ಬೆಂಗಳೂರು: ಮಹಿಳೆಯರಿಗಾಗಿ ಪ್ರತ್ಯೇಕ ಆಯುಷ್ಮತಿ ಕ್ಲಿನಿಕ್, ಶೀಘ್ರದಲ್ಲೇ ಆರಂಭ!

ರಾಷ್ಟ್ರೀಯ ಆರೋಗ್ಯ ಮಿಷನ್ (ಎನ್‌ಎಚ್‌ಎಂ) ಅಡಿಯಲ್ಲಿ ನಗರ ಮತ್ತು ರಾಜ್ಯದ ಇತರ ಭಾಗಗಳಲ್ಲಿ ಮಂಜೂರಾದ ಆಯುಷ್ಮತಿ ಕ್ಲಿನಿಕ್ ಗಳ ತೆರೆಯಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮತ್ತು ಆರೋಗ್ಯ ಇಲಾಖೆ ಸಿದ್ಧತೆಗಳನ್ನು ನಡೆಸುತ್ತಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ರಾಷ್ಟ್ರೀಯ ಆರೋಗ್ಯ ಮಿಷನ್ (ಎನ್‌ಎಚ್‌ಎಂ) ಅಡಿಯಲ್ಲಿ ನಗರ ಮತ್ತು ರಾಜ್ಯದ ಇತರ ಭಾಗಗಳಲ್ಲಿ ಮಂಜೂರಾದ ಆಯುಷ್ಮತಿ ಕ್ಲಿನಿಕ್ ಗಳ ತೆರೆಯಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮತ್ತು ಆರೋಗ್ಯ ಇಲಾಖೆ ಸಿದ್ಧತೆಗಳನ್ನು ನಡೆಸುತ್ತಿದೆ.

ಕೆಲ ದಿನಗಳ ಹಿಂದಷ್ಟೇ ನಮ್ಮ ಕ್ಲಿನಿಕ್ ಗಳನ್ನು ತೆರೆಯಲಾಗಿತ್ತು. ಅದೇ ರೀತಿ ಆಯುಷ್ಮತಿ ಕ್ಲಿನಿಕ್ ಗಳ ತೆರೆದು, ತಜ್ಞ ವೈದ್ಯರಿಂದ ಮಹಿಳೆಯರಿಗೆ ಉಚಿತ ಚಿಕಿತ್ಸೆ ನೀಡಲು ಸರ್ಕಾರ ಮುಂದಾಗಿದೆ.

ಎನ್‌ಎಚ್‌ಎಂನ ನಿರ್ದೇಶಕ ಡಾ.ನವೀನ್ ಭಟ್ ಅವರು ಮಾತನಾಡಿ, ರಾಜ್ಯದಲ್ಲಿ 50 ಕ್ಲಿನಿಕ್‌ಗಳು ಕಾರ್ಯಾಚರಣೆ ಮಾಡಲು ಸಿದ್ಧವಾಗಿವೆ. 128 ಕ್ಲಿನಿಕ್‌ಗಳ ಪೈಕಿ 70 ಕ್ಲಿನಿಕ್ ಗಳನ್ನು ಮಾರ್ಚ್ ಅಂತ್ಯದೊಳಗೆ ತೆರೆಯಲು ಆರೋಗ್ಯ ಇಲಾಖೆ ಮುಂದಾಗಿದೆ ಎಂದು ಹೇಳಿದ್ದಾರೆ.

ರಾಜ್ಯದ ನಗರ ಸಾರ್ವಜನಿಕ ಆರೋಗ್ಯ ಕೇಂದ್ರಗಳಲ್ಲಿ (UPHC) ಕ್ಲಿನಿಕ್‌ಗಳನ್ನು ತೆರೆಯಲು ಜುಲೈ 2022 ರಲ್ಲಿ ಯೋಜನೆಯನ್ನು ರೂಪಿಸಲಾಗಿತ್ತು.

ಆರೋಗ್ಯ ಇಲಾಖೆ ಘೋಷಿಸಿರುವಂತೆ ಬಿಬಿಎಂಪಿ ವ್ಯಾಪ್ತಿಯಲ್ಲಿ 57 ಕ್ಲಿನಿಕ್ ಗಳು ಮತ್ತು ಉಳಿದ ಕ್ಲಿನಿಕ್ ಗಳನ್ನು ರಾಜ್ಯದ ಇತರ ಭಾಗಗಳಲ್ಲಿ ತೆರೆಯಲು ಸಿದ್ಧತೆ ನಡೆಲಾಗುತ್ತಿದೆ ಎಂದು ತಿಳಿದುಬಂದಿದೆ.

ಮಕ್ಕಳ ತಜ್ಞರು, ಸ್ತ್ರೀರೋಗ ತಜ್ಞರು, ಪ್ರಸೂತಿ ತಜ್ಞರು ಮತ್ತು ಮಾನಸಿಕ ಆರೋಗ್ಯ ತಜ್ಞರ ಸೇವೆಗಳನ್ನು ರೋಗಿಗಳಿಗೆ ಲಭ್ಯವಾಗುವಂತೆ ಯುಪಿಎಚ್‌ಸಿಗಳಲ್ಲಿ ಕ್ಲಿನಿಕ್‌ಗಳನ್ನು ಸ್ಥಾಪಿಸಲಾಗುವುದು ಎಂದು ಡಾ ಭಟ್ ತಿಳಿಸಿದ್ದಾರೆ.

ನಗರದ ಜನರಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವಿಶೇಷ ಸೇವೆಗಳನ್ನು ಒದಗಿಸುವುದು ಈ ಚಿಕಿತ್ಸಾಲಯಗಳ ಉದ್ದೇಶವಾಗಿದೆ ಎಂದು ಭಟ್ ಅವರು ಮಾಹಿತಿ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com