'ಅಂಬಾರಿ ಉತ್ಸವ' ಬಸ್‌ ಸೇವೆಯಿಂದ ಕೆಎಸ್‌ಆರ್‌ಟಿಸಿಗೆ 3 ಕೋಟಿ ರೂ. ಗೂ ಹೆಚ್ಚು ಆದಾಯ!

ಅಂಬಾರಿ ಉತ್ಸವ ಬಸ್ ಸೇವೆಯಿಂದ ಕೆಎಸ್‌ಆರ್‌ಟಿಸಿಗೆ ರೂ.3 ಕೋಟಿಗೂ ಹೆಚ್ಚು ಆದಾಯ ಹರಿದುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಅಂಬಾರಿ ಉತ್ಸವ ಬಸ್ ಸೇವೆಯಿಂದ ಕೆಎಸ್‌ಆರ್‌ಟಿಸಿಗೆ ರೂ.3 ಕೋಟಿಗೂ ಹೆಚ್ಚು ಆದಾಯ ಹರಿದುಬಂದಿದೆ.

ಅಂಬಾರಿ ಉತ್ಸವ ಬಸ್ ಯುರೋಪಿಯನ್​ ಮಾದರಿ ಎಸಿ-ಸ್ಲೀಪರ್​​ ಬಸ್​ ಆಗಿದ್ದು, ಈ ಬಸ್ ಸೇವೆಯಿಂದ ಸಾರಿಗೆ ನಿಗಮಕ್ಕೆ ರೂ.3 ಕೋಟಿಗೂೋ ಹೆಚ್ಚು ಆದಾಯ ಹರಿದು ಬಂದಿದೆ.

ಈ ಬಸ್ ಗಳು ಮುರುಡೇಶ್ವರ, ಕುಂದಾಪುರ, ಹೈದರಾಬಾದ್, ಎರ್ನಾಕುಲಂ, ತಿರುವನಂತಪುರ, ತ್ರಿಶೂರ್, ಪಣಜಿ, ಕುಂದಾಪುರ, ಎರ್ನಾಕುಲಂ ಮತ್ತು ಪುಣೆಯಂತಹ ದೀರ್ಘ ಮಾರ್ಗಗಳಲ್ಲಿ ಸಂಚರಿಸುತ್ತಿದ್ದು, ಪ್ರತಿ ಕಿಲೋಮೀಟರ್‌ಗೆ ಅಂದಾಜು 76 ರೂ. ಗಳಿಸುತ್ತಿದೆ.

ಅಂಬಾರಿ ಉತ್ಸವ ಬಸ್ ಸೇವೆಯಿಂದ ಬರುತ್ತಿರುವ ಆದಾಯ ಕುರಿತು ಮಾತನಾಡಿದ ಅನ್ಬುಕುಮಾರ್ ಅವರು, ಅಂಬಾರಿ ಉತ್ಸವ ಬಸ್ ಗಳು ಹೆಚ್ಚು ಬೇಡಿಕೆಯಲ್ಲಿರುವ ಬಸ್ ಗಳಾಗಿದವೆ. ಈ ಬಸ್'ಗೆ ಸಾರ್ವಜನಿಕರಿಂದ ಅಗಾಧ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ ಎಂದು ಹೇಳಿದ್ದಾರೆ.

ಫೆಬ್ರವರಿ ತಿಂಗಳಿನಲ್ಲಿ ಈ ಬಸ್ ಸೇವೆಯನ್ನು ಆರಂಭಿಸಲಾಗಿದ್ದು, ಯಶಸ್ವಿಯಾಗಿ ಸಂಚರಿಸುತ್ತಿದೆ. ಬಸ್‌ನಲ್ಲಿ ಪ್ರಯಾಣಿಸಿದ ಪ್ರಯಾಣಿಕರು ತಮ್ಮ ಪ್ರಯಾಣದ ಅನುಭವವನ್ನು ಹಂಚಿಕೊಳ್ಳುತ್ತಿದ್ದಾರೆ ಮತ್ತು ಅಂಬಾರಿ ಬಸ್‌ಗಳು ನೀಡುವ ಉನ್ನತ ದರ್ಜೆಯ ಸೇವೆಯಿಂದ ತೃಪ್ತರಾಗಿದ್ದಾರೆ” ಎಂದು ತಿಳಿಸಿದ್ದಾರೆ.

ಮಕ್ಕಳಿಗೆ ಬೇಸಿಗೆ ರಜೆ ಶುರುವಾಗಿದ್ದು, ಬಸ್ ಗಳಿಗೆ ಹೆಚ್ಚಿನ ಬೇಡಿಕೆಗಳು ಆರಂಭವಾಗಿವೆ. ಬಸ್ ಹತ್ತಿದವರು ಫೋಟೋ, ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದು ರೈಲಿನ ಸ್ಲೀಪರ್ ಕೋಚ್‌ಗಳಿಗಿಂತಲೂ ಅಂಬಾರಿ ಸೇವೆ ಉತ್ತಮವಾಗಿದೆ, ಖಾಸಗಿ ಬಸ್ ಗಳಲ್ಲೂ ಈ ರೀತಿಯ ವ್ಯವಸ್ಥೆಗಳಿಲ್ಲ ಎಂದು ಕೊಂಡಾಡುತ್ತಿದ್ದಾರೆ.

ಬೆಂಗಳೂರಿನಿಂದ ಮುರುಡೇಶ್ವರಕ್ಕೆ ಹೋಗುವ ಅಂಬಾರಿ ಬಸ್‌ಗಳು ಮತ್ತು ಕೇರಳ ಮಾರ್ಗ- ಎರ್ನಾಕುಲಂ ಮತ್ತು ತ್ರಿಶೂರ್‌ನಲ್ಲಿ ಸಂಚರಿಸುತ್ತಿರುವ ಬಸ್‌ಗಳಲ್ಲಿ ಬಹುತೇಕ ಪೂರ್ಣ ಪ್ರಮಾಣದ ಪ್ರಯಾಣಿಕರಿರುತ್ತಾರೆ. ಆ ಮಾರ್ಗದ ಬಸ್ ಗಳಿಗೆ ಹೆಚ್ಚಿನ ಬೇಡಿಕೆ ಇದೆ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

“ಪ್ರಯಾಣಿಕರು ಬಸ್‌ಗಳು ನೀಡುವ ಶೈಲಿ ಮತ್ತು ಸೌಕರ್ಯಕ್ಕೆ ಪ್ರಭಾವಿತರಾಗಿದ್ದಾರೆ. ಬಬಸ್ ಗಳು ಅತ್ಯುತ್ತಮ ಸೇವೆಗಳನ್ನು ನೀಡುತ್ತಿವೆ ಎಂದು ಹೇಳಿದ್ದಾರೆ.

ಪ್ರಸ್ತುತ 20 ಅಂಬಾರಿ ಉತ್ಸವ ಬಸ್ ಗಳಿದ್ದು, ಅವುಗಳಲ್ಲಿ 15 ಬಸ್ ಬೆಂಗಳೂರು ವಿಭಾಗದಿಂದಲೇ ಸಂಚರಿಸುತ್ತಿವೆ. ಮುಂಬರುವ ತಿಂಗಳಿನಲ್ಲಿ ಇನ್ನೂ 30 ಬಸ್ ಗಳನ್ನು ಪರಿಚಯಿಸಲಾಗುತ್ತದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com