ಬೆಂಗಳೂರು: ಬ್ರೇಕ್ ಬದಲು ಎಕ್ಸಲೇಟರ್ ತುಳಿದ ಮಹಿಳೆ, ಕಾರು ಅಪಘಾತಕ್ಕೆ ಬೈಕ್ ಸವಾರ ಸ್ಥಳದಲ್ಲಿಯೇ ಸಾವು

ಕಾರು ಚಾಲನೆ ಮಾಡುತ್ತಿದ್ದ ವೇಳೆ ಚಾಲಕಿ ಮಾಡಿದ ಎಡವಟ್ಟಿಗೆ ಬೆಂಗಳೂರಿನಲ್ಲಿ ಜೀವವೊಂದು ಬಲಿಯಾಗಿದೆ. ಹೆಸರಘಟ್ಟ ಮುಖ್ಯರಸ್ತೆಯ ಬಾಗಲಗುಂಟೆಯಲ್ಲಿ ಇಂದು ಬೆಳಗ್ಗೆ ದುರ್ಘಟನೆ ನಡೆದಿದ್ದು ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 

ಬೆಂಗಳೂರು: ಕಾರು ಚಾಲನೆ ಮಾಡುತ್ತಿದ್ದ ವೇಳೆ ಚಾಲಕಿ ಮಾಡಿದ ಎಡವಟ್ಟಿಗೆ ಬೆಂಗಳೂರಿನಲ್ಲಿ ಜೀವವೊಂದು ಬಲಿಯಾಗಿದೆ. ಹೆಸರಘಟ್ಟ ಮುಖ್ಯರಸ್ತೆಯ ಬಾಗಲಗುಂಟೆಯಲ್ಲಿ ಇಂದು ಬೆಳಗ್ಗೆ ದುರ್ಘಟನೆ ನಡೆದಿದ್ದು ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಆಗಿದ್ದೇನು?: ಬೆಂಗಳೂರಿನ ಹೆಸರಘಟ್ಟ ರಸ್ತೆ ಬಾಗಲಗುಂಟೆ ಬಳಿ ಮಹಿಳೆಯೊಬ್ಬರು ಕಾರಿನಲ್ಲಿ ಹೋಗುವಾಗ ಮುಂದೆ ಇರುವ ಬೈಕ್ ಸವಾರಿಗೆ ಡಿಕ್ಕಿ ಹೊಡೆದಿದ್ದಾರೆ.

ಈ ವೇಳೆ ಮಹಿಳೆ ಎಡವಟ್ಟು ಮಾಡಿಕೊಂಡು ಬ್ರೇಕ್ ಬದಲು ಎಕ್ಸ್ ಲೇಟರ್ ಕೊಟ್ಟಿದ್ದಾರೆ. ಇದರಿಂದ ಕಾರಿನಡಿಗೆ ಸಿಲುಕಿದ ಬೈಕ್ ಸವಾರನನ್ನು 100 ಮೀಟರ್ ವರೆಗೆ ಮತ್ತಷ್ಟು ಕಾರು ಎಳೆದೊಯ್ದು ಡಿವೈಡರ್ ಗೆ ಡಿಕ್ಕಿ ಹೊಡೆದಿದೆ. 

ಮೃತ ಬೈಕ್ ಸವಾರನನ್ನು ಸಂಜಯ್ ಬಾಬು ಎಂದು ಗುರುತಿಸಲಾಗಿದ್ದು, ಅಪಘಾತ ಎಸಗಿದ ಮಹಿಳೆ ಶುಭ ಎಂಬ ಮಹಿಳೆಯನ್ನು ಪೀಣ್ಯ ಪೊಲೀಸರು ವಶಕ್ಕೆ ಪಡೆದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com