ಅವಮಾನದ ಹೆಸರಿನಲ್ಲಿ 'ಮರ್ಯಾದಾ ಹತ್ಯೆ': ಈ ಹೇಸಿಗೆ ಕೃತ್ಯಕ್ಕೆ ಶಿಕ್ಷೆಯಿಲ್ಲವೇ; ಕಾನೂನು ಹೇಳುವುದೇನು?

ವಿಭಿನ್ನ ಜಾತಿಯವರು, ಸಗೋತ್ರದವರು ಹಾಗೂ ಒಂದೇ ಗ್ರಾಮದ ಯುವಕ-ಯುವತಿ ಪ್ರೀತಿಸಿ ಮದುವೆಯಾಗುವುದಕ್ಕೆ ಅಡ್ಡಿಪಡಿಸಿ ಅವರನ್ನು ದಾರುಣವಾಗಿ ಹತ್ಯೆ ಮಾಡುವ ಕ್ರೂರ ಪ್ರವೃತ್ತಿಯೇ ಮರ್ಯಾದಾ ಹತ್ಯೆ,
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ವಿಭಿನ್ನ ಜಾತಿಯವರು, ಸಗೋತ್ರದವರು ಹಾಗೂ ಒಂದೇ ಗ್ರಾಮದ ಯುವಕ-ಯುವತಿ ಪ್ರೀತಿಸಿ ಮದುವೆಯಾಗುವುದಕ್ಕೆ ಅಡ್ಡಿಪಡಿಸಿ ಅವರನ್ನು ದಾರುಣವಾಗಿ ಹತ್ಯೆ ಮಾಡುವ ಕ್ರೂರ ಪ್ರವೃತ್ತಿಯೇ ಮರ್ಯಾದಾ ಹತ್ಯೆ. ಇದು ಅತ್ಯಾಧುನಿಕ ಕಾಲದಲ್ಲೂ ನಡೆಯುತ್ತಿರುವುದು ವಿಪರ್ಯಾಸ.

ಮರ್ಯಾದಾ ಹತ್ಯೆ' - ಇದನ್ನು 'ಅವಮಾನದ ಹತ್ಯೆ' ಎಂದೂ ಕರೆಯುತ್ತಾರೆ.  ಇದು ಗೌರವವನ್ನು ರಕ್ಷಿಸಲು ಹೆಚ್ಚಾಗಿ ಸಂತ್ರಸ್ತರ ಸ್ವಂತ ಕುಟುಂಬದ ಸದಸ್ಯರಿಂದ ನಡೆಯುವ ಕೊಲೆಯಾಗಿದೆ. ಅಂತರ್-ಧರ್ಮೀಯ ವಿವಾಹಗಳು ಅಥವಾ ಸಂಬಂಧಗಳು. ಹೆಚ್ಚಿನ ಸಂದರ್ಭಗಳಲ್ಲಿ, ಬಲಿಪಶು ಮಹಿಳೆಯಾಗಿದ್ದರೂ, ಹಲವಾರು ಪ್ರಕರಣಗಳಲ್ಲಿ ಪುರುಷ/ಹುಡುಗ ಕೂಡ ಗುರಿಯಾಗುತ್ತಾರೆ. ಕೆಲವು ಸಂದರ್ಭಗಳಲ್ಲಿ ಬಲಿಪಶುಗಳು ಸಲಿಂಗಕಾಮಿಗಳು ಸೇರಿರುತ್ತಾರೆ.

ಉತ್ತರ ಪ್ರದೇಶ, ಬಿಹಾರ, ರಾಜಸ್ಥಾನ, ಹರಿಯಾಣ, ಜಾರ್ಖಂಡ್ ಮತ್ತು ಪಂಜಾಬ್‌ನಂತಹ ಉತ್ತರ ಭಾರತದ ಕೆಲವು ರಾಜ್ಯಗಳಲ್ಲಿ ಮರ್ಯಾದಾ ಹತ್ಯೆ ಪ್ರಕರಣಗಳು ಹೆಚ್ಚು ಪ್ರಚಲಿತವಾಗಿದ್ದರೂ, ಕರ್ನಾಟಕ ಸೇರಿದಂತೆ ದಕ್ಷಿಣದಲ್ಲಿಯೂ ಇದು ಇತ್ತೀಚೆಗೆ ಹೆಚ್ಚು ವರದಿಯಾಗುತ್ತಿದೆ.

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ದ ಇತ್ತೀಚಿನ ಮಾಹಿತಿಯ ಪ್ರಕಾರ, ಭಾರತದಲ್ಲಿ ವರದಿಯಾದ ಮರ್ಯಾದಾ ಹತ್ಯೆಗಳ ಸಂಖ್ಯೆ 2019 ಮತ್ತು 2020 ರಲ್ಲಿ ತಲಾ 25 ಮತ್ತು 2021 ರಲ್ಲಿ 33 ಆಗಿದೆ. ಆದರೆ ಈ ಅಂಕಿಅಂಶಗಳು ವರದಿಯಾದವುಗಳನ್ನು ಆಧರಿಸಿವೆ , ಕೆಲವು ಪ್ರಕರಣಗಳು ಉಲ್ಲೇಖವಾಗಿರುವುದಿಲ್ಲ, ಹೀಗಾಗಿ ಮರ್ಯಾದಾ ಹತ್ಯೆ ಪ್ರಕರಣದ ಸಂಖ್ಯೆ ಹೆಚ್ಚುತ್ತಿವೆ.

ಮಂಡ್ಯ, ಕೋಲಾರ, ತುಮಕೂರು ಸೇರಿದಂತೆ ಉತ್ತರ ಕರ್ನಾಟಕದ ಭಾಗಗಳಲ್ಲಿ ಮರ್ಯಾದಾ ಹತ್ಯೆಗಳು ನಡೆಯುತ್ತಿವೆ. ಅಕ್ಟೋಬರ್ 2022 ರಿಂದ ಇಲ್ಲಿಯವರೆಗೆ, ರಾಜ್ಯದಲ್ಲಿ ಕನಿಷ್ಠ ಏಳು ಭಯಾನಕ ಪ್ರಕರಣಗಳು ವರದಿಯಾಗಿವೆ. ಕರ್ನಾಟಕದಲ್ಲಿ ಮರ್ಯಾದಾ ಹತ್ಯೆ ಹೊಸದಲ್ಲ, ಇದು 12ನೇ ಶತಮಾನದ ಸಮಾಜ ಸುಧಾರಕ ಬಸವಣ್ಣನ ಕಾಲದಲ್ಲಿಯೂ ನಡೆಯುತ್ತಿತ್ತು.

ಅಂತರ್ಜಾತಿ ವಿವಾಹಗಳು ನಡೆದಾಗ 'ಎಳೆ ಹೂಟೆ' ಎಂಬ ಶಿಕ್ಷೆಯನ್ನು ನೀಡಲಾಗುತ್ತಿತ್ತು. ಅಂತರ್ ಜಾತಿ ವಿವಾಹದಲ್ಲಿ  ತೊಡಗಿಸಿಕೊಂಡವರನ್ನು ಕಟ್ಟಿಹಾಕಲಾಗುತ್ತಿತ್ತು. ಎಂದು ಹಿರಿಯ ವಕೀಲ ಕೆಬಿಕೆ ಸ್ವಾಮಿ ಹೇಳಿದ್ದಾರೆ. ಅಂತರ-ಜಾತಿ ಸಂಬಂಧ ಮಾಡಿದವರನ್ನು (ಹೆಚ್ಚಾಗಿ ಮಹಿಳೆಯರು ತಮ್ಮ ಜಾತಿಗಿಂತ 'ಕೆಳಗಿನ' ಜಾತಿಯ ಪುರುಷರನ್ನು ಮದುವೆಯಾಗುತ್ತಾರೆ) ಆನೆಯ ಕಾಲಿಗೆ ಕಟ್ಟಿ ಮತ್ತು ಆನೆಯನ್ನು ಪಟ್ಟಣದ ಸುತ್ತಲೂ ತಿರುಗುವಂತೆ ಮಾಡಿ,  ಸಂತ್ರಸ್ತರನ್ನು ಕೊಲ್ಲಲಾಗುತ್ತಿತ್ತು.

ಮರ್ಯಾದೆ ಹತ್ಯೆ ಎಂಬ ಕಾನೂನು ಪರಿಭಾಷೆ ಇಲ್ಲ, ಮತ್ತು ಅನೇಕ ಪ್ರಕರಣಗಳು ವರದಿಯಾಗದಿರಲು ಕಾರಣ ಇದು.  ಮರ್ಯಾದೆ ಹತ್ಯೆ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಕುಟುಂಬದ ಸದಸ್ಯರು ಅಪರಾದ ಎಸಗುತ್ತಿದ್ದರು. ಅಪರಾಧದಲ್ಲಿ ನೇರವಾಗಿ ಪಾಲ್ಗೊಳ್ಳದ ಕುಟುಂಬದ ಇತರ ಸದಸ್ಯರು ಅಪರಾಧದ ಬಗ್ಗೆ ತಿಳಿದಿದ್ದರೂ ಮುಚ್ಚಿಡಲು ಪ್ರಯತ್ನಿಸುತ್ತಾರೆ. ಅವರ ಆಲೋಚನೆಯು ಆರೋಪಿಗಳೊಂದಿಗೆ ಮಾನಸಿಕವಾಗಿ ಸಿಂಕ್ ಆಗಿರುತ್ತದೆ. ಅಂತಹ ಪ್ರಕರಣಗಳು ತಕ್ಷಣವೇ ಬಹಿರಂಗವಾಗಿ ಬರುವುದಿಲ್ಲ, ಆದರೆ ಪರಿಪೂರ್ಣ ಅಪರಾಧ ಎಂದು ಕರೆಯಲಾಗುವುದಿಲ್ಲ ಎಂದು ನಿವೃತ್ತ ಐಪಿಎಸ್ ಅಧಿಕಾರಿ ಮತ್ತು ಕರ್ನಾಟಕ ಪೊಲೀಸ್‌ನ ಮಾಜಿ ಡಿಜಿ ಮತ್ತು ಐಜಿಪಿ ಎಸ್‌ಟಿ ರಮೇಶ್ ತಿಳಿಸಿದ್ದಾರೆ.

ಹೆಚ್ಚಿನ ಪ್ರಕರಣಗಳಲ್ಲಿ ಅಪರಾಧಿಗಳು ಯಾವುದೇ ಅಪರಾಧ ಪ್ರಜ್ಞೆ ಪ್ರದರ್ಶಿಸುವುದಿಲ್ಲ, ಬದಲಿಗೆ, ಮರ್ಯಾದಾ ಹತ್ಯೆಗಳನ್ನು ಮಾಡುವುದು ಅವರಿಗೆ ಹೆಮ್ಮೆಯ ವಿಷಯವಾಗಿರುತ್ತದೆ. ತಮ್ಮ ಜಾತಿ, ಕುಲ ಅಥವಾ ಧರ್ಮದ ಗೌರವ ಮತ್ತು ಪ್ರತಿಷ್ಠೆಯನ್ನು ರಕ್ಷಿಸಲು ಅವರು ನಂಬಲರ್ಹವಾದದ್ದನ್ನು ಮಾಡಿದ್ದಾರೆ ಎಂದು ಅವರು ಭಾವಿಸುತ್ತಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಕುಲ, ಉಪಜಾತಿ, ಜಾತಿ ಅಥವಾ ಧರ್ಮದ ಗೌರವ ಮತ್ತು ಪ್ರತಿಷ್ಠೆಯನ್ನು ರಕ್ಷಿಸಲು ವಿದ್ಯಾವಂತ ಪೋಷಕರು ಮತ್ತು ಕುಟುಂಬದ ಸದಸ್ಯರೂ ಈ ಅಪರಾಧ ಮಾಡುತ್ತಾರೆ ಎಂದು ಬಳ್ಳಾರಿಯ ಸಾಮಾಜಿಕ ಕಾರ್ಯಕರ್ತ ಚಲ ವೆಂಕಟ ರೆಡ್ಡಿ ಹೇಳುತ್ತಾರೆ.

ಮರ್ಯಾದಾ ಹತ್ಯೆಯಲ್ಲಿ ಕುಟುಂಬದ 'ಶುದ್ಧತೆ'ಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ ಮತ್ತು ಒಂದು ನಿರ್ದಿಷ್ಟ ಸಾಮಾಜಿಕ ವಿಭಾಗಕ್ಕೆ ಸೇರಿದ ಭಾವನೆಯು 'ಗೌರವ ಹತ್ಯೆ' ರೂಪದಲ್ಲಿ ಪಿತೃಪ್ರಭುತ್ವದ ಅತ್ಯಂತ ಅಸಹ್ಯಕರ  ನಡೆಯಾಗಿದೆ.

ಮರ್ಯಾದಾ ಹತ್ಯೆಯ  ಸಮಾಜದಲ್ಲಿ ಅಸ್ತಿತ್ವದಲ್ಲಿರುವ ಸಂಕೀರ್ಣ ಸಾಮಾಜಿಕ-ಸಾಂಸ್ಕೃತಿಕ ವಿಭಾಗಗಳಿಗೆ ಮೂಲವಾಗಿದೆ. ಅನೇಕ ಸಂದರ್ಭಗಳಲ್ಲಿ, ಅದೇ ‘ಗೋತ್ರ’ದೊಳಗೆ ಮದುವೆಯಾಗುವವರೂ ಗುರಿಯಾಗುತ್ತಾರೆ, ಏಕೆಂದರೆ ಸಮುದಾಯಗಳು ಇದು ಅನೈತಿಕ ವಿವಾಹವೆಂದು ನಂಬುತ್ತಾರೆ.

ಅಂತರ್ಜಾತಿ ದಂಪತಿಗಳಿಗೆ ಹುಟ್ಟುವ ಮಕ್ಕಳಿಗೆ ಯಾವುದೇ ಗುರುತು ಇರುವುದಿಲ್ಲ. ಅವರನ್ನು ‘ಚಂಡಾಲ’ ಎಂಬ ಕೀಳರಿಮೆಯ ಹೆಸರುಗಳಿಂದ ಉಲ್ಲೇಖಿಸಲಾಗುತ್ತದೆ. ನಾವು ಈ ಬಗ್ಗೆ ಜಾಗೃತಿಯನ್ನು ತರಬೇಕಾಗಿದೆ ಎಂದು ಡಾ. ಕೊರಗ ಸಮುದಾಯದಿಂದ ಬಂದಿರುವ ಮಂಗಳೂರು ವಿಶ್ವವಿದ್ಯಾನಿಲಯದ ಸಮಾಜಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಸಬಿತಾ ಗುಂಡ್ಮಿ  ಅಭಿಪ್ರಾಯ ಪಟ್ಟಿದ್ದಾರೆ.

ಮರ್ಯಾದಾ ಹತ್ಯೆಯನ್ನು ನಿರ್ದಿಷ್ಟವಾಗಿ ಎದುರಿಸಲು ಯಾವುದೇ ಕಾನೂನು ಇಲ್ಲ. ಈ ಅಪರಾಧವನ್ನು 'ಕೊಲೆ' ಎಂದು ಹೇಳಲಾಗುತ್ತದೆ. ದುರದೃಷ್ಟವಶಾತ್, ಕಾನೂನು 'ಮರ್ಯಾದಾ ಹತ್ಯೆ'ಯನ್ನು ಕೊಲೆ ಎಂದು ನೋಡುತ್ತದೆ, ಒಂದು ನಿರ್ದಿಷ್ಟ ಮಟ್ಟದ ಸಾಮಾಜಿಕ ಬೆಂಬಲದೊಂದಿಗೆ ಅಮಾಯಕರನ್ನು ಕೊಲ್ಲುವ ದೊಡ್ಡ ಪಿತೂರಿಯಾಗಿದೆ.

ಹರಿಯಾಣದಲ್ಲಿ, ಇಂತಹ ಅಪರಾಧಗಳಿಗೆ ಖಾಪ್ ಪಂಚಾಯತ್‌ಗಳಂತಹ ಸಂಸ್ಥೆಗಳ ಆಶೀರ್ವಾದವಿದೆ, ಇದು 'ಮರ್ಯಾದಾ ಹತ್ಯೆಗಳಿಗೆ' ಸಂವಿಧಾನೇತರ ಬೆಂಬಲ ನೀಡುತ್ತದೆ. ಅವರು ಭಾರತೀಯ ಸಂವಿಧಾನದ 14 ಮತ್ತು 15 ನೇ ವಿಧಿಗಳನ್ನು ನಿರ್ಲಕ್ಷಿಸುತ್ತಾರೆ. ಸಂವಿಧಾನದ 19 ನೇ ವಿಧಿಯು ಸ್ವಾತಂತ್ರ್ಯದ ಹಕ್ಕನ್ನು ಒದಗಿಸುತ್ತದೆ, ಆದರೆ 21 ನೇ ವಿಧಿಯು ಬದುಕುವ ಹಕ್ಕನ್ನು ನೀಡುತ್ತದೆ, ಇದು ಗೌರವ ಹತ್ಯೆಗಳನ್ನು ನೇರವಾಗಿ ಕುಟುಂಬದ ಹಿರಿಯರ ಆಶೀರ್ವಾದದೊಂದಿಗೆ ಉಲ್ಲಂಘಿಸುತ್ತದೆ. ಇದು ವ್ಯಕ್ತಿಗಳು ಯಾವ ಜಾತಿ ಅಥವಾ ಧರ್ಮಕ್ಕೆ ಸೇರಿದವರಾಗಿದ್ದರೂ ಜೀವನ ಸಂಗಾತಿಯನ್ನು ಆಯ್ಕೆ ಮಾಡುವ ಹಕ್ಕುಗಳನ್ನು ಉಲ್ಲಂಘಿಸುತ್ತದೆ.

ಮರ್ಯಾದಾ ಹತ್ಯೆಗಳ ಕುರಿತು ವ್ಯವಹರಿಸುವ ಕಾನೂನಿನ ಕೊರತೆಯಿದೆ. ಈ ಅಪರಾಧಗಳನ್ನು 'ಕೊಲೆ'  ಎಂದಷ್ಚೇ ಪರಿಗಣಿಸಲಾಗುತ್ತಿದೆ.  ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್‌ಗಳ ಅಡಿ ವ್ಯಾಪ್ತಿಗೆ ಬರುತ್ತದೆ, 99-304 (ಕೊಲೆ ಮತ್ತು ಅಪರಾಧಿ ನರಹತ್ಯೆ), 107-11 (ಪ್ರಚೋದನೆ) ಮತ್ತು 120A ಮತ್ತು 120B ಅಡಿಯಲ್ಲಿ ಪ್ರಕರಣ ದಾಖಲಿಸಲಾಗುತ್ತಿದೆ. ಆದರೆ ಮರ್ಯಾದಾ ಹತ್ಯ ತಡೆಗಟ್ಟುವ ನಿಟ್ಟಿನಲ್ಲಿ ಪ್ರತ್ಯೇಕ ಕಾನೂನಿನ ಅವಶ್ಯಕತೆಯಿದೆ. ಕಟ್ಟುನಿಟ್ಟಿನ ಕಾನೂನು ಜಾರಿಯಾಗದ ಪರಿಣಾಮ 'ಮರ್ಯಾದಾ ಹತ್ಯೆ'ಗಳುಅವ್ಯಾಹತವಾಗಿ ಮುಂದುವರಿಯುತ್ತದೆ, ಇದು ಕೊಲೆಗಾರರಲ್ಲಿ ಅವರು ಸಂಬಂಧ ಹೊಂದಿರುವ ಕುಟುಂಬ, ಜಾತಿ ಅಥವಾ ಸಮುದಾಯದ "ಗೌರವವನ್ನು ರಕ್ಷಿಸುವ" ಹೆಮ್ಮೆಯನ್ನು ಬೆಳೆಸುತ್ತದೆ.

“ಅಂತರ್ಜಾತಿ ಅಥವಾ ಅಂತರ್-ಧರ್ಮೀಯ ವಿವಾಹವಾದವರನ್ನು ತಮ್ಮ ಸ್ವಂತ ಇಚ್ಛೆಯಿಂದ ಮಾಡುವ ಕೊಲೆಗಳಾಗಿವೆ. ಅಂತಹ ಹತ್ಯೆಗಳಲ್ಲಿ ಗೌರವವಲ್ಲದೇ ಬೇರೇನೂ ಇಲ್ಲ ಮತ್ತು ವಾಸ್ತವವಾಗಿ, ಕ್ರೂರ ಮನೋಭಾವದ ವ್ಯಕ್ತಿಗಳು ಮಾಡಿದ ಬರ್ಬರ ಮತ್ತು ನಾಚಿಕೆಗೇಡಿನ ಕೊಲೆಗಳಿಗೆ ಕಠಿಣ ಶಿಕ್ಷೆ ನೀಡಬೇಕಾಗಿದೆ. ಈ ರೀತಿಯಲ್ಲಿ ಮಾತ್ರ ನಾವು ಇಂತಹ ಅನಾಗರಿಕ ಕೃತ್ಯಗಳನ್ನು ಹತ್ತಿಕ್ಕಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com