IVRS, ಬಲ್ಕ್ SMS ಮೂಲಕ ಮತದಾರರಿಗೆ ಮೊಬೈಲ್‌ ಸಂದೇಶ: ತುಷಾರ್ ಗಿರಿನಾಥ್

ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆ ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಮತದಾರರ ಮೊಬೈಲ್‌ಗಳಿಗೆ ಐವಿಆರ್‌ಎಸ್ ಹಾಗೂ ಬಲ್ಕ್ ಎಸ್.ಎಂ.ಎಸ್ ಮೂಲಕ ಏಪ್ರಿಲ್ 26 ರಂದು ತಪ್ಪದೆ ಮತ ಚಲಾಯಿಸಲು ಸಂದೇಶ ಕಳುಹಿಸಲಾಗುವುದೆಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಸೋಮವಾರ ಹೇಳಿದರು.
ತುಷಾರ್ ಗಿರಿನಾಥ್
ತುಷಾರ್ ಗಿರಿನಾಥ್ ತುಷಾರ್ ಗಿರಿನಾಥ್
Updated on

ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆ ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಮತದಾರರ ಮೊಬೈಲ್‌ಗಳಿಗೆ ಐವಿಆರ್‌ಎಸ್ ಹಾಗೂ ಬಲ್ಕ್ ಎಸ್.ಎಂ.ಎಸ್ ಮೂಲಕ ಏಪ್ರಿಲ್ 26 ರಂದು ತಪ್ಪದೆ ಮತ ಚಲಾಯಿಸಲು ಸಂದೇಶ ಕಳುಹಿಸಲಾಗುವುದೆಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಸೋಮವಾರ ಹೇಳಿದರು.

ಲೋಕಸಭಾ ಚುನಾವಣೆ ಸಂಬಂಧ ಮತದಾನದ ಪ್ರಮಾಣವನ್ನು ಹೆಚ್ಚಳ ಮಾಡುವ ನಿಟ್ಟಿನಲ್ಲಿ ಸಾಕಷ್ಟು ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಈಗಾಗಲೇ ಹಲವಾರು ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಆಯಾ ವಲಯಗಳಲ್ಲಿ ತಳ ಮಟ್ಟದಲ್ಲಿ ಯೋಜನೆಗಳನ್ನು ರೂಪಿಸಿಕೊಂಡು ಮತದಾರರಲ್ಲಿ ಅರಿವು ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು.

ಇದೀಗ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಪಾವತಿಸುವವರ ಮಾಹಿತಿಯು ಪಾಲಿಕೆಯ ಕಂದಾಯ ವಿಭಾಗದಲ್ಲಿ ಲಭ್ಯವಿದ್ದು, ಅದರನುಸಾರ ಎಲ್ಲರಿಗೂ ಐವಿಆರ್‌ಎಸ್ ಹಾಗೂ ಬೆಲ್ಕ್ ಎಸ್.ಎಂ.ಎಸ್ ಮೂಲಕ ಏಪ್ರಿಲ್ 26 ರಂದು ತಪ್ಪದೆ ಮತ ಚಲಾಯಿಸಲು ಸಂದೇಶ ಕಳುಗಿಸಲಾಗವುದೆಂದು ತಿಳಿಸಿದರು.

ತುಷಾರ್ ಗಿರಿನಾಥ್
ಲೋಕಸಭಾ ಚುನಾವಣೆ 2024: 2ನೇ ಹಂತದ ಮತದಾನಕ್ಕೆ heat wave ಆತಂಕ; ಆಯೋಗಕ್ಕೆ IMD ಮಾಹಿತಿ

ನಗರ ವ್ಯಾಪ್ತಿಯ ಮತದಾರರ ಪಟ್ಟಿಯಲ್ಲಿರುವ ವಿಶೇಷ ಚೇತನರು ಹಾಗೂ ಹಿರಿಯ ನಾಗರೀಕರು ಸಕ್ಷಮ್ ತಂತ್ರಾಂಶದ ಮೂಲಕ ಸಾರಿಗೆ ವ್ಯವಸ್ಥೆ ಅವಶ್ಯಕತೆ ಇರುವವರು ಮುಂಚಿತವಾಗಿಯೇ ಕಾಯ್ದಿರಿಸಿಕೊಳ್ಳುವ ಸಲುವಾಗಿ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಅದರಂತೆ, ಹಿರಿಯ ನಾಗರೀಕರು ಹಾಗೂ ವಿಶೇಷ ಚೇತನರು ಸಕ್ಷಮ್ ತಂತ್ರಾಂಶದಲ್ಲಿ ಏಪ್ರಿಲ್ 24ನೇ ಸಂಜೆ 5 ಗಂಟೆಯವರೆಗೆ ನೋಂದಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದ್ದು, ಆಯಾ ಸಂಬಂಧಪಟ್ಟ ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ ಹಾಗೂ ಬೆಂಗಳೂರು ಕೇಂದ್ರ ಚುನಾವಣಾಧಿಕಾರಿಗಳು ಅದಕ್ಕೆ ಸೂಕ್ತ ಕ್ರಮ ವಹಿಸಲಿದ್ದಾರೆ ಎಂದರು.

ಸಕ್ಷಮ್ ತಂತ್ರಾಂಶದಲ್ಲಿ ದಿವ್ಯಾಂಗರಿಗೆ(PwDs) ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅಮೂಲ್ಯವಾದ ಸಾಧನವಾಗಿದ್ದು, ದಿವ್ಯಾಂಗರಿಗೆ ನೋಂದಾಯಿಸಲು, ಅವರ ಮತಗಟ್ಟೆಯನ್ನು ಹುಡುಕಲು ಮತ್ತು ಮತ ಚಲಾಯಿಸಲು ಸುಲಭವಾಗುವಂತೆ ಮಾಡಲಿದೆ ಎಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com