ಮುಂಗಾರಿನಲ್ಲಿ ಭಾರೀ ಮಳೆ ನಿರೀಕ್ಷೆ: ಬೆಂಗಳೂರಿಗರಿಗೆ ತಜ್ಞರ ಎಚ್ಚರಿಕೆ, ನಗರವಾಸಿಗಳು ಇವನ್ನು ಪಾಲಿಸಿ...

ಇತ್ತೀಚೆಗೆ ಭಾರೀ ಮಳೆಗೆ ಬೆಂಗಳೂರಿನ ಹೃದಯ ಭಾಗ ಕೆಆರ್ ಸರ್ಕಲ್ ಅಂಡರ್‌ಪಾಸ್‌ನಲ್ಲಿ ಮಹಿಳೆ ಪ್ರಯಾಣಿಸುತ್ತಿದ್ದ ಕಾರು ಮುಳುಗಿ ಮೃತಪಟ್ಟ ನಂತರ, ಮುಂಗಾರು ಆಗಮನದ ಹಿನ್ನೆಲೆಯಲ್ಲಿ ನಾಗರಿಕರು ಪ್ರಯಾಣಿಸುವಾಗ ಎಚ್ಚರವಾಗಿರಬೇಕು ಎಂದು ತಜ್ಞರು ಮತ್ತು ಕಾರ್ಯಕರ್ತರು ಸಲಹೆ ನೀಡಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಇತ್ತೀಚೆಗೆ ಭಾರೀ ಮಳೆಗೆ ಬೆಂಗಳೂರಿನ ಹೃದಯ ಭಾಗ ಕೆಆರ್ ಸರ್ಕಲ್ ಅಂಡರ್‌ಪಾಸ್‌ನಲ್ಲಿ ಮಹಿಳೆ ಪ್ರಯಾಣಿಸುತ್ತಿದ್ದ ಕಾರು ಮುಳುಗಿ ಮೃತಪಟ್ಟ ನಂತರ, ಮುಂಗಾರು ಆಗಮನದ ಹಿನ್ನೆಲೆಯಲ್ಲಿ ನಾಗರಿಕರು ಪ್ರಯಾಣಿಸುವಾಗ ಎಚ್ಚರವಾಗಿರಬೇಕು ಎಂದು ತಜ್ಞರು ಮತ್ತು ಕಾರ್ಯಕರ್ತರು ಸಲಹೆ ನೀಡಿದ್ದಾರೆ.

ಮಳೆಗಾಲದಲ್ಲಿ ಬೆಂಗಳೂರು ನಾಗರಿಕರು ಎಚ್ಚರವಾಗಿರಿ: ಹೆಚ್ಚಿನ ಮರಗಳಿರುವ ಪ್ರದೇಶಗಳಲ್ಲಿ ಜನರು ಓಡಾಡುವಾಗ ಜಾಗರೂಕರಾಗಿರಬೇಕು, ಅಂಡರ್‌ಪಾಸ್‌ನ ಪರಿಸ್ಥಿತಿ ಮತ್ತು ಅಲ್ಲಿನ ನೀರಿನ ಮಟ್ಟವನ್ನು ಅಂದಾಜು ಮಾಡಿಕೊಂಡು ಸಂಚರಿಸಬೇಕು.ಹಲವು ಕಡೆ ಸ್ಲ್ಯಾಬ್ ಗಳು ಮಳೆಗೆ ನಾಪತ್ತೆಯಾಗಬಹುದು, ಹೀಗಾಗಿ ನೀರು ತುಂಬಿದ್ದರೆ ಫುಟ್‌ಪಾತ್‌ಗಳಲ್ಲಿ ನಾಗರಿಕರು ನಡೆಯುವುದನ್ನು ಆದಷ್ಟು ತಪ್ಪಿಸಬೇಕು ಎಂದು ತಜ್ಞರು ಹೇಳಿದ್ದಾರೆ.

ಭಾರೀ ಮಳೆಯ ಸಮಯದಲ್ಲಿ ಮತ್ತು ಮಳೆ ನಿಂತ ತಕ್ಷಣವೇ ನಾಗರಿಕರು ಮನೆಯಿಂದ ಹೊರಗೆ ಕಾಲಿಡಬಾರದು, ತೀರಾ ಅಗತ್ಯವಿದ್ದರೆ ಮಾತ್ರ ಹೊರಗೆ ಬನ್ನಿ ಎಂದು ತಜ್ಞರು ಸಲಹೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಮಳೆಯ ಸಮಯದಲ್ಲಿ ಜನರು ಸಾಂದರ್ಭಿಕವಾಗಿ ಇರುವಂತಿಲ್ಲ. ಯಾವುದೇ ವಿಪತ್ತಿನ ಪರಿಸ್ಥಿತಿಗೆ ಸರ್ಕಾರಿ ಸಂಸ್ಥೆಗಳು ತಕ್ಷಣವೇ ಸ್ಪಂದಿಸಬೇಕು. ಜನರು ಪ್ರವಾಹಕ್ಕೆ ಒಳಗಾಗುವ ಪ್ರದೇಶಗಳನ್ನು ತಪ್ಪಿಸಬೇಕು, ಹಳೆಯ ಮತ್ತು ದೊಡ್ಡ ಮರಗಳ ಬಳಿ ನಿಲ್ಲಬಾರದು. ಸೇತುವೆಗಳ ಕೆಳಗೆ ಆಶ್ರಯ ಪಡೆಯಬಾರದು ಎಂದು ನಗರ ತಜ್ಞ ವಿ. ರವಿಚಂದರ್ ಹೇಳುತ್ತಾರೆ. 

ನಗರದಲ್ಲಿನ ಪ್ರವಾಹ ಪರಿಸ್ಥಿತಿಯನ್ನು ನಿಭಾಯಿಸಿದ ಅನುಭವ ಹೊಂದಿರುವ ಬೆಂಗಳೂರಿನ ಮಾಜಿ ಉನ್ನತ ಅಧಿಕಾರಿಯೊಬ್ಬರು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ನೀರಿನ ಮುಕ್ತ ಹರಿವನ್ನು ಖಾತ್ರಿಪಡಿಸುವ ಬಹುದೊಡ್ಡ ಜವಾಬ್ದಾರಿಯನ್ನು ಹೊಂದಿದೆ. ಚರಂಡಿಗಳಲ್ಲಿ ಯಾವುದೇ ಕೊಳಚೆ ಅಥವಾ ಕಸ ನಿಂತುಕೊಳ್ಳದಂತೆ ನೋಡಿಕೊಳ್ಳಬೇಕು ಎಂದಿದ್ದಾರೆ. 

ಪ್ರವಾಹ ಸಂಭವಿಸುವ ನೀರಿನ ಚರಂಡಿಗಳಲ್ಲಿ ಶೇಕಡಾ 30ರಷ್ಟು ಕೊಳಚೆ ಇದೆ, ಇದು ಹೆಚ್ಚುವರಿ ಮಳೆನೀರಿನ ಹರಿವನ್ನು ತಡೆಯುತ್ತದೆ, ಇದರಿಂದಾಗಿ ಪ್ರವಾಹ ಉಂಟಾಗುತ್ತದೆ ಎಂದು ನಿವೃತ್ತ ಅಧಿಕಾರಿಯೊಬ್ಬರು ಹೇಳುತ್ತಾರೆ. ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಒಳಚರಂಡಿ ಸಂಸ್ಕರಣಾ ಘಟಕಗಳನ್ನು ಸಿದ್ಧಪಡಿಸಬೇಕು. 

ತಜ್ಞರ ಅಭಿಪ್ರಾಯಕ್ಕೆ ಸಮ್ಮತಿಸಿದ ಆರೋಗ್ಯ ವಿಶೇಷ ಆಯುಕ್ತ ಹಾಗೂ ಮಹದೇವಪುರ ವಲಯ ಪ್ರಭಾರಿ ಆಯುಕ್ತ ಡಾ. ಕೆ.ವಿ.ತ್ರಿಲೋಕ್ ಚಂದ್ರ, ಚರಂಡಿಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸುವುದು, ದುರ್ಬಲ ಸ್ಥಳಗಳ ತಪಾಸಣೆ ಮುಂತಾದ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪಾಲಿಕೆಯು ಮಳೆನೀರು ಚರಂಡಿ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಸಹ ಕೈಗೊಳ್ಳುತ್ತಿದೆ, ಪ್ರತಿ ಉಪವಿಭಾಗಗಳಲ್ಲಿ ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಿದೆ. ಮರಗಳನ್ನು ಕತ್ತರಿಸುತ್ತಿದೆ. ಇದು ತುರ್ತು ಪರಿಸ್ಥಿತಿಗಳಿಗೆ ಸಿದ್ಧವಾಗಲು ರಾಜ್ಯ ವಿಪತ್ತು ನಿರ್ವಹಣಾ ಪಡೆಯೊಂದಿಗೆ ಸಮನ್ವಯ ಸಾಧಿಸುತ್ತಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com