ಬೆಂಗಳೂರು: ನಕಲಿ ದಾಖಲೆ ಸೃಷ್ಟಿಸಿ ಒಂದೇ ನಿವೇಶನದ ಮೇಲೆ 22 ಬ್ಯಾಂಕ್‌ಗಳಿಂದ ಸಾಲ; 6 ಮಂದಿ ಬಂಧನ

ಒಂದೇ ನಿವೇಶನಕ್ಕೆ ವಿವಿಧ ರೀತಿಯ ನಕಲಿ ದಾಖಲೆ ಸೃಷ್ಟಿಸಿ ಸುಮಾರು 22 ಬ್ಯಾಂಕ್ಗಳಿಗೆ 10 ಕೋಟಿ ರೂ. ವಂಚಿಸಿರುವ ಒಂದೇ ಕುಟುಂಬದ ಐದು ವ್ಯಕ್ತಿಗಳು ಸೇರಿದಂತೆ ಆರು ಮಂದಿಯನ್ನು ಬಂಧಿಸುವಲ್ಲಿ ಜಯನಗರ ಪೊಲೀಸರು ಯಶಸ್ವಿಯಾಗಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ಒಂದೇ ನಿವೇಶನಕ್ಕೆ ವಿವಿಧ ರೀತಿಯ ನಕಲಿ ದಾಖಲೆ ಸೃಷ್ಟಿಸಿ ಸುಮಾರು 22 ಬ್ಯಾಂಕ್ಗಳಿಗೆ 10 ಕೋಟಿ ರೂ. ವಂಚಿಸಿರುವ ಒಂದೇ ಕುಟುಂಬದ ಐದು ವ್ಯಕ್ತಿಗಳು ಸೇರಿದಂತೆ ಆರು ಮಂದಿಯನ್ನು ಬಂಧಿಸುವಲ್ಲಿ ಜಯನಗರ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಂಧಿತರನ್ನು ನಾಗೇಶ್ ಭಾರದ್ವಾಜ್, ಈತನ ಪತ್ನಿ ಸುಮಾ, ಮೂವರು ಸಂಬಂಕರಾದ ಶೋಭಾ, ಈಕೆಯ ಪತಿ ಶೇಷಗಿರಿ, ಭಾವಮೈದುನ ಸತೀಶ್ ಹಾಗೂ ಸ್ನೇಹಿತೆ ವೇದಾ ಎಂದು ಗುರ್ತಿಸಲಾಗಿದೆ.

ಜಯನಗರ ಮೂರನೇ ಬ್ಲಾಕ್ನಲ್ಲಿರುವ ಕೋ ಆಪರೇಟಿವ್ ಬ್ಯಾಂಕೊಂದರ ಮ್ಯಾನೇಜರ್ ನೀಡಿದ ದೂರಿನ ಆಧಾರದ ಮೇಲೆ ಈ ವಂಚಕರನ್ನು ಬಂಧಿಸಲಾಗಿದೆ.

ತಮ್ಮ ಬ್ಯಾಂಕ್ನಲ್ಲಿ ಖಾತೆದಾರರಾಗಿರುವ ಪತಿ, ಪತ್ನಿಯರು ಬೇಗೂರು ಗ್ರಾಮದಲ್ಲಿರುವ 2,100 ಅಡಿ ಉದ್ದಳತೆಯ ಜಾಗದಲ್ಲಿ ಕಟ್ಟಡ ಇರುವುದಾಗಿ ಅದನ್ನು ಅಡಮಾನವಾಗಿಟ್ಟುಕೊಂಡು ಕಂತು ಸಾಲ ಮತ್ತು ಯಂತ್ರೋಪಕರಣ ಸಾಲವೆಂದು 1.30 ಕೋಟಿ ರೂ. ಸಾಲ ನೀಡುವಂತೆ ಮನವಿ ಮಾಡಿಕೊಂಡಿದ್ದರು. ಆದರೆ ಕಟ್ಟಡಕ್ಕೆ ಸಂಬಂಧಿಸಿದಂತೆ ನಕಲಿ ದಾಖಲೆಗಳನ್ನು ನೀಡಿ ಸಾಲ ಪಡೆದಿರುವುದರ ಬಗ್ಗೆ ಬ್ಯಾಂಕ್ ಮ್ಯಾನೇಜರ್ ಕಳೆದ 2022 ರ ಡಿಸೆಂಬರ್ನಲ್ಲಿ ಜಯನಗರ ಪೊಲೀಸರಿಗೆ ದೂರು ನೀಡಿದ್ದರು.

ಈ ದೂರಿನ ಆಧಾರದ ಮೇಲೆ ತನಿಖೆ ನಡೆಸಿದ ಪೊಲೀಸರು ವಂಚಕ ಮಹಿಳೆಯ ಪತಿಯನ್ನು ಮಾರ್ಚ್ 2024 ರಲ್ಲಿ ಬಂಧಿಸಿ ವಿಚಾರಣೆಗೊಳಪಡಿಸಲಾಗಿತ್ತು. ನಂತರ ಹೆಚ್ಚಿನ ವಿಚಾರಣೆಗಾಗಿ ನ್ಯಾಯಾಲಯದ ಮುಂದೆ ಹಾಜರುಪಡಿಸಿ, 10 ದಿನಗಳ ಪೊಲೀಸ್ ಕಸ್ಟಡಿಗೆ ಪಡೆದುಕೊಳ್ಳಲಾಗಿತ್ತು. ಬಳಿಕ ಸುದೀರ್ಘ ವಿಚಾರಣೆ ನಡೆಸಿದಾಗ ಈ ಕೃತ್ಯದಲ್ಲಿ ಆತನ ಪತ್ನಿ, ಪತ್ನಿಯ ತಮ್ಮ, ಅಕ್ಕ, ಭಾವ ಹಾಗೂ ಸ್ನೇಹಿತೆ ಇರುವುದಾಗಿ ತಿಳಿಸಿದ್ದಾನೆ.

ಸಂಗ್ರಹ ಚಿತ್ರ
ಡ್ರಗ್ಸ್ ಕೇಸ್: ಬಂಧಿಸಲು ಬಂದ ಬೆಂಗಳೂರು ಪೊಲೀಸರನ್ನು ಅಟ್ಟಾಡಿಸಿ ಹೊಡೆದ ನೈಜೀರಿಯಾ ಪ್ರಜೆಗಳು!

ನಾವೆಲ್ಲಾ ನಮ್ಮ ಹೆಸರಿನಲ್ಲಿದ್ದ ಕಟ್ಟಡಕ್ಕೆ ವಿವಿಧ ಸರ್ವೆ ನಂಬರ್, ಸೈಟ್ ನಂಬರ್ಗಳನ್ನು ನಮೂದಿಸುವುದರ ಜೊತೆಗೆ ಸೈಟ್ ಉದ್ದಳತೆಯಲ್ಲೂ ಬದಲಾವಣೆ ಮಾಡಿ ನಕಲಿ ಡೀಡ್ ಮುಖಾಂತರ ರಿಜಿಸ್ಟರ್ ಮಾಡಿಸಿಕೊಂಡು ವಿವಿಧ ಬ್ಯಾಂಕುಗಳಿಗೆ ವಂಚಿಸಿರುವುದಾಗಿ ಬಾಯಿ ಬಿಟ್ಟಿದ್ದಾನೆ.

ಇದೇ ರೀತಿ ಆರೋಪಿಗಳು ಕಂತು ಸಾಲ ಮತ್ತು ಯಂತ್ರೋಪಕರಣದ ಸಾಲವೆಂದು ನಗರದ ವಿವಿಧ 22 ಬ್ಯಾಂಕುಗಳಿಂದ ಸುಮಾರು 10 ಕೋಟಿ ರೂ. ಸಾಲ ಪಡೆದು ವಂಚಿಸಿರುವುದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ.

ಆರೋಪಿ ನೀಡಿದ ಮಾಹಿತಿ ಮೇರೆಗೆ ಆತನ ಪತ್ನಿ ಸೇರಿದಂತೆ ಐದು ಮಂದಿಯನ್ನು ಬಂಧಿಸಿ ವಿಚಾರಣೆಗೊಳಪಡಿಸಿ ಎಲ್ಲರನ್ನೂ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಪತ್ರಿಕಾಗೋಷ್ಠಿಯಲ್ಲಿಂದು ಮಾಹಿತಿ ನೀಡಿದರು.

ಈ ಪ್ರಕರಣದಲ್ಲಿ ಬ್ಯಾಂಕ್ ಅಧಿಕಾರಿಗಳ ಕೈವಾಡವೂ ಇದೆ ಎಂದು ಪೊಲೀಸರು ಶಂಕಿಸಿದ್ದಾರೆ. ಆರೋಪಿಗಳಿಂದ ಕಮಿಷನ್ ಪಡೆದು ಬ್ಯಾಂಕ್ ಅಧಿಕಾರಿಗಳು ಸಾಲ ಮಂಜೂರು ಮಾಡುವ ಸಾಧ್ಯತೆಗಳಿರುವುದರಿಂದ ನಾವು ಬ್ಯಾಂಕ್‌ಗಳಿಂದ ವಿವರಗಳನ್ನು ಸಂಗ್ರಹಿಸುತ್ತಿದ್ದೇವೆ, ನಾಲ್ಕು ಬ್ಯಾಂಕ್‌ಗಳು ಆರೋಪಿಗಳ ವಿರುದ್ಧ ದೂರು ದಾಖಲಿಸಿವೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com