72 ವರ್ಷದ ವೃದ್ಧ ಮಹಿಳೆಗೆ ಚಿಕಿತ್ಸೆ ನೀಡುವುದಾಗಿ 8.08 ಲಕ್ಷ ರೂ. ವಂಚನೆ: ನಕಲಿ ಆಯುರ್ವೇದ ವೈದ್ಯನ ಬಂಧನ

72 ವರ್ಷದ ವೃದ್ಧ ಮಹಿಳೆಗೆ ಚಿಕಿತ್ಸೆ ನೀಡುವುದಾಗಿ ವ್ಯಕ್ತಿಯೊಬ್ಬನಿಗೆ 8.08 ಲಕ್ಷ ರೂಪಾಯಿ ವಂಚಿಸಿದ ಆರೋಪದ ಮೇಲೆ ರಾಜಸ್ಥಾನದ ನಕಲಿ ಆಯುರ್ವೇದ ವೈದ್ಯ, ಆತನ ಮಗ ಮತ್ತು ಸಹಚರನನ್ನು ವಿಲ್ಸನ್ ಗಾರ್ಡನ್ ಮಂಗಳವಾರ ಪೊಲೀಸರು ಬಂಧಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: 72 ವರ್ಷದ ವೃದ್ಧ ಮಹಿಳೆಗೆ ಚಿಕಿತ್ಸೆ ನೀಡುವುದಾಗಿ ವ್ಯಕ್ತಿಯೊಬ್ಬನಿಗೆ 8.08 ಲಕ್ಷ ರೂಪಾಯಿ ವಂಚಿಸಿದ ಆರೋಪದ ಮೇಲೆ ರಾಜಸ್ಥಾನದ ನಕಲಿ ಆಯುರ್ವೇದ ವೈದ್ಯ, ಆತನ ಮಗ ಮತ್ತು ಸಹಚರನನ್ನು ವಿಲ್ಸನ್ ಗಾರ್ಡನ್ ಮಂಗಳವಾರ ಪೊಲೀಸರು ಬಂಧಿಸಿದ್ದಾರೆ.

ಮೊಹಮ್ಮದ್ ಸಮೀನ್ ಅಲಿಯಾಸ್ ಡಾ ಮಲಿಕ್ ಅಲಿ (50), ಈತನ ಮಗ ಸೈಫ್ ಅಲಿ (25) ಮತ್ತು ಮೊಹಮ್ಮದ್ ರಹೀಸ್ (55) ಬಂಧಿತ ವ್ಯಕ್ತಿಗಳಾಗಿದ್ದಾರೆ.

ಶಾಂತಿನಗರ ನಿವಾಸಿ ಪಂಕಜ್ ರಾಥೋಡ್ ಆರೋಪಿ ವಿರುದ್ಧ ದೂರು ದಾಖಲಿಸಿದ್ದರು. ಸಮೀನ್ 72 ವರ್ಷದ ನನ್ನ ತಾಯಿಗೆ ಚಿಕಿತ್ಸೆ ಕೊಡುವುದಾಗಿ ಹೇಳಿ ಮನೆಗೆ ಬಂದಿದ್ದರು. ತಾಯಿಯ ಕಾಲಿನಿಂದ ಸ್ವಲ್ಪ ಕೀವು ತೆಗೆದು, ಇನ್ನೂ ಕೆಲವು ಬಾರಿ ಚಿಕಿತ್ಸೆ ನೀಡುವುದಾಗಿ ಹೇಳಿ ಹೋಗಿದ್ದರು. ಈ ವೇಳೆ ಹಣವನ್ನು ಪಡೆದುಕೊಂಡಿದ್ದರು. ಆದರೆ, ನಂತರ ಕೈಗೆ ಸಿಕ್ಕಿರಲಿಲ್ಲ ಎಂದು ರಾಥೋಡ್ ಅವರು ಹೇಳಿದ್ದಾರೆ.

ಆರೋಪಿಗಳು ಒಬ್ಬ ವ್ಯಕ್ತಿಗೆ ವಂಚನೆ ನೀಡಿದ ಬಳಿಕ ಸ್ಥಳದಿಂದ ಕಾಲ್ಕಿತ್ತಿದ್ದರು. ದೂರು ಹಿನ್ನೆಲೆಯಲ್ಲಿ ಆರೋಪಿಗಳು ನೆಲಮಂಗಲದಲ್ಲಿರುವ ಕುರಿತು ಮಾಹಿತಿ ತಿಳಿದುಬಂದಿತ್ತು. ಅಕ್ರಮವಾಗಿ ಹಣ ಗಳಿದ ಆರೋಪಿಗಳು ಅದ್ದೂರಿಯಾಗಿ ಜೀವನ ನಡೆಸುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ನೆಲಮಂಗಲದ ರಸ್ತೆ ಬದಿಯ ತಾತ್ಕಾಲಿಕ ಶೆಡ್‌ನಲ್ಲಿ ಆರೋಪಿಗಳನ್ನು ಬಂಧನಕ್ಕೊಳಪಡಿಸಲಾಯಿತು. ಚಿಕಿತ್ಸೆಗೆ ಬಳಸಿದ್ದ ವಸ್ತುಗಳು, 3.5 ಲಕ್ಷ ರೂಪಾಯಿ ನಗದು, ನಾಲ್ಕು ಕಾರುಗಳು ಮತ್ತು ಮೂರು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com