ರಾಜಸ್ಥಾನದ ವ್ಯಕ್ತಿ ಬಂಧನ; 66 ಲಕ್ಷ ರೂ. ಮೌಲ್ಯದ ಮಾದಕ ವಸ್ತು ವಶ

ರಾಜಸ್ಥಾನ ದಿಂದ ಕೊರಿಯರ್ ಮುಖಾಂತರ ಮಾದಕ ವಸ್ತು ಓಪಿಎಂ ಪಪ್ಪಿಯನ್ನು ಸರಬರಾಜು ಮಾಡಿಕೊಂಡು ಮಾರಾಟ ಮಾಡುತ್ತಿದ್ದ ಆರೋಪಿಯೊಬ್ಬನನ್ನು ವಿವಿ ಪುರಂ ಠಾಣೆ ಪೊಲೀಸರು ಗುರುವಾರ ಬಂಧನಕ್ಕೊಳಪಡಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ರಾಜಸ್ಥಾನ ದಿಂದ ಕೊರಿಯರ್ ಮುಖಾಂತರ ಮಾದಕ ವಸ್ತು ಓಪಿಎಂ ಪಪ್ಪಿಯನ್ನು ಸರಬರಾಜು ಮಾಡಿಕೊಂಡು ಮಾರಾಟ ಮಾಡುತ್ತಿದ್ದ ಆರೋಪಿಯೊಬ್ಬನನ್ನು ವಿವಿ ಪುರಂ ಠಾಣೆ ಪೊಲೀಸರು ಗುರುವಾರ ಬಂಧನಕ್ಕೊಳಪಡಿಸಿದ್ದಾರೆ.

ಬಂಧಿತ ವ್ಯಕ್ತಿಯನ್ನು ಗುಲ್ಮಾರ್ ಸಿಂಗ್ (25)ಎಂದು ಗುರ್ತಿಸಲಾಗಿದೆ. ಆರೋಪಿಯಿಂದ ಸುಮಾರು 66 ಲಕ್ಷ ರೂಪಾಯಿ ಮೌಲ್ಯದ 60 ಕೆಜಿ ಅಫೀಮು ವಶಕ್ಕೆ ಪಡೆದುಕೊಳ್ಳಲಾಗಿದೆ.

ಆರೋಪಿ ರಾಜಸ್ಥಾನದಿಂದ ಕೊರಿಯರ್ ಮುಖಾಂತರ ಮಾದಕ ವಸ್ತುವನ್ನು ಕಡಿಮೆ ಬೆಲೆಗೆ ತರಿಸಿಕೊಂಡು ಅದನ್ನು ಮನೆಯಲ್ಲಿ ಮಿಕ್ಸರ್ ಗ್ರೈಂಡರ್ ಮೂಲಕ ಪುಡಿ ಮಾಡಿ ರಾತ್ರಿ ಪೂರಾ ನೀರಿನಲ್ಲಿ ನೆನೆಸಿಟ್ಟು. ನಂತರ ಅದನ್ನು ಪಾರ್ಟಿ ಮತ್ತು ಇತರೆ ಮೋಜು- ಮಸ್ತಿಯ ಕೂಟಗಳಲ್ಲಿ ಪಾಲ್ಗೊಳ್ಳುವ ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಸಾಫ್ಟ್‍ವೇರ್ ಎಂಜಿನಿಯರ್‍ಗಳಿಗೆ ನೀಡುತ್ತಿದ್ದನು.

ಈ ಬಗ್ಗೆ ಮಾಹಿತಿ ಸಂಗ್ರಹಿಸಿದ ಪೊಲೀಸರು ಕಾರ್ಯಾಚರಣೆ ಕೈಗೊಂಡು ಆರೋಪಿಯನ್ನು ಬಂಧಿಸಿ ಮಾರಾಟ ಮಾಡಲು ಇಟ್ಟುಕೊಂಡಿದ್ದ 60 ಕೆಜಿ ಮಾದಕ ವಸ್ತು ಹಾಗೂ ಆಟೋವನ್ನು ವಶಪಡಿಸಿಕೊಂಡಿದ್ದಾರೆ.ಆರೋಪಿ ವಿರುದ್ಧ ವಿವಿ ಪುರಂ ಪೊಲೀಸರು ಎನ್‌ಡಿಪಿಎಸ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com