2ನೇ ಕೋವಿಡ್ ಬೂಸ್ಟರ್ ಡೋಸ್'ನ ಅಗತ್ಯವಿಲ್ಲ: ಜಯದೇವ ಸಂಸ್ಥೆ ಅಧ್ಯಯನ

ಎರಡನೇ ಆ್ಯಂಟಿ-ಕೋವಿಡ್ ಬೂಸ್ಟರ್ ಡೋಸ್ (4ನೇ ಡೋಸ್)ನ ಅಗತ್ಯವಿಲ್ಲ ಎಂದು ಜಯದೇವ ಹೃದಯರಕ್ತನಾಳದ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ (ಎಸ್‌ಜೆಐಸಿಎಸ್‌ಆರ್) ನಡೆಸಿದ ಅಧ್ಯಯನವು ತಿಳಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ಎರಡನೇ ಆ್ಯಂಟಿ-ಕೋವಿಡ್ ಬೂಸ್ಟರ್ ಡೋಸ್ (4ನೇ ಡೋಸ್)ನ ಅಗತ್ಯವಿಲ್ಲ ಎಂದು ಜಯದೇವ ಹೃದಯರಕ್ತನಾಳದ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ (ಎಸ್‌ಜೆಐಸಿಎಸ್‌ಆರ್) ನಡೆಸಿದ ಅಧ್ಯಯನವು ತಿಳಿಸಿದೆ.

ವಿದೇಶದಲ್ಲಿ ಕೋವಿಡ್ ಪ್ರಕರಣಗಳ ಹೆಚ್ಚಳ ಹಿನ್ನೆಲೆಯಲ್ಲಿ ದೇಶದಲ್ಲಿ ಕೋವಿಡ್ ಕುರಿತು ಆತಂಕ ಹೆಚ್ಚಾಗಿದ್ದು, ಆರೋಗ್ಯ ಕಾರ್ಯಕರ್ತರು ಮತ್ತು ಸಾರ್ವಜನಿಕರಿಂದ ಎರಡನೇ ಬೂಸ್ಟರ್ ಡೋಸ್‌ನ ಅಗತ್ಯತೆಯ ಬಗ್ಗೆ ಕಳವಳ ವ್ಯಕ್ತವಾಗಿದ್ದವು.

ಈ ಹಿನ್ನೆಲೆಯಲ್ಲಿ ಜನವರಿಯಲ್ಲಿ ಎಸ್‌ಜೆಐಸಿಎಸ್‌ಆರ್ ಅಧ್ಯಯನ ನಡೆಸಿದ್ದು, ಅಧ್ಯಯನದಲ್ಲಿ ಬೂಸ್ಟರ್ ಡೋಸ್ ತೆಗೆದುಕೊಂಡ ಒಂದು ವರ್ಷದ ನಂತರವೂ ಪ್ರತಿಕಾಯದ ಮಟ್ಟವು ಮುಂದುವರೆದಿರುವುದು ಕಂಡು ಬಂದಿದೆ. ಒಟ್ಟಾರೆಯಾಗಿ, ಬೂಸ್ಟರ್ ಡೋಸ್ ಅನ್ನು ಪಡೆದ ಶೇಕಡಾ 99.4 ರಷ್ಟು ಆರೋಗ್ಯ ಕಾರ್ಯಕರ್ತರಲ್ಲಿ ಪ್ರತಿಕಾಯಗಳು ಗಮನಾರ್ಹ ಬೆಳವಣಿಗೆಗಳನ್ನು ತೋರಿಸಿರುವುದು ಅಧ್ಯಯನದಲ್ಲಿ ಕಂಡು ಬಂದಿದೆ.

ಎಸ್‌ಜೆಐಸಿಎಸ್‌ಆರ್ ವೈದ್ಯರು, ದಾದಿಯರು, ತಂತ್ರಜ್ಞರು, ವಾರ್ಡ್ ಸಹಾಯಕರು ಮತ್ತು ಇತರ ಸಿಬ್ಬಂದಿಗಳನ್ನು ಅಧ್ಯಯನಕ್ಕೊಳಪಡಿಸಲಾಗಿದೆ.

ಅಧ್ಯಯನಕ್ಕೊಳಪಟ್ಟ 350 ಆರೋಗ್ಯ ಕಾರ್ಯಕರ್ತರ (19-60 ವರ್ಷ ವಯಸ್ಸಿನ) ರೋಗನಿರೋಧಕ ಸ್ಥಿತಿಯನ್ನು ನಿರ್ಣಯಿಸಲು ಅಧ್ಯಯನ ನಡೆಸಲಾಯಿತು. ಅಧ್ಯಯನದಲ್ಲಿ 148 ಪುರುಷರು ಮತ್ತು 202 ಮಹಿಳೆಯರು ಇದ್ದರು. ಅವರೆಲ್ಲರೂ ಜನವರಿ 2022 ರಲ್ಲಿ ಕೋವಿಶೀಲ್ಡ್ ಲಸಿಕೆಯನ್ನು ತೆಗೆದುಕೊಂಡು ಪರೀಕ್ಷೆಗೆ ಮಾದರಿಗಳನ್ನು ನೀಡಿದರು. "ಎಲಿಸಾ ವಿಧಾನದಿಂದ (ಕಿಣ್ವ-ಲಿಂಕ್ಡ್ ಇಮ್ಯುನೊಸಾರ್ಬೆಂಟ್ ಅಸ್ಸೇ) ಪರೀಕ್ಷೆ ನಡೆಸಲಾಯಿತು. ಎಲ್ಲರಲ್ಲೂ ಪ್ರತಿಕಾಯಗಳ ಉತ್ತಮ ಸ್ಥಿತಿಯಲ್ಲಿರುವುದು ಕಂಡು ಬಂದಿದೆ ಎಂದು ಅಧ್ಯಯನ ತಿಳಿಸಿದೆ.

ಬೂಸ್ಟರ್ ಡೋಸ್ ನೀಡಿದ ಒಂದು ವರ್ಷದ ನಂತರವೂ ಪ್ರತಿಕಾಯ ಮಟ್ಟಗಳು ನಿರಂತರವಾಗಿ ಇರುವುದನ್ನು ನೋಡುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ಎಸ್‌ಜೆಐಸಿಎಸ್‌ಆರ್ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಅವರು ಹೇಳಿದ್ದಾರೆ.

ಈ ನಡುವೆ ಬೂಸ್ಟರ್ ಡೋಸ್ ತೆಗೆದುಕೊಳ್ಳದವರು ತಕ್ಷಣವೇ ತೆಗೆದುಕೊಳ್ಳಬೇಕು ಎಂದು ಅಧ್ಯಯನವು ಶಿಫಾರಸ್ಸು ಮಾಡಿದ್ದು, 4ನೇ ಡೋಸ್ ಲಸಿಕೆ ಅಗತ್ಯವಿಲ್ಲ ಎಂದೂ ತಿಳಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com