ಬೆಂಗಳೂರು: ಪತಿ ಚಾಕೊಲೇಟ್ ಕೊಡಿಸಲಿಲ್ಲವೆಂಬ ಕಾರಣಕ್ಕೆ 30 ವರ್ಷದ ಮಹಿಳೆ ಆತ್ಮಹತ್ಯೆ
ಹೆಣ್ಣೂರು ಬಳಿಯ ಸೊನ್ನಪ್ಪ ಲೇಔಟ್‌ನಲ್ಲಿ ಗುರುವಾರ ಮಧ್ಯಾಹ್ನ 30 ವರ್ಷದ ಮಹಿಳೆಯೊಬ್ಬರು ತಮ್ಮ ಪತಿ ಚಾಕೊಲೇಟ್ ಕೊಡಿಸಲು ನಿರಾಕರಿಸಿದ ಕಾರಣಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Published: 08th April 2023 01:15 PM | Last Updated: 08th April 2023 04:46 PM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ಹೆಣ್ಣೂರು ಬಳಿಯ ಸೊನ್ನಪ್ಪ ಲೇಔಟ್‌ನಲ್ಲಿ ಗುರುವಾರ ಮಧ್ಯಾಹ್ನ 30 ವರ್ಷದ ಮಹಿಳೆಯೊಬ್ಬರು ತಮ್ಮ ಪತಿ ಚಾಕೊಲೇಟ್ ಕೊಡಿಸಲು ನಿರಾಕರಿಸಿದ ಕಾರಣಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸಹಕಾರನಗರದ ಸಲೂನ್‌ನಲ್ಲಿ ಕೆಲಸ ಮಾಡುತ್ತಿರುವ ಗೌತಮ್ ಅವರ ಪತ್ನಿ ನಂದಿನಿ ತಮ್ಮ ಡೆತ್ ನೋಟ್‌ನಲ್ಲಿ ಯಾರನ್ನೂ ದೂರಿಲ್ಲ. ದಂಪತಿಗೆ ಕಾಲೇಜಿನಿಂದ ಪರಿಚಯವಿದ್ದು ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ.
ಘಟನೆ ದಿನ ಗೌತಮ್ ಕೆಲಸಕ್ಕೆ ಹೋಗುತ್ತಿದ್ದಾಗ ನಂದಿನಿ ಅವರನ್ನು ತಡೆದಿದ್ದಾರೆ. ದಂಪತಿ ನಡುವೆ ಜಗಳವಾಗಿದೆ ಮತ್ತು ನಂದಿನಿ ತನಗೆ ಚಾಕೊಲೇಟ್ ಖರೀದಿಸುವಂತೆ ಗೌತಮ್ ಅವರನ್ನು ಕೇಳಿದರು. ಅವರು ಚಾಕೊಲೇಟ್‌ನೊಂದಿಗೆ ಹಿಂತಿರುಗುವುದಾಗಿ ಹೇಳಿ ಹೊರಟಿದ್ದಾರೆ. ಆದರೆ, ನಂದಿನಿಯ ಕರೆಗಳಿಗೆ ಉತ್ತರಿಸಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ರಾತ್ರಿ 11.45ರ ಸುಮಾರಿಗೆ ನಂದಿನಿ ಅವರಿಗೆ ವಾಟ್ಸಾಪ್ ಸಂದೇಶ ಕಳುಹಿಸಿ ‘ತಾನು ಹೋಗುತ್ತಿದ್ದೇನೆ. ಬೇಗ ಮನೆಗೆ ಬಂದು ಮಕ್ಕಳಿಗೆ ಊಟ ಮಾಡಿಸಿ, ಅವರನ್ನು ಚೆನ್ನಾಗಿ ನೋಡಿಕೊಳ್ಳಿ’ ಎಂದು ಹೇಳಿದ್ದಾರೆ.
ಗಾಬರಿಗೊಂಡ ಗೌತಮ್ ಕರೆ ಮಾಡಿದರೂ ಅವರ ಕರೆಗಳಿಗೆ ನಂದಿನಿ ಉತ್ತರಿಸಿಲ್ಲ. ಮನೆಗೆ ಧಾವಿಸಿದಾಗ ನಂದಿನಿ ನೇಣು ಬಿಗಿದುಕೊಂಡಿರುವುದು ಕಂಡು ಬಂದಿದೆ. ಬಳಿಕ ಗೌತಮ್ ಬೆಳಗ್ಗೆ ನಡೆದ ಘಟನೆಗಳನ್ನು ವಿವರಿಸಿದ್ದಾರೆ. ನಂದಿನಿ ಕುಟುಂಬದವರು ಅವರ ವಿರುದ್ಧ ಯಾವುದೇ ಆರೋಪ ಮಾಡಿಲ್ಲ.