ಭಾರತೀಯ ಸೇನೆಗೆ 100 ಮಂದಿ ಮಹಿಳಾ ಅಗ್ನಿವೀರರ ಸೇರ್ಪಡೆ: ತರಬೇತಿ ಆರಂಭ

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕನಸಿನ ಅಗ್ನಿಪಥ್ ಯೋಜನೆಯ ಮೊದಲ ಅಗ್ನಿವೀರ್ ಮಹಿಳಾ ಬ್ಯಾಚ್​ಗೆ ಬೆಂಗಳೂರಿನ ನೀಲಸಂದ್ರದ ಮಿಲಿಟರಿ ಕ್ಯಾಂಪಸ್​ನಲ್ಲಿ ತರಬೇತಿ ಆರಂಭವಾಗಿದೆ.
ಮಂಗಳವಾರ ಬೆಂಗಳೂರಿನ ಸೇನಾ ಪೊಲೀಸ್ ಕೇಂದ್ರದ ಕಾರ್ಪ್ಸ್‌ನಲ್ಲಿ ಮೊದಲ ಬ್ಯಾಚ್ ಮಹಿಳಾ ಅಗ್ನಿವೀರರು ತರಬೇತಿ ಪಡೆಯುತ್ತಿರುವುದು.
ಮಂಗಳವಾರ ಬೆಂಗಳೂರಿನ ಸೇನಾ ಪೊಲೀಸ್ ಕೇಂದ್ರದ ಕಾರ್ಪ್ಸ್‌ನಲ್ಲಿ ಮೊದಲ ಬ್ಯಾಚ್ ಮಹಿಳಾ ಅಗ್ನಿವೀರರು ತರಬೇತಿ ಪಡೆಯುತ್ತಿರುವುದು.

ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕನಸಿನ ಅಗ್ನಿಪಥ್ ಯೋಜನೆಯ ಮೊದಲ ಅಗ್ನಿವೀರ್ ಮಹಿಳಾ ಬ್ಯಾಚ್​ಗೆ ಬೆಂಗಳೂರಿನ ನೀಲಸಂದ್ರದ ಮಿಲಿಟರಿ ಕ್ಯಾಂಪಸ್​ನಲ್ಲಿ ತರಬೇತಿ ಆರಂಭವಾಗಿದೆ.

ಮಾರ್ಚ್ 1 ರಿಂದಲೇ ತರಬೇತಿಗಳು ಆರಂಭವಾಗಿದ್ದು, ಈಗಾಗಲೇ INSAS ರೈಫಲ್‌ಗಳನ್ನು ಡಿಸ್ಅಸೆಂಬಲ್ ಮಾಡುವುದು ಸೇರಿದಂತೆ ಇತರೆ ತರಬೇತಿಗಳನ್ನು ನೀಡಲಾಗುತ್ತಿದೆ ಎಂದು ವರದಿಗಳಿಂದ ತಿಳಿದುಬಂದಿದೆ.

ತರಬೇತಿ ವೇಳೆ ಮಹಿಳಾ ಮಣಿಗಳ ಪ್ರತಿಕ್ರಿಯೆ ಅತ್ಯುತ್ತಮವಾಗಿದೆ. ಮಹಿಳೆಯರು ಹೆಚ್ಚು ಪ್ರೇರಣೆ ಹಾಗೂ ಉತ್ಸಾಹಭರಿತರಾಗಿದ್ದಾರೆ. ಪ್ರತಿಯೊಬ್ಬರೂ 25 ರಷ್ಟು ಕಾಯಂ ಕೇಡರ್‌ನ ಭಾಗವಾಗಲು ಬಯಸುತ್ತಿದ್ದಾರೆ. ಅವರೆಲ್ಲರೂ ಸ್ಪರ್ಧಾತ್ಮಕ ಮತ್ತು ಅತ್ಯಂತ ಉತ್ಸಾಹಭರಿತರಾಗಿದ್ದಾರೆ ಎಂದು ಎಲೆಕ್ಟ್ರಾನಿಕ್ಸ್ ಮತ್ತು ಮೆಕ್ಯಾನಿಕಲ್ ಇಂಜಿನಿಯರ್ಸ್ (ಇಎಂಇ) ಅಧಿಕಾರಿ ಮತ್ತು ಮಹಿಳಾ ಅಗ್ನಿವೀರ್ ನೇಮಕಾತಿಯ ತರಬೇತಿ ಅಧಿಕಾರಿ ಮೇಜರ್ ವ್ಯಾಲೆಂಟಿನಾ ಡಿ'ಮೆಲ್ಲೋ ಅವರು ಹೇಳಿದ್ದಾರೆ.

ಇದು ಅಗ್ನಿವೀರ್ ನೇಮಕಾತಿಗಳ ಎರಡನೇ ಬ್ಯಾಚ್ ಆಗಿದ್ದು, ಕೇಂದ್ರದಲ್ಲಿ 350 ಕ್ಕೂ ಹೆಚ್ಚು ಅಗ್ನಿವೀರ್ ನೇಮಕಾತಿ ತರಬೇತಿಗಳು ನಡೆಯುತ್ತಿವೆ. ಎಲ್ಲಾ ಪುರುಷ ನೇಮಕಾತಿಗಳ ಮೊದಲ ಬ್ಯಾಚ್ ಪ್ರಸ್ತುತ ಹತ್ತನೇ ವಾರದ ತರಬೇತಿಯಲ್ಲಿದೆ, ಮತ್ತು ಎರಡನೇ ಬ್ಯಾಚ್ 100 ಮಹಿಳೆಯರು ಮತ್ತು 140 ಪುರುಷ ನೇಮಕಾತಿಗಳನ್ನು ಒಳಗೊಂಡಿದೆ, ಮಾರ್ಚ್ 1 ರಿಂದಲೇ ತರಬೇತಿ ಪ್ರಾರಂಭವಾಗಿದೆ ಎಂದು ತಿಳಿದುಬಂದಿದೆ.

18 ಮತ್ತು 23 ರ ನಡುವಿನ ವಯಸ್ಸಿನ ನೇಮಕಾತಿಗಳು 31 ವಾರಗಳ ತೀವ್ರ ತರಬೇತಿಗೆ ಒಳಗೊಂಡಿದೆ. ತರಬೇತಿ ಬಳಿಕ ಕಾರ್ಪ್ಸ್ ಆಫ್ ಮಿಲಿಟರಿ ಪೋಲೀಸ್ (ಸಿಎಂಪಿ) ಆಗಿ ಹೊರಹೊಮ್ಮಲಿದ್ದಾರೆ. “ದೈನಂದಿನ ಕರ್ತವ್ಯಗಳು ಮಿಲಿಟರಿ ಪೋಲೀಸರ ಪಾತ್ರವನ್ನು ಹೋಲುತ್ತವೆ. ಕಂಟೋನ್ಮೆಂಟ್‌ನ ಶಿಸ್ತು, ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿಗಳನ್ನು ನಿರ್ವಹಿಸಲಿದ್ದಾರೆ. ಮಹಿಳಾ ಅಗ್ನಿವೀರ್‌ಗಳಿಗೆ ನಿರ್ದಿಷ್ಟ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಡಿ'ಮೆಲ್ಲೊ ಅವರು ತಿಳಿಸಿದ್ದಾರೆ.

ಅಗ್ನಿವೀರ್ ನೇಮಕಾತಿಯಲ್ಲಿ ತರಬೇತಿ ಪಡೆಯುತ್ತಿರುವ ಎಂ ಪಿ ಪ್ರೀತಿ (22) ಎಂಬುವವರು ಮಾತನಾಡಿ, ದೇಶಕ್ಕೆ ಸೇವೆ ಸಲ್ಲಿಸುವುದು ಧರ್ಮವೇ ಆಗಿದೆ. ನನ್ನ ದೇಶಕ್ಕೆ ಸೇವೆ ಸಲ್ಲಿಸುವ ಅವಕಾಶವನ್ನು ನಾನು ಪಡೆದಿದ್ದೇನೆಂದು ಹೇಳುವುದಕ್ಕೆ ನನಗೆ ಬಹಳ ಹೆಮ್ಮೆಯಿದೆ. ರಾಷ್ಟ್ರಕ್ಕೆ ಸೇವೆ ಸಲ್ಲಿಸಲು ಸಾಧ್ಯವಾಗುವುದು ಒಂದು ಧರ್ಮದಂತೆ. ಕೇವಲ ನಾಲ್ಕು ವರ್ಷಗಳ ಕಾಲ ಮಾತ್ರ ಸೇವೆ ಸಲ್ಲಿಸಲು ಅವಕಾಶ ನೀಡಲಾಗಿದೆ. ಎಷ್ಟು ವರ್ಷ ಸೇವೆ ಸಲ್ಲಿಸುತ್ತೇವೆಂಬುದು ಮುಖ್ಯವಲ್ಲ. ನನ್ನ ಕುಟುಂಬ ನನ್ನ ಪ್ರಾಥಮಿಕ ಪ್ರೇರಣೆಯಾಗಿದೆ ಮತ್ತು ನಾನು ಅವರಿಗೆ ತುಂಬಾ ಕೃತಜ್ಞನಾಗಿದ್ದೇನೆ, ಪ್ರಮುಖವಾಗಿ ನನ್ನ ಸಹೋದರ ನನಗೆ ಬಹಳ ಪ್ರೋತ್ಸಾಹ ನೀಡಿದ್ದಾರೆ. ಅವರು ಭಾರತೀಯ ಸೇನೆಗೆ ನೇಮಕಗೊಳ್ಳದಿದ್ದರೂ, ನನ್ನನ್ನು ಸೇರಿಸಲು ಸ್ಫೂರ್ತಿ ಮತ್ತು ಪ್ರೇರಣೆ ನೀಡಿದರು ಎಂದು ಹೇಳಿದ್ದಾರೆ.

“ಅಗ್ನಿವೀರ್ ಯೋಜನೆಯಡಿ, ನಾವು ಸಂಕುಚಿತ ಸಮಯದ ಚೌಕಟ್ಟಿನಲ್ಲಿ ತರಬೇತಿಯನ್ನು ಪೂರ್ಣಗೊಳಿಸಬೇಕು. ದೈಹಿಕ ಕಂಡೀಷನಿಂಗ್, ಶಸ್ತ್ರಾಸ್ತ್ರಗಳ ತರಬೇತಿ, ಸಣ್ಣ ಶಸ್ತ್ರಾಸ್ತ್ರಗಳ ನಿರ್ವಹಣೆ ಮತ್ತು ಮಿಲಿಟರಿ ಪೋಲೀಸ್‌ನ ಇತರ ಕಾರ್ಯಾಚರಣೆಯ ಅಂಶಗಳ ಮೇಲೆ ಪ್ರಾಥಮಿಕ ಗಮನವನ್ನು ಕೇಂದ್ರೀಕರಿಸಲಾಗುವುದು ”ಎಂದು ಸಿಎಂಪಿ ಕಮಾಂಡೆಂಟ್ ಬ್ರಿಗೇಡಿಯರ್ ಜೋಸ್ ಅಬ್ರಹಾಂ ಮಾಹಿತಿ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com