ಕೈ-ಕಾಲು ಕಟ್ಟಿ ಸುಟ್ಟ ಸ್ಥಿತಿಯಲ್ಲಿ ಶೆಫ್ ಪತ್ತೆ: ಚುನಾವಣೆ ಬ್ಯುಸಿ, ತನಿಖೆಯಲ್ಲಿ ಪ್ರಗತಿ ಸಾಧಿಸದ ಪೊಲೀಸರು!

ಕೈ-ಕಾಲುಗಳ ಕಟ್ಟಿ ಸುಟ್ಟ ಸ್ಥಿತಿಯಲ್ಲಿ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾದ ಪ್ರಕರಣದ ತನಿಖೆಯಲ್ಲಿ ಇನ್ನೂ ಯಾವುದೇ ಪ್ರಗತಿಗಳೂ ಕಂಡು ಬಂದಿಲ್ಲ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಕೈ-ಕಾಲುಗಳ ಕಟ್ಟಿ ಸುಟ್ಟ ಸ್ಥಿತಿಯಲ್ಲಿ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾದ ಪ್ರಕರಣದ ತನಿಖೆಯಲ್ಲಿ ಇನ್ನೂ ಯಾವುದೇ ಪ್ರಗತಿಗಳೂ ಕಂಡು ಬಂದಿಲ್ಲ.

ಮೇ.3 ರಂದು ನಗರದ ಹೊರವಲಯದ ರಾಜನಕುಂಟೆಯ ಫ್ಲಾಟ್‌ವೊಂದರಲ್ಲಿ 48 ವರ್ಷದ ವ್ಯಕ್ತಿಯೊಬ್ಬರ ಮೃತದೇಹ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ವ್ಯಕ್ತಿಯ ಕೈ-ಕಾಲುಗಳನ್ನು ಮಂಚಕ್ಕೆ ಸರಪಳಿಯಿಂದ ಕಟ್ಟಿ ಹಾಕಿ ಸುಟ್ಟು ಹಾಕಲಾಗಿದೆ ಎಂದು ಹೇಳಲಾಗುತ್ತಿತ್ತು.

ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಚುನಾವಣಾ ಕರ್ತವ್ಯದಲ್ಲಿ ಬ್ಯುಸಿಯಾಗಿದ್ದ ಹಿನ್ನೆಲೆಯಲ್ಲಿ ತನಿಖೆಯಲ್ಲಿ ಪ್ರಗತಿಗಳನ್ನು ಸಾಧಿಸಿಲ್ಲ ಎಂದು ತಿಳಿದುಬಂದಿದೆ.

ಮೃತ ವ್ಯಕ್ತಿಯನ್ನು ಸಂಜಯ್ ಕೃಷ್ಣನ್ ಎಂದು ಗುರ್ತಿಸಲಾಗಿದ್ದು, ಇವರು ಕೇರಳ ಮೂಲದವರಾಗಿದ್ದರು ಎನ್ನಲಾಗಿದೆ.

ರಾಜನಕುಂಟೆಯ ಖಾಸಗಿ ವಿಶ್ವವಿದ್ಯಾಲಯದಲ್ಲಿ ಮೃತ ಸಂಜಯ್, ಬಾಣಸಿಗರಾಗಿ ಕೆಲಸ ಮಾಡುತ್ತಿದ್ದರು ಎಂದು ವರದಿಗಳು ತಿಳಿಸಿವೆ. ಸಂಜಯ್ ಕೃಷ್ಣನ್ ಅವರ ಪತ್ನಿ ಮತ್ತು ಇಬ್ಬರು ಮಕ್ಕಳು ಕೇರಳದ ತ್ರಿಶೂರ್ ನಲ್ಲಿ ನೆಲೆಸಿದ್ದಾರೆ.

ವಿಶ್ವವಿದ್ಯಾಲಯದಲ್ಲಿ ಸಂಜಯ್ ಅವರು ಬಾಣಸಿಗನಾಗಿ ಕೆಲಸ ಮಾಡುತ್ತಿದ್ದ ಹಿನ್ನೆಲೆಯಲ್ಲಿ ವಿವಿ ಅವರಿಗೆ ಫ್ಲ್ಯಾಟ್ ವೊಂದನ್ನು ನೀಡಿತ್ತು. ಘಟನೆ ಸಂಬಂಧ ಸಂಜಯ್ ಅವರ ಸಹೋದರ ಬಿಜಯ್ ಕೃಷ್ಣನ್ ಅವರು ಮೇ.4ರಂದು ಪೊಲೀಸರಿಗೆ ದೂರು ನೀಡಿದ್ದರು.

ಫ್ಲ್ಯಾಟ್ ನಿಂದ ಹೊಗೆ ಬರುತ್ತಿದ್ದ ಹಿನ್ನೆಲೆಯಲ್ಲಿ ನೆರೆಹೊರೆಯವರಾದ ಅನೀಶ್ ಹಾಗೂ ರಾಜೇಶ್ ಅವರು ಫ್ಯ್ಯಾಟ್'ನ ಬಾಗಿಲು ಒಡೆದು ಒಳಗೆ ಹೋಗಿದ್ದಾರೆ. ಈ ವೇಳೆ ಸಂಜಯ್' ಹತ್ಯೆಯಾಗಿರುವುದನ್ನು ಕಂಡು ನನಗೆ ದೂರವಾಣಿ ಕರೆ ಮಾಡಿ ಮಾಹಿತಿ ನೀಡಿದ್ದರು. ಕೂಡಲೇ ಸ್ಥಳಕ್ಕೆ ತೆರಳಿ ನೋಡಿದಾಗ ಸಹೋದರನ ಕೈ-ಕಾಲು ಗಳನ್ನು ಮಂಚಕ್ಕೆ ಕಟ್ಟಿ ಸುಟ್ಟಿರುವುದು ಕಂಡು ಬಂದಿತ್ತು. ಸಹೋದರನನ್ನು ಹತ್ಯೆ ಮಾಡಿದ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆಂದು ಬಿಜಯ್ ಕೃಷ್ಣನ್ ಅವರು ಶಂಕೆ ವ್ಯಕ್ತಪಡಿಸಿದ್ದಾರೆ.

"ಇದು ಕೊಲೆಯೇ ಅಥವಾ ಆತ್ಮಹತ್ಯೆಯೇ ಎಂಬುದು ಇನ್ನೂ ಖಚಿತವಾಗಿಲ್ಲ. ಫ್ಲಾಟ್‌ಗೆ ಭೇಟಿ ನೀಡಿದ ಎಫ್‌ಎಸ್‌ಎಲ್ ತಂಡಗಳು ಪರೀಕ್ಷೆಗೆ ಮಾದರಿಗಳನ್ನು ತೆಗೆದುಕೊಂಡಿವೆ. ಫ್ಲಾಟ್‌ವೊಳಗೆ ಯಾರೂ ಬಲವಂತದಿಂದ ಒಳಗೆ ಬಂದಿರುವುದು ಪತ್ತೆಯಾಗಿಲ್ಲ. ಸುತ್ತಮುತ್ತಲಿನ ಸಿಸಿಟಿವಿಗಳಲ್ಲೂ ಅನುಮಾನ್ಪದವಾಗಿ ಒಳಗೆ ಬಂದಿರುವುದು ಕಂಡು ಬಂದಿಲ್ಲ. ಆತ್ಮಹತ್ಯೆ ಮಾಡಿಕೊಳ್ಳಲು ಸಂಜಯ್ ನಿರ್ಧರಿಸಬಹುದು. ಬೆಂಕಿ ಹಚ್ಚಿಕೊಳ್ಳುವ ಮೊದಲು ಆತನೇ ಸರಪಳಿಯನ್ನು ಕಟ್ಟಿಕೊಂಡಿಬಹುದು. ಆತನ ಎಡಗೈಗೆ ಸರಪಳಿ ಹಾಕಿರುವ ಕಂಡು ಬಂದಿರಲಿಲ್ಲ. ಎಡಗೈಯಿಂದ ಬೆಂಕಿ ಹಚ್ಚಿಕೊಂಡಿರುವ ಅನುಮಾನವಿದೆ ಎಂದು ಪೊಲೀಸರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com