ಬೆಂಗಳೂರು: 7 ವರ್ಷಗಳಲ್ಲಿ 'ಇಮ್ಯುನೊ ಡಿಫಿಷಿಯನ್ಸಿ' ಪ್ರಕರಣಗಳಲ್ಲಿ 4 ಪಟ್ಟು ಹೆಚ್ಚಳ!

ನಗರದಲ್ಲಿ ಇಮ್ಯುನೊ ಡಿಫಿಷಿಯನ್ಸಿ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದ್ದು, ಈ ಕುರಿತು ವೈದ್ಯರು ಕಳವಳ ವ್ಯಕ್ತಪಡಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ನಗರದಲ್ಲಿ ಇಮ್ಯುನೊ ಡಿಫಿಷಿಯನ್ಸಿ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದ್ದು, ಈ ಕುರಿತು ವೈದ್ಯರು ಕಳವಳ ವ್ಯಕ್ತಪಡಿಸಿದ್ದಾರೆ.

10 ವರ್ಷಗಳ ಹಿಂದೆ ಈ ಪ್ರಕರಣಗಳು ತಿಂಗಳಿಗೆ 1-2 ವರದಿಯಾಗುತ್ತಿದ್ದವು. ಆದರೆ ಈಗ ಪ್ರತಿ ತಿಂಗಳು ಕನಿಷ್ಠ 10-12 ಪ್ರಕರಣಗಳು ವರದಿಯಾಗುತ್ತಿವೆ. ಆದರೆ, ಕಳೆದ ವರ್ಷ 200 ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ ಎಂದು ತಿಳಿದುಬಂದಿದೆ.

ಆಸ್ಟರ್ CMI ಆಸ್ಪತ್ರೆಯ ಪೀಡಿಯಾಟ್ರಿಕ್ ಇಮ್ಯುನಾಲಜಿ ಮತ್ತು ಸಂಧಿವಾತ ಶಾಸ್ತ್ರದ ಸಲಹೆಗಾರ ಡಾ ಸಾಗರ್ ಭಟ್ಟಡ್ ಅವರು ಮಾತನಾಡಿ, ಈ ಸಮಸ್ಯೆಯಿಂದ ಬಳಲುತ್ತಿರುವ ಮಗು ಪದೇ ಪದೇ ಅನಾರೋಗ್ಯಕ್ಕೆ ಒಳಗಾಗುತ್ತದೆ. ಆಗಾಗ್ಗೆ ಆ್ಯಂಟಿ ಬಯೋಟಿಕ್ ಹಾಕುವಂತಹ ಪರಿಸ್ಥಿತಿ ಇರುತ್ತದೆ. ಒಂದು ಕುಟುಂಬದಲ್ಲಿ ಒಂದಕ್ಕಿಂತ ಹೆಚ್ಚು ಮಕ್ಕಳ ಮೇಲೂ ಇದು ಪರಿಣಾಮ ಬೀರಬಹುದು ಎಂದು ಹೇಳಿದ್ದಾರೆ.

ಸಂಗ್ರಹ ಚಿತ್ರ
ರಾಜ್ಯದಲ್ಲಿ 6 ಕಾಲರಾ ರೋಗ ಪ್ರಕರಣ ಪತ್ತೆ: ಆರೋಗ್ಯ ಇಲಾಖೆ ಆಯುಕ್ತ ಡಿ.ರಂದೀಪ್​ ಮಾಹಿತಿ; ಮಾರ್ಗಸೂಚಿ ಪ್ರಕಟ

ಕಳೆದ ಏಳು ವರ್ಷಗಳಲ್ಲಿ 450 ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ, ವಾರ್ಷಿಕವಾಗಿ 30 ಪ್ರಕರಣಗಳು ವರದಿಯಾಗುತ್ತಿವೆ, ಇತ್ತೀಚಿನ ಕೆಲವು ವರ್ಷಗಳಲ್ಲಿ ಪ್ರತೀ ವರ್ಷ 127 ಪ್ರಕರಣಗಳು ವರದಿಯಾಗುತ್ತಿವೆ. ಈ ಅವಧಿಯಲ್ಲಿ ಪತ್ತೆಯಾದ ಪ್ರಕರಣಗಳ ಸಂಖ್ಯೆಯು ಸರಿಸುಮಾರು ನಾಲ್ಕು ಪಟ್ಟು ಹೆಚ್ಚಾಗಿದೆ. ಇದು ಕಳವಳಕಾರಿ ಬೆಳವಣಿಗೆಯಾಗಿದೆ ಎಂದು ತಿಳಿಸಿದ್ದಾರೆ.

ಮಕ್ಕಳಲ್ಲಿ ಆರಂಭಿಕ ಹಂತದಲ್ಲಿ ರೋಗ ಪತ್ತೆ ಮಾಡುವುದರಿಂದ ಚಿಕಿತ್ಸೆ ಸಾಧ್ಯವಿದೆ. ಇದರಿಂದ ಮರುಕಳಿಸುವ ಸೋಂಕುಗಳು ಮತ್ತು ಅನಗತ್ಯ ಆ್ಯಂಟಿ ಬಯೋಟಿಕ್ ಬಳಕೆಯನ್ನು ಕಡಿಮೆ ಮಾಡಬಹುದು. ಗರ್ಭಾವಸ್ಥೆಯಲ್ಲಿ ಆನುವಂಶಿಕ ಪರೀಕ್ಷೆಗಳಿಂದ ಸಂಭಾವ್ಯ ಸಮಸ್ಯೆಗಳನ್ನು ಪತ್ತೆಹಚ್ಚಬಹುದು ಹಾಗೂ ಅಪಾಯವನ್ನು ತಗ್ಗಿಸಬಹುದು. ಈ ಪರಿಸ್ಥಿತಿಯನ್ನು ನಿಭಾಯಿಸಲು ವಿಶೇಷ ರೋಗನಿರೋಧಕ ಕೇಂದ್ರಗಳ ಸ್ಥಾಪಿಸಿ, ಅಲ್ಲಿ ತರಬೇತಿ ಪಡೆದ ರೋಗನಿರೋಧಕ ತಜ್ಞರು ನೇಮಕ ಮಾಡಿ, ಸಮಗ್ರ ಕಾರ್ಯತಂತ್ರ ರೂಪಿಸುವುದು ಅವಶ್ಯಕವಿದೆ. ಆನುವಂಶಿಕ ಪರೀಕ್ಷೆಯನ್ನು ಹೆಚ್ಚು ಕೈಗೆಟುಕುವಂತೆ ಮಾಡಬೇಕು. ಇದು ಚಿಕಿತ್ಸೆಯ ಪರಿಣಾಮಕಾರಿತ್ವವನ್ನು ಸುಧಾರಿಸುತ್ತದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com