ವಿಶ್ವವಿಖ್ಯಾತ ಗೋಳಗುಮ್ಮಟಕ್ಕಿಲ್ಲ ಯುನೆಸ್ಕೋ ಸ್ಥಾನಮಾನ!
ವಿಭಿನ್ನ ಕಟ್ಟಡ ಶೈಲಿ, ವಿಸ್ಮಯವೆಂಬಂತೆ ಗೋಚರಿಸುವ ಪಿಸುಗುಟ್ಟುವ ಗ್ಯಾಲರಿ. ಇಷ್ಟೇ ಅಲ್ಲ ಅನೇಕ ವಿಸ್ಮಯಗಳಿಂದ ವಿಶ್ವ ವಿಖ್ಯಾತಿ ಪಡೆದಿರುವ ವಿಜಯಪುರದ ಗೋಳಗುಮ್ಮಟ ವೀಕ್ಷಣೆಗೆ ದೇಶ ವಿದೇಶಗಳಿಂದ ಪ್ರವಾಸಿಗರು ಬರುತ್ತಾರೆ. ಆದರೆ, ಈ ಗೋಳಗುಮ್ಮಟ ಮಾತ್ರ ಯುನೆಸ್ಕೋ ಸ್ಥಾನಮಾನದಿಂದ ದೂರ ಉಳಿದಿದೆ.
Published: 02nd October 2023 01:02 PM | Last Updated: 02nd October 2023 01:35 PM | A+A A-

ಸಂಗ್ರಹ ಚಿತ್ರ
ಬೆಂಗಳೂರು: ವಿಭಿನ್ನ ಕಟ್ಟಡ ಶೈಲಿ, ವಿಸ್ಮಯವೆಂಬಂತೆ ಗೋಚರಿಸುವ ಪಿಸುಗುಟ್ಟುವ ಗ್ಯಾಲರಿ. ಇಷ್ಟೇ ಅಲ್ಲ ಅನೇಕ ವಿಸ್ಮಯಗಳಿಂದ ವಿಶ್ವ ವಿಖ್ಯಾತಿ ಪಡೆದಿರುವ ವಿಜಯಪುರದ ಗೋಳಗುಮ್ಮಟ ವೀಕ್ಷಣೆಗೆ ದೇಶ ವಿದೇಶಗಳಿಂದ ಪ್ರವಾಸಿಗರು ಬರುತ್ತಾರೆ. ಆದರೆ, ಈ ಗೋಳಗುಮ್ಮಟ ಮಾತ್ರ ಯುನೆಸ್ಕೋ ಸ್ಥಾನಮಾನದಿಂದ ದೂರ ಉಳಿದಿದೆ.
ಹಾಸನ ಜಿಲ್ಲೆಯ ಬೇಲೂರಿನ ಚೆನ್ನಕೇಶವ ದೇವಾಲಯ, ಹಳೇಬೀಡು ಹೊಯ್ಸಳೇಶ್ವರ ದೇವಾಲಯ ಮತ್ತು ಮೈಸೂರು ಜಿಲ್ಲೆಯ ಟಿ ನರಸೀಪುರದ ಸೋಮನಾಥಪುರ ದೇವಾಲಯಗಳು ಈ ವರ್ಷ ಯುನೆಸ್ಕೋ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿವೆ. ಆದರೆ, ಗೋಳಗುಮ್ಮಟ ಮಾತ್ರ ಇನ್ನೂ ಯುನೆಸ್ಕೋ ಪಟ್ಟಿಗೆ ಸೇರ್ಪಡೆಯಾಗಿಲ್ಲ.
ಗೋಲ್ ಗುಂಬಜ್ 350 ವರ್ಷಗಳ ಹಿಂದೆ ನಿರ್ಮಿಸಲಾದ ಪುರಾತನ ಮತ್ತು ಐತಿಹಾಸಿಕ ಸ್ಮಾರಕಗಳಲ್ಲಿ ಒಂದಾಗಿದ್ದರೂ, ಯುನೆಸ್ಕೋ ಪಟ್ಟಿಯಲ್ಲಿ ಸ್ಥಾನ ಪಡೆಯುವಲ್ಲಿ ವಿಫಲವಾಗಿದೆ.
ಇದನ್ನೂ ಓದಿ: ಹಂಪಿಯಲ್ಲಿ ಮಾರ್ಗಸೂಚಿಗಳ ಉಲ್ಲಂಘನೆ: ವರದಿ ಸಲ್ಲಿಸುವಂತೆ ಪುರಾತತ್ವ ಇಲಾಖೆಗೆ ಯುನೆಸ್ಕೋ ಸೂಚನೆ
ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯುು ಕನಿಷ್ಠ 83 ವಿವಿಧ ಸಣ್ಣ ಮತ್ತು ದೊಡ್ಡ ಸ್ಮಾರಕಗಳನ್ನು ಸಂರಕ್ಷಿತ ಸ್ಮಾರಕಗಳೆಂದು ಘೋಷಿಸಿದೆ. "ಇವುಗಳಲ್ಲಿ, ಪ್ರಸಿದ್ಧ ಪಿಸುಗುಟ್ಟುವ ಗ್ಯಾಲರಿ, ಗೋಲ್ ಗುಂಬಜ್ ಸೇರಿದಂತೆ ಕನಿಷ್ಠ ಹತ್ತು ದೊಡ್ಡ ಸ್ಮಾರಕಗಳಿವೆ. ಈ ಸ್ಮಾರಕವು ಯುನೆಸ್ಕೋ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಸ್ಥಾನ ಪಡೆಯಲು ಅರ್ಹವಾಗಿದೆ ಎಂದು ಹಿರಿಯ ಇತಿಹಾಸಕಾರ ಮತ್ತು ಬರಹಗಾರ ಅಬ್ದುಲ್ಗನಿ ಇಮಾರತ್ವಾಲೆ ಹೇಳಿದರು,
ಹೆಸರುವಾಸಿಯಾದ ಸ್ಮಾರಕವು ಯುನೆಸ್ಕೋದ ಪಾರಂಪರಿಕ ತಾಣಗಳ ಭಾಗವಾಗಲು ವಿಫಲವಾಗದರೆ, ಅದು ಪ್ರಾಚೀನ ನಗರದ ಶ್ರೀಮಂತ, ವೈವಿಧ್ಯಮಯ ಮತ್ತು ಇತಿಹಾಸಕ್ಕೆ ದೊಡ್ಡ ಅನ್ಯಾಯವಾದಂತಾಗಲಿದೆ ಎಂದು ತಿಳಿಸಿದ್ದಾರೆ.
ಯುನೆಸ್ಕೋದ ಪಟ್ಟಿಗೆ ಗೋಲ್ ಗುಂಬಜ್ ಹೆಸರನ್ನು ಸೇರ್ಪಡೆಗೊಳಿಸಲು ಒತ್ತಾಯಿಸಲಾಗುತ್ತದೆ ಎಂದು ಹಿರಿಯ ಎಎಸ್‌ಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.