ಕೆಂಗೇರಿ ಉಪನಗರದಲ್ಲಿ ವ್ಯಕ್ತಿಯ ಶವ ಪತ್ತೆ, ಮೂವರು ಆರೋಪಿಗಳು ಕೊಂದಿರುವ ಶಂಕೆ
ಕೆಂಗೇರಿ ಉಪನಗರದಲ್ಲಿ ಗುರುವಾರ ವ್ಯಕ್ತಿಯೊಬ್ಬರು ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರ ಪ್ರಕಾರ ಮೃತರನ್ನು ಬೆಂಗಳೂರಿನ ಕೆಂಗೇರಿ ಪಟ್ಟಣದ ಗಾಂಧಿನಗರದ ನಿವಾಸಿ ನವೀನ್ (25) ಎಂದು ಗುರುತಿಸಲಾಗಿದೆ.
Published: 02nd June 2023 10:31 AM | Last Updated: 02nd June 2023 12:36 PM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ಕೆಂಗೇರಿ ಉಪನಗರದಲ್ಲಿ ಗುರುವಾರ ವ್ಯಕ್ತಿಯೊಬ್ಬರು ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ ಮೃತರನ್ನು ಬೆಂಗಳೂರಿನ ಕೆಂಗೇರಿ ಪಟ್ಟಣದ ಗಾಂಧಿನಗರದ ನಿವಾಸಿ ನವೀನ್ (25) ಎಂದು ಗುರುತಿಸಲಾಗಿದೆ.
ಪಶ್ಚಿಮ ಬೆಂಗಳೂರಿನ ಉಪ ಪೊಲೀಸ್ ಆಯುಕ್ತ (ಡಿಸಿಪಿ) ಲಕ್ಷ್ಮಣ್ ಬಿ ನಿಂಬರಗಿ ಮಾತನಾಡಿ, ಮೂವರು ವ್ಯಕ್ತಿಗಳು ವ್ಯಕ್ತಿಯನ್ನು ಕೊಂದಿರುವ ಶಂಕೆ ಇದೆ. ಶಂಕಿತರನ್ನು ಕುಮಾರ್, ರಮೇಶ್ ಮತ್ತು ಗುರುಪ್ರಸಾದ್ ಎಂದು ಗುರುತಿಸಲಾಗಿದೆ ಎಂದು ಡಿಸಿಪಿ ತಿಳಿಸಿದ್ದಾರೆ.
Bengaluru, Karnataka | 25-year-old Naveen was murdered near a restaurant in Kengeri. One accused injured and is currently undergoing treatment in a hospital. Another accused absconding. Will register case and probe will be done: Laxman B Nimbaragi, DCP West, Bengaluru
— ANI (@ANI) June 1, 2023
ಮೃತದೇಹವನ್ನು ಬೆಂಗಳೂರಿನ ಕುಂಬಳಗೋಡು ರಾಜರಾಜೇಶ್ವರಿ ದಂತ ಕಾಲೇಜು ಮತ್ತು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ ಎಂದು ಡಿಸಿಪಿ ತಿಳಿಸಿದ್ದಾರೆ.
ನಾವು ಈ ವಿಷಯದಲ್ಲಿ ಪ್ರಕರಣವನ್ನು ದಾಖಲಿಸುತ್ತೇವೆ. ಕೆಲವು ಹೆಚ್ಚುವರಿ ವಿವರಗಳನ್ನು ನಿರೀಕ್ಷಿಸಲಾಗಿದೆ ಎಂದು ಡಿಸಿಪಿ ಹೇಳಿದರು.