ಬೆಂಗಳೂರು: ತಲಾ 1 ಲಕ್ಷ ರೂ. ಟ್ರಾಫಿಕ್ ಫೈನ್ ಹೊತ್ತ 123 ವಾಹನ ಓಡಾಡುತ್ತಿವೆ; ದಂಡ ವಸೂಲಿಗೆ ಸಂಚಾರಿ ಪೊಲೀಸರು ಚಾಲನೆ!

ನಗರದ ಸುಮಾರು 123 ವಾಹನಗಳು ತಲಾ 1 ಲಕ್ಷಕ್ಕೂ ಅಧಿಕ ಟ್ರಾಫಿಕ್ ದಂಡವನ್ನು ಬಾಕಿ ಉಳಿಸಿಕೊಂಡಿವೆ. ಈ ಸಂಬಂಧ ಬೆಂಗಳೂರು ಟ್ರಾಫಿಕ್ ಪೊಲೀಸರು (ಬಿಟಿಪಿ) 2,858 ವಾಹನಗಳನ್ನು ಪಟ್ಟಿ ಮಾಡಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ನಗರದ ಸುಮಾರು 123 ವಾಹನಗಳು ತಲಾ 1 ಲಕ್ಷಕ್ಕೂ ಅಧಿಕ ಟ್ರಾಫಿಕ್ ದಂಡವನ್ನು ಬಾಕಿ ಉಳಿಸಿಕೊಂಡಿವೆ. ಈ ಸಂಬಂಧ ಬೆಂಗಳೂರು ಟ್ರಾಫಿಕ್ ಪೊಲೀಸರು (ಬಿಟಿಪಿ) 2,858 ವಾಹನಗಳನ್ನು ಪಟ್ಟಿ ಮಾಡಿದ್ದು, ಕಳೆದ ಐದು ವರ್ಷಗಳಲ್ಲಿ ಪ್ರತಿಯೊಂದೂ ನಿಯಮ ಉಲ್ಲಂಘನೆಗಾಗಿ 50,000 ರೂ. ದಂಡ ವಿಧಿಸಲಾಗಿದೆ.

ಇವುಗಳಲ್ಲಿ 2 ಲಕ್ಷ ರೂ.ಗಿಂತ ಹೆಚ್ಚಿನ ದಂಡ ಬಾಕಿ ಇರುವ ಮೂರು ವಾಹನಗಳೂ ಸೇರಿವೆ. ದ್ವಿಚಕ್ರ ವಾಹನವೊಂದು 475 ಬಾರಿ ನಿಯಮ ಉಲ್ಲಂಘನೆ ಮಾಡಿದ್ದ 2.91 ಲಕ್ಷ ರೂ. ಗರಿಷ್ಠ ದಂಡ ಪಾವತಿಸದೆ ಉಳಿಸಿಕೊಂಡಿದೆ. ಒಟ್ಟು 3,71,416 ಪ್ರಕರಣಗಳಿಂದ 19,54,16,400 ರೂ. ದಂಡ ವಸೂಲಿಯಾಗಬೇಕಾಗಿದೆ. 2,858 ವಾಹನಗಳು 2,742 ದ್ವಿಚಕ್ರ ವಾಹನಗಳು ವಿರುದ್ಧ ಒಟ್ಟು 3,61,294 ಪ್ರಕರಣಗಳು ದಾಖಲಾಗಿವೆ, 100 ಕಾರುಗಳು, ವ್ಯಾನ್‌ಗಳು, ಶಾಲಾ ಬಸ್‌ಗಳು ಮತ್ತು ಇತರ ವಾಹನಗಳ ವಿರುದ್ಧ 8,603 ನಿಯಮ ಉಲ್ಲಂಘನೆ ಪ್ರಕರಣ ದಾಖಲಾಗಿವೆ.

ದ್ವಿಚಕ್ರ ವಾಹನ ಸವಾರರಲ್ಲಿ ಹೆಚ್ಚಿನ ಉಲ್ಲಂಘನೆಗಳು ದಾಖಲಾಗಿವೆ. ಹೆಲ್ಮೆಟ್ ಇಲ್ಲದೇ ಸವಾರಿ, ಹಿಂಬದಿ ಸವಾರ ಹೆಲ್ಮೆಟ್ ಧರಿಸದಿರುವುದು, ಟ್ರಾಫಿಕ್ ಸಿಗ್ನಲ್‌ ಜಂಪ್ ಮಾಡುವುದು ಮತ್ತು ದೋಷಯುಕ್ತ ನಂಬರ್ ಪ್ಲೇಟ್‌ಗಳನ್ನು ಹಾಕಿರುವುದು ಕಂಡು ಬರುತ್ತದೆ.

ಸಾಂದರ್ಭಿಕ ಚಿತ್ರ
ಬೆಂಗಳೂರು: ನಂಬರ್ ಪ್ಲೇಟ್​ ಬಿಚ್ಚಿಕೊಡ್ತೀನಿ, ಎಷ್ಟು ಕೇಸ್ ಬೇಕಾದ್ರೂ ಹಾಕ್ಕೋ; ಟ್ರಾಫಿಕ್ ಪೊಲೀಸ್ ಕೈಕಚ್ಚಿ, ಹಾವಳಿ ನಡೆಸಿದ್ದ ಸವಾರನ ಬಂಧನ

ಹೆಲ್ಮೆಟ್ ಧರಿಸದ ಸವಾರರು ಮತ್ತು ಹಿಂಬದಿ ಸವಾರರ ವಿರುದ್ಧ ಒಟ್ಟು 3,12,727 ಪ್ರಕರಣಗಳನ್ನು ದಾಖಲಿಸಲಾಗಿದೆ. ಕಾರುಗಳಲ್ಲಿ, ಸೀಟ್ ಬೆಲ್ಟ್ ಧರಿಸದಿರುವುದು, ಚಾಲನೆ ಮಾಡುವಾಗ ಮೊಬೈಲ್ ಫೋನ್ ಬಳಸುವುದು ಮತ್ತು ಜೀಬ್ರಾ ಕ್ರಾಸಿಂಗ್‌ನಲ್ಲಿ ನಿಲ್ಲಿಸುವುದು ಅತಿ ಹೆಚ್ಚು ಉಲ್ಲಂಘನೆಯಾಗಿದೆ.

ಟ್ರಾಫಿಕ್ ನಿರ್ವಹಣಾ ಕೇಂದ್ರವು 1,61,861 ಸಂಚಾರ ಉಲ್ಲಂಘನೆಗಳನ್ನು ದಾಖಲಿಸಿಕೊಂಡಿದೆ, ಅದರಲ್ಲಿ ಬಾಣಸವಾಡಿ ಸಂಚಾರ ಪೊಲೀಸರು ಠಾಣೆ ಮಟ್ಟದಲ್ಲಿ ಅತಿ ಹೆಚ್ಚು ಅಂದರೆ 13,439 ಪ್ರಕರಣಗಳನ್ನು ದಾಖಲಿಸಿದ್ದಾರೆ, ಬನಶಂಕರಿ, ಪುಲಿಕೇಶಿನಗರ ಮತ್ತು ಮಾಗಡಿ ರಸ್ತೆ ಸಂಚಾರ ಪೊಲೀಸರು ನಂತರದ ಸ್ಥಾನದಲ್ಲಿದ್ದಾರೆ.

ಈ ನಿಯಮ ಉಲ್ಲಂಘಿಸುವವರಿಂದ ದಂಡ ವಸೂಲಿ ಮಾಡುವ ಕಾರ್ಯವನ್ನು ಆರಂಭಿಸಿದ್ದೇವೆ ಎಂದು ಜಂಟಿ ಪೊಲೀಸ್ ಆಯುಕ್ತ (ಸಂಚಾರ) ಎಂ.ಎನ್.ಅನುಚೇತ್ ತಿಳಿಸಿದ್ದಾರೆ. ನಿಯಮ ಉಲ್ಲಂಘಿಸಿದವರ ಮನೆಗಳಿಗೆ ಪೊಲೀಸರು ಭೇಟಿ ನೀಡಿ ಹಣ ನೀಡುವಂತೆ ಕೇಳುತ್ತಿದ್ದಾರೆ. ಇದರ ನಂತರವೂ ಪಾವತಿಸಲು ವಿಫಲವಾದರೆ, ನ್ಯಾಯಾಲಯದಲ್ಲಿ ಆರೋಪಪಟ್ಟಿ ಸಲ್ಲಿಸಲಾಗುವುದು ಮತ್ತು ಅಪರಾಧಿಗಳಿಗೆ ಸಮನ್ಸ್ ನೀಡಲಾಗುತ್ತದೆ. ಉಲ್ಲಂಘಿಸುವವರಿಗೆ ಯಾವುದೇ ರಿಯಾಯಿತಿಗಳನ್ನು ನೀಡಲಾಗುವುದಿಲ್ಲ ಎಂದು ಅವರು ಹೇಳಿದರು. 2,859 ಅಪರಾಧಿಗಳ ಪೈಕಿ ಸುಮಾರು 350 ಮಂದಿ ಭಾಗಶಃ ದಂಡ ಪಾವತಿಸಿದ್ದಾರೆ ಎಂದು ಅವರು ಹೇಳಿದರು.

ಸಾಂದರ್ಭಿಕ ಚಿತ್ರ
Traffic violations: 300 ಬಾರಿ ಟ್ರಾಫಿಕ್ ನಿಯಮ ಉಲ್ಲಂಘನೆ, 3 ಲಕ್ಷ ರೂ. ದಂಡ; ಸ್ಕೂಟರ್ ವ್ಯಾಲ್ಯು 20 ಸಾವಿರ ರೂ.!

ಗಮನಾರ್ಹ ದಂಡದ ಮೊತ್ತವನ್ನು ಹೊಂದಿರುವ ಇವರೆಲ್ಲರೂ ಅಭ್ಯಾಸ ಅಪರಾಧಿಗಳು. ಪೊಲೀಸರು ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಇಲ್ಲಷ್ಟು ನಿಯಮ ಉಲ್ಲಂಘನೆ ಮಾಡುವವರೆಗೂ ಕಾಯಬಾರದು. ಉಲ್ಲಂಘಿಸುವವರು ಒಂದು ನಿರ್ದಿಷ್ಟ ಮಿತಿಯನ್ನು ತಲುಪಿದ ಕ್ಷಣದಲ್ಲಿ, ಕಾನೂನಿನ ಜಾರಿ ಮತ್ತು ದಂಡದ ಕ್ರಮವು ಸ್ವಯಂಚಾಲಿತವಾಗಿ ಜಾರಿಯಾಗಬೇಕು ಎಂದು ಮೊಬಿಲಿಟಿ ತಜ್ಞ ಪ್ರೊ.ಆಶಿಶ್ ವರ್ಮಾಅಭಿಪ್ರಾಯಪಟ್ಟಿದ್ದಾರೆ.

ಜನರು ಮಾಡುವ ಉಲ್ಲಂಘನೆಗಳ ಸಂಖ್ಯೆಯನ್ನು ಆಧರಿಸಿ, ದಂಡದ ಮಟ್ಟವನ್ನು ಹೆಚ್ಚಿಸಬೇಕು. ತಮ್ಮ ಬೈಕ್ ಮಾರಿದರೂ ದಂಡದ ಹಣ ಸಿಗುವುದಿಲ್ಲ ಎಂದು ಅಪರಾಧಿಗಳು ಆಗಾಗ್ಗೆ ವಾದಿಸುತ್ತಾರೆ, ಆದರೆ ಅವರು ಪದೇ ಪದೇ ಕಾನೂನುಗಳನ್ನು ಉಲ್ಲಂಘಿಸಿರುವುದರಿಂದ ಮತ್ತು ಅನೇಕ ಬಾರಿ ಸಿಕ್ಕಿಬಿದ್ದು ಕೇಸ್ ದಾಖಲಾಗಿ ಹಲವು ಬಾರಿ ದಂಡ ವಸೂಲಿ ಮಾಡಲಾಗಿದೆ.

ಸಂಚಾರ ನಿಯಮಗಳನ್ನು ಯಾರೂ ಲಘುವಾಗಿ ತೆಗೆದುಕೊಳ್ಳಬಾರದು ಎಂಬ ಸಂದೇಶವು ತುಂಬಾ ಸ್ಪಷ್ಟವಾಗಿರಬೇಕು ಎಂದು ನಾನು ಭಾವಿಸುತ್ತೇನೆ. ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡರೆ ಇಷ್ಟೊಂದು ನಿಯಂ ಉಲ್ಲಂಘನೆಯಾಗುವುದಿಲ್ಲ. ರಸ್ತೆ ಸುರಕ್ಷತೆ ಅಪಾಯಗಳು, ಅಪಘಾತಗಳು ಅಥವಾ ಸಂಚಾರ ದಟ್ಟಣೆಯನ್ನು ಉಂಟುಮಾಡುವ ಅಪರಾಧಿಗಳು ಸಂಚಾರ ನಿಯಮಗಳನ್ನು ಅನುಸರಿಸದಿದ್ದರೆ ಅವರ ಪರವಾನಗಿಯನ್ನು ಪೊಲೀಸರು ರದ್ದುಗೊಳಿಸಬೇಕು ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com