ಬೆಂಗಳೂರು: BBMP ಮಾಜಿ ಕಾರ್ಪೋರೇಟರ್‌ ಪುತ್ರ ನೇಣಿಗೆ ಶರಣು

ಬೆಂಗಳೂರು ಮಹಾನಗರ ಪಾಲಿಕೆಯ ಮಾಜಿ ಕಾರ್ಪೋರೇಟರ್‌ ರೊಬ್ಬರ ಪುತ್ರ ಮನೆಯಲ್ಲಿ ಅನುಮಾನಾಸ್ಪದವಾಗಿ ನೇಣು ಬಿಗಿದುಕೊಂಡು ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ಗುರುವಾರ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಬೆಂಗಳೂರು ಮಹಾನಗರ ಪಾಲಿಕೆಯ ಮಾಜಿ ಕಾರ್ಪೋರೇಟರ್‌ ರೊಬ್ಬರ ಪುತ್ರ ಮನೆಯಲ್ಲಿ ಅನುಮಾನಾಸ್ಪದವಾಗಿ ನೇಣು ಬಿಗಿದುಕೊಂಡು ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ಗುರುವಾರ ನಡೆದಿದೆ.

ಬೆಂಗಳೂರು ಮಹಾನಗರ ಪಾಲಿಕೆಯ ಅತ್ತಿಗುಪ್ಪೆ ವಾರ್ಡ್ ನ ಮಾಜಿ ಕಾರ್ಪೋರೇಟರ್‌ ದೊಡ್ಡಯ್ಯ ಎಂಬುವವರ ಪುತ್ರ ಗೌತಮ್ (29 ವರ್ಷ) ಇಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗೌತಮ್ ತನ್ನ ರೂಮಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದು, ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಕಾಂಗ್ರೆಸ್ ಪಕ್ಷದಿಂದ ದೊಡ್ಡಯ್ಯ ಬೆಂಗಳೂರು ಮಹಾನಗರ ಪಾಲಿಕೆಗೆ ಕಾರ್ಪೊರೇಟರ್ ಆಗಿದ್ದರು. ಘಟನಾ ಸ್ಥಳಕ್ಕೆ ಪೊಲೀಸರು ತೆರಳಿ ಪರಿಶೀಲನೆ ಮಾಡುತ್ತಿದ್ದು, ಸಾವಿಗೆ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.

ಈ ವಿಚಾರವಾಗಿ ಗೌತಮ್ ಅವರ ತಂದೆ ಪೊಲೀಸ್ ದೂರು ದಾಖಲಿಸಿದ್ದು, ದೂರಿನಲ್ಲಿ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ದೂರಿನಲ್ಲಿರುವಂತೆ ದೊಡ್ಡಯ್ಯ ಅವರ ಕಿರಿಯ ಪುತ್ರ ಆಗಿರುವ ಗೌತಮ್‌, ಬಿಬಿಎಂಪಿ ಗುತ್ತಿಗೆದಾರನಲ್ಲ. ಆದರೆ ಆತ ಬಿಬಿಎಂಪಿಯಲ್ಲಿ ಸಾಕಷ್ಟು ಗುತ್ತಿಗೆದಾರರಿಗೆ ಹಣವನ್ನು ಕೊಟ್ಟಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. 

ತಮ್ಮ ಪುತ್ರ ಗುತ್ತಿಗೆದಾರನಲ್ಲ. ಅವನ ಹೆಸರಲ್ಲಿ ಯಾವುದೇ ಗುತ್ತಿಗೆದಾರರ ಪರವಾನಗಿ ಇಲ್ಲ. ವೈಯಕ್ತಿಕ ಕಾರಣಗಳಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು. ಗೌತಮ್‌ಗೆ ಮದುವೆ ಮಾಡಲು ಎರಡು ತಿಂಗಳಿಂದ ಹೆಣ್ಣು ಹುಡುಕುತ್ತಿದ್ದೆವು. ಕೆಲವು ದಿನಗಳಿಂದ ಆತ ಯಾರ ಬಳಿಯೂ ಮಾತನಾಡುತ್ತಿರಲಿಲ್ಲ. ನಾವು ಎಷ್ಟೇ ಕೇಳಿದರೂ ಯಾವುದೇ ಮಾಹಿತಿಯನ್ನೂ ನೀಡುತ್ತಿರಲಿಲ್ಲ. ಆದರೂ, ಸ್ವಲ್ಪ ದಿನಕ್ಕೆ ಸರಿಹೋಗುತ್ತದೆ ಎಂದು ನಾವು ಸುಮ್ಮನಿದ್ದೆವು. ಜೊತೆಗೆ, ಮದುವೆ ಮಾಡಿದರೆ ಸರಿ ಹೋಗುತ್ತದೆ ಎಂದು ಕಳೆದ ಎರಡು ತಿಂಗಳಿಂದ ಹುಡುಗಿ ಹುಡುಕಾಟ ಮಾಡುತ್ತಿದ್ದೆವು.

ಆದರೂ, ಮಗ ಮನೆಯೊಂದಿಗೆ ಯಾರೊಂದಿಗೂ ಮಾತನಾಡದೇ ಸುಮ್ಮನೇ ಇರುತ್ತಿದ್ದನು. ಮನೆಯವರೊಂದಿಗೆ ನಿನ್ನೆ ಮಧ್ಯಾಹ್ನ ಊಟ ಮಾಡಿ ರೂಮಿಗೆ ತೆರಳಿದ್ದನು. ಇದಾದ ನಂತರ, ಬಾಗಿಲು ತೆರೆದು ಹೊರಗೆ ಬಂದಿರಲಿಲ್ಲ. ಮಧ್ಯಾಹ್ನ ಊಟಕ್ಕೆ ಕರೆಯೋಕೆ ರೂಮಿಗೆ ಹೋದಾಗ ಬಾಗಿಲು ತೆರೆಯಲಿಲ್ಲ. ಜೊತೆಗೆ, ಕರೆ ಮಾಡಿದರೂ ಫೋನ್‌ ಸ್ವಿಚ್‌ ಆಫ್‌ ಆಗಿತ್ತು. ಬಾಗಿಲು ತೆಗೆದು ನೋಡಿದರೆ ಹೀಗೆ ದುರಂತ ಸಂಭವಿಸಿತ್ತು ಎಂದು ದೊಡ್ಡಯ್ಯ ತಮ್ಮ ದೂರನಲ್ಲಿ ಉಲ್ಲೇಖಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com