ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ರೈಸ್ ಪುಲ್ಲರ್ ಮಾರಾಟಕ್ಕೆ ಯತ್ನ, ಮೂವರ ಬಂಧನ

ರೈಸ್ ಪುಲ್ಲರ್ (ಲೋಹದ ಪಾತ್ರೆ) ವ್ಯಾಪಾರಕ್ಕೆ ಯತ್ನಿಸುತ್ತಿದ್ದ ಮೂವರನ್ನು ಜಯನಗರ ಪೊಲೀಸರು ಬಂಧಿಸಿದ್ದು, ಒಂದು ಪಾತ್ರೆ ಮತ್ತು 69 ಲಕ್ಷ ನಗದು ವಶಪಡಿಸಿಕೊಂಡಿದ್ದಾರೆ.

ಬೆಂಗಳೂರು: ರೈಸ್ ಪುಲ್ಲರ್ ( ಲೋಹದ ಪಾತ್ರೆ )ವ್ಯಾಪಾರಕ್ಕೆ ಯತ್ನಿಸುತ್ತಿದ್ದ ಮೂವರನ್ನು ಜಯನಗರ ಪೊಲೀಸರು ಬಂಧಿಸಿದ್ದು, ಒಂದು ಪಾತ್ರೆ ಮತ್ತು 69 ಲಕ್ಷ ನಗದು ವಶಪಡಿಸಿಕೊಂಡಿದ್ದಾರೆ.

ಗ್ಲಾಸ್ ಫ್ಯಾಕ್ಟರಿ ನಡೆಸುತ್ತಿರುವ ಜಯನಗರ 8ನೇ ಬ್ಲಾಕ್ ನಿವಾಸಿ ಶಿವಶಂಕರ್ ಅಲಿಯಾಸ್ ರಾಮು (52), ತಮಿಳುನಾಡು ನಿವಾಸಿ ಅಬ್ದುಲ್ ಸುಖೂರ್ (36) ಮತ್ತು ಪಂಜಾಬ್‌ನ ಸನ್ನಿ ಗಿಲ್ ಅಲಿಯಾಸ್ ಜಗತ್ ಸಿಂಗ್ ಗಿಲ್ (38) ಬಂಧಿತ ಆರೋಪಿಗಳಾಗಿದ್ದಾರೆ. ಇಬ್ಬರು ರಿಯಲ್ ಎಸ್ಟೇಟ್ ಬ್ರೋಕರ್ ಆಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಏಪ್ರಿಲ್13ರಂದು ಜಯನಗರ 6ನೇ ಬ್ಲಾಕ್‌ನ ಯಡಿಯೂರು ಕೆರೆ ಬಳಿ ದೊರೆತ ಸುಳಿವಿನ ಮೇರೆಗೆ ಮೂವರನ್ನು ಬಂಧಿಸಲಾಯಿತು. ರಾಮು ಮತ್ತು ಸುಖೂರ್ ಅವರಿಂದ ರೈಸ್ ಫುಲ್ಲರ್ ಖರೀದಿಸಲು ಸಿಂಗ್ ಪಂಜಾಬ್ ನಿಂದ ಬಂದಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ. ಅವರು ಕಡಿಮೆ ಬೆಲೆಗೆ ಖರೀದಿಸಿ, ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಹಣ ಗಳಿಸಲು ಯೋಜನೆ ರೂಪಿಸಿರುವ ಶಂಕೆ ವ್ಯಕ್ತವಾಗಿದೆ.

ಸಾಂದರ್ಭಿಕ ಚಿತ್ರ
ರೈಸ್ ಪುಲ್ಲರ್ ಹಗರಣ: 35.30 ಲಕ್ಷ ರೂ. ಹಣ ವಶಕ್ಕೆ 8 ಮಂದಿ ಬಂಧನ

"ಮೂವರು ಕಳೆದ ಕೆಲವು ವರ್ಷಗಳಿಂದ ಪರಸ್ಪರ ಸಂಪರ್ಕದಲ್ಲಿದ್ದರು. ಸಿಂಗ್ ರೈಸ್ ಪುಲ್ಲರ್ ಸಂಗ್ರಹಿಸಲು ಬಂದಿದ್ದರು ಮತ್ತು 69 ಲಕ್ಷ ರೂಪಾಯಿ ಹಣವನ್ನು ವಶಪಡಿಸಿಕೊಂಡಿದ್ದಾರೆ. ರಾಮು ಮತ್ತು ಸುಖೂರ್ ಅವರಿಗೆ ರೈಸ್ ಫುಲ್ಲರ್ ಎಲ್ಲಿಂದ ದೊರೆಯಿತು ಎಂಬುದರ ಬಗ್ಗೆ ತಿಳಿಯಲು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com