ಬೆಂಗಳೂರು: ಗೆಳೆಯನೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದ ಅಪ್ರಾಪ್ತ ಬಾಲಕಿ ಸಾವು

ಗೆಳೆಯನೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದ ಅಪ್ರಾಪ್ತ ಬಾಲಕಿಯೊಬ್ಬಳು ಸಾವನ್ನಪ್ಪಿರುವ ಘಟನೆ ರಾಮನಗರ ಹೊರವಲಯದ ತಾತಗುಣಿ ಎಸ್ಟೇಟ್ ಬಳಿ ನಡೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಗೆಳೆಯನೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದ ಅಪ್ರಾಪ್ತ ಬಾಲಕಿಯೊಬ್ಬಳು ಸಾವನ್ನಪ್ಪಿರುವ ಘಟನೆ ರಾಮನಗರ ಹೊರವಲಯದ ತಾತಗುಣಿ ಎಸ್ಟೇಟ್ ಬಳಿ ನಡೆದಿದೆ.

ಸಂತ್ರಸ್ತ ಬಾಲಕಿ (17) ಹಾಗೂ ಆರೋಪಿ (18) ಇಬ್ಬರೂ ಕಗ್ಗಲಿಪುರದ ಅಕ್ಕಪಕ್ಕದ ಹಳ್ಳಿಯವರಾಗಿದ್ದು, ಒಟ್ಟಿಗೆ ಓದುತ್ತಿದ್ದಾಗ ಪ್ರೀತಿಯಲ್ಲಿ ಬಿದ್ದಿದ್ದಾರೆ. ಬಾಲಕಿ ಪ್ರಥಮ ಪಿಯುಸಿ ವಿದ್ಯಾರ್ಥಿನಿಯಾಗಿದ್ದು, ಆರೋಪಿ ಅರ್ಧದಲ್ಲಿಯೇ ಕಾಲೇಜು ಬಿಟ್ಟಿದ್ದ ಎಂದು ತಿಳಿದುಬಂದಿದೆ.

ಬಾಲಕಿಯನ್ನು ಪುಸಲಾಯಿಸಿದ್ದ ಆರೋಪಿ, ದೈಹಿಕ ಸಂಪರ್ಕ ಹೊಂದಲು ಎಸ್ಟೇಟ್ ಬಳಿ ಕರೆದುಕೊಂಡು ಹೋಗಿದ್ದಾನೆ. ಲೈಂಗಿಕ ಕ್ರಿಯೆ ವೇಳೆ ಬಾಲಕಿಗೆ ಅತೀವ್ರ ರಕ್ತಸ್ರಾವವಾಗಿದ್ದು, ಸಾವನ್ನಪ್ಪಿದ್ದಾಳೆ. ಯುವಕ ಬಾಲಕಿಯನ್ನು ಹತ್ಯೆ ಮಾಡಿಲ್ಲ. ಬಾಲಕಿ ಸಾವನ್ನಪ್ಪಿರುವುದನ್ನು ನೋಡಿ ಸ್ನೇಹಿತರ ಸಹಾಯ ಕೇಳಿದ್ದಾನೆಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇದೀಗ ಬಾಕಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಬೆಂಗಳೂರು-ಮೈಸೂರು ರಸ್ತೆಯಲ್ಲಿರುವ ಆಸ್ಪತ್ರೆಗೆ ರವಾನಿಸಲಾಗಿದ್ದು, ಸಾವಿಗೆ ನಿಖರ ಕಾರಣಗಳಿಗಾಗಿ ಮರಣೋತ್ತರ ಪರೀಕ್ಷೆಗಾಗಿ ಕಾಯಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಆರೋಪಿ ವಿರುದ್ಧ ಇದೀಗ ಅತ್ಯಾಚಾರ, ಪೋಕ್ಸೋ ಮತ್ತು ಭಾರತೀಯ ದಂಡ ಸಂಹಿತೆಯ ಇತರೆ ಸೆಕ್ಷನ್ ಗಳ ಅಡಿಯಲ್ಲಿ ಕಗ್ಗಲಿಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com