋಟಿ, ಕೋಟಿ ವಂಚನೆ; ಒಂದೇ ಕುಟುಂಬದ 8 ಮಂದಿ ವಿರುದ್ಧ ಎಫ್ಐಆರ್

ಚೀಟಿ ವ್ಯವಹಾರ ನಡೆಸಿ ಕೋಟ್ಯಾಂತರ ರೂಪಾಯಿಯನ್ನು ತೆಗೆದುಕೊಂಡು ಇಡೀ ಕುಟುಂಬವೇ ಪರಾರಿ ಆಗಿರುವ ಘಟನೆ ಚಿಕ್ಕಬಾಣವರದ ಕೆರೆಗುಡ್ಡದಹಳ್ಳಿಯಲ್ಲಿ ನಡೆದಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಚೀಟಿ ವ್ಯವಹಾರ ನಡೆಸಿ ಕೋಟ್ಯಾಂತರ ರೂಪಾಯಿಯನ್ನು ತೆಗೆದುಕೊಂಡು ಇಡೀ ಕುಟುಂಬವೇ ಪರಾರಿ ಆಗಿರುವ ಘಟನೆ ಚಿಕ್ಕಬಾಣವರದ ಕೆರೆಗುಡ್ಡದಹಳ್ಳಿಯಲ್ಲಿ ನಡೆದಿದೆ. 

ಈ ಸಂಬಂಧ ವಿಶ್ವನಾಥ್ ಹಾಗೂ ಈತನ ಸಹೋದರ ಮಂಜುನಾಥ್ ಸೇರಿ ಪತ್ನಿ ವನಿತಾ, ಮುನಿಸ್ವಾಮಿ, ಲಕ್ಷ್ಮಿ ನಾರಾಯಣ್ ಸೇರಿ ಒಂದೇ ಕುಟುಂಬದ 8 ಜನರ ಮೇಲೆ ಎಫ್‌ಐಆರ್‌ ದಾಖಲಾಗಿದೆ.

ಉದ್ಯಮಿಗಳು, ವೈದ್ಯರು ಮತ್ತು ವಕೀಲರನ್ನು ಟಾರ್ಗೆಟ್ ಮಾಡಿದ್ದ ಕುಟುಂಬ ಸ್ವಂತ ಐಶಾರಾಮಿ ಮನೆ, ವಾಣಿಜ್ಯ ಮಳಿಗೆಯನ್ನು ತೋರಿಸಿ ಚೀಟಿ ಹಾಕಿಸಿಕೊಂಡು ಬರೋಬ್ಬರಿ 6 ಕೋಟಿಗೂ ಹೆಚ್ಚಿನ ಹಣ ವಂಚನೆ ಮಾಡಿದ್ದಾರೆ. ಸುಮಾರು 10 ವರ್ಷಗಳಿಂದ ಲೈಸನ್ಸ್‌ ಪಡೆದು ಕಮಿಷನ್‌ ಆಧಾರದ ಮೇಲೆ ಚೀಟಿ ನಡೆಸುತ್ತಿರುವುದಾಗಿ ವಿಶ್ವನಾಥ್ ಎಲ್ಲರನ್ನೂ ನಂಬಿಸಿದ್ದನು.

ಇದೀಗ ಚೀಟಿ ಹಾಕಿದ ಜನರು ವಿಶ್ವನಾಥ್ ಮನೆ ಬಳಿ ಬಂದು ಗೋಳಾಟ ನಡೆಸಿದ್ದಾರೆ. ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com