ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 18 ವಿದೇಶಿ ಪ್ರಾಣಿಗಳು ವಶ: ಮೂವರ ಬಂಧನ

ಬ್ಯಾಂಕಾಕ್'ನಿಂದ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಮೂವರು ಪ್ರಯಾಣಿಕರ ಮೇಲೆ ದಾಳಿ ನಡೆಸಿ ಬಂಧಿಸಿರುವ ವಾಣಿಜ್ಯ ತೆರಿಗೆ ಗುಪ್ತಚರ ಇಲಾಖೆ ಅಧಿಕಾರಿಗಳು, ಅವರಿಂದ 18 ವಿದೇಶಿ ಪ್ರಾಣಿಗಳನ್ನು ವಶಪಡಿಸಿಕೊಂಡಿದ್ದಾರೆ.
ವಶಕ್ಕೆ ಪಡೆಯಲಾಗಿರುವ ಸರೀಸೃಪಗಳು.
ವಶಕ್ಕೆ ಪಡೆಯಲಾಗಿರುವ ಸರೀಸೃಪಗಳು.

ಬೆಂಗಳೂರು: ಬ್ಯಾಂಕಾಕ್'ನಿಂದ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಮೂವರು ಪ್ರಯಾಣಿಕರ ಮೇಲೆ ದಾಳಿ ನಡೆಸಿ ಬಂಧಿಸಿರುವ ವಾಣಿಜ್ಯ ತೆರಿಗೆ ಗುಪ್ತಚರ ಇಲಾಖೆ ಅಧಿಕಾರಿಗಳು, ಅವರಿಂದ 18 ವಿದೇಶಿ ಪ್ರಾಣಿಗಳನ್ನು ವಶಪಡಿಸಿಕೊಂಡಿದ್ದಾರೆ.

ಜ.22ರಂದು ಬ್ಯಾಂಕಾಕ್ ನಿಂದ ಆಗಮಿಸಿದ ವಿಮಾನದಲ್ಲಿ ಈ ಪ್ರಾಣಿಗಳನ್ನು ಅಕ್ರವಾಗಿ ತರಲಾಗಿತ್ತು. ಈ ವಿಮಾನದಲ್ಲಿ ಪ್ರಯಾಣಿಸಿದ್ದ ಓಱ್ವ ಮಹಿಲೆ ಸೇರಿ ಮೂವರು ಪ್ರಯಾಣಿಕರನ್ನು ವಿಮಾನ ನಿಲ್ದಾಣದಲ್ಲಿ ತಡೆದ ಅಧಿಕಾರಿಗಳು ಅವರ ಬ್ಯಾಗುಗಳನ್ನು ಪರೀಕ್ಷಿಸಿ 18 ಪ್ರಾಣಿಗಳನ್ನು ವಶಪಡಿಸಿಕೊಂಡಿದ್ದಾರೆ.

ಇವುಗಳಲ್ಲಿ 14 ಸರೀಸೃಪಗಳು ಮತ್ತು 4 ಸಸ್ತನಿಗಳು ಸೇರಿವೆ. ಆರೋಪಿಗಳು ನೀಡಿದ ಮಾಹಿತಿ ಆಧರಿಸಿ ನಂತರ ವಿವಿಧೆಡೆ 48 ವಿವಿಧ ತಳಿಯ 139 ಪ್ರಾಣಿಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳು ವಶಪಡಿಸಿಕೊಂಡ ಪ್ರಾಣಿಗಳಲ್ಲಿ ಹಳದಿ ಮತ್ತು ಹಸಿರು ಆನಕೊಂಡ, ಹಳದಿ ತಲೆಯ ಅಮೆಜಾನ್ ಗಿಳಿ, ನೈಲ್ ಮಾನಿಟರ್, ಕೆಂಪು ಕಾಲಿನ ಆಮೆ, ಗೋಸುಂಬೆ, ಹೆಬ್ಬಾವು, ಅಲಿಗೇಟರ್, ಯಾಕಿ ಕೋತಿ, ರಕೂನ್ ನಾಯಿಗಳು ಸೇರಿವೆ. ಇವುಗಳನ್ನು ಸದ್ಯದ ಮಟ್ಟಿಗೆ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಬಿಡಲಾಗಿದೆ.

ಭಾನುವಾರ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬ್ಯಾಂಕಾಕ್‌ನಿಂದ ಬೆಂಗಳೂರಿಗೆ ಬಂದ ಮೂವರು ಹಾವು ಮತ್ತು ಪ್ರಾಣಿಗಳನ್ನು ಅಕ್ರಮವಾಗಿ ಸಾಗಾಟ ಮಾಡಲು ಯತ್ನಿಸಿದ್ದಾರೆ ಎಂಬ ಮಾಹಿತಿ ತಿಳಿದುಬಂದಿತ್ತು.

ಇದರಂತೆ ಬೆಂಗಳೂರು ವಿಮಾನ ನಿಲ್ದಾಣದ ಕಸ್ಟಮ್ಸ್‌ ಅಧಿಕಾರಿಗಳು ಕರ್ನಾಟಕ ಅರಣ್ಯ ಇಲಾಖೆ ಅಧಿಕಾರಿಗಳ ನೆರವಿನೊಂದಿಗೆ, ಹದ್ದಿನ ಕಣ್ಣಿಟ್ಟು, ಸರಿಸೃಪ ಹಾಗೂ ಪ್ರಾಣಿಗಳ ಅಕ್ರಮ ಸಾಗಾಟ ಜಾಲವನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದರು.

ಆರೋಪಿಗಳು ಬ್ಯಾಂಕಾಕ್‌ನಿಂದ ಅಕ್ರಮವಾಗಿ ಸರಿಸೃಪ ಹಾಗೂ ಪ್ರಾಣಿ, ಪಕ್ಷಿಗಳನ್ನು ಬೆಂಗಳೂರು ನಗರಕ್ಕೆ ತಂದು ದುಬಾರಿ ಬೆಲೆಗೆ ಮಾರಾಟ ಮಾಡಿ ಹಣ ಸಂಪಾದಿಸುವ ಉದ್ದೇಶವನ್ನು ಆರೋಪಿಗಳು ಹೊಂದಿರಬಹುದು ಎಂದು ಶಂಕಿಸಲಾಗಿದೆ.

1972ರ ವನ್ಯಜೀವಿ ರಕ್ಷಣಾ ಕಾಯ್ದೆಯ ಪ್ರಕಾರ ಅನುಮತಿ ಇಲ್ಲದೆ ಕಾಡು ಪ್ರಾಣಿಗಳ ಆಮದು ಮಾಡಿಕೊಳ್ಳುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com