'ಕರ್ನಾಟಕ ನಾಮಕರಣ'ಕ್ಕೆ 50 ವರ್ಷ; ಸರ್ಕಾರಿ ನೌಕರರಿಗೆ ಕೆಂಪು–ಹಳದಿ ಟ್ಯಾಗ್‌ ಕಡ್ಡಾಯಗೊಳಿಸಿದ ರಾಜ್ಯ ಸರ್ಕಾರ

ರಾಜ್ಯ ಸರ್ಕಾರವು ತನ್ನ ನೌಕರರ ಗುರುತಿನ ಚೀಟಿಯ ಕೊರಳುದಾರದ (ಟ್ಯಾಗ್‌) ವಿನ್ಯಾಸವನ್ನು ಬದಲಿಸಿದ್ದು, ಕೆಂಪು–ಹಳದಿ ಬಣ್ಣಗಳನ್ನು ಒಳಗೊಂಡಿರುವ ನೂತನ ಕೊರಳುದಾರವನ್ನು ಧರಿಸಬೇಕು.
red-yellow ID card lanyards for employees
ಸರ್ಕಾರಿ ನೌಕರರಿಗೆ ಕೆಂಪು–ಹಳದಿ ಟ್ಯಾಗ್‌ ಕಡ್ಡಾಯ
Updated on

ಬೆಂಗಳೂರು: ಮೈಸೂರು ಸಂಸ್ಥಾನವು ಕರ್ನಾಟಕ ರಾಜ್ಯ ಎಂದು ನಾಮಕರಣವಾಗಿ 50 ವರ್ಷ ಪೂರ್ಣಗೊಳ್ಳುತ್ತಿರುವ ಹಿನ್ನಲೆಯಲ್ಲಿ ರಾಜ್ಯದ ಸರ್ಕಾರಿ ಉದ್ಯೋಗಿಗಳಿಗೆ ಕೆಂಪು–ಹಳದಿ ಟ್ಯಾಗ್‌ ಕಡ್ಡಾಯಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.

ಹೌದು.. ರಾಜ್ಯ ಸರ್ಕಾರವು ತನ್ನ ನೌಕರರ ಗುರುತಿನ ಚೀಟಿಯ ಕೊರಳುದಾರದ (ಟ್ಯಾಗ್‌) ವಿನ್ಯಾಸವನ್ನು ಬದಲಿಸಿದ್ದು, ಕೆಂಪು–ಹಳದಿ ಬಣ್ಣಗಳನ್ನು ಒಳಗೊಂಡಿರುವ ನೂತನ ಕೊರಳುದಾರವನ್ನು ಧರಿಸಬೇಕು ಎಂದು ಸೂಚಿಸಿದೆ.

red-yellow ID card lanyards for employees
ತುರ್ತು ಪರಿಸ್ಥಿತಿ ಘೋಷಣೆಗೆ 50 ವರ್ಷ: ಭಾರತ ಇತಿಹಾಸದ ಒಂದು ಮೆಲುಕು

ನಮ್ಮ ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಿ 50 ವರ್ಷಗಳಾಗಿವೆ. ಇದಕ್ಕಾಗಿ ನಡೆಸುತ್ತಿರುವ ‘ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ’ ಅಭಿಯಾನದಡಿ ನಾಡ ಧ್ವಜದ ಬಣ್ಣಗಳನ್ನು ಒಳಗೊಂಡ ಟ್ಯಾಗ್‌ ಅನ್ನು ವಿನ್ಯಾಸ ಮಾಡಲಾಗಿದೆ. ಸರ್ಕಾರದ ಎಲ್ಲಾ ನೌಕರರು ಕಡ್ಡಾಯವಾಗಿ ಇದನ್ನು ಧರಿಸಬೇಕು ಎಂದು ರಾಜ್ಯ ಸರ್ಕಾರಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಸುತ್ತೋಲೆ ಹೊರಡಿಸಿದೆ.

ಅಂತೆಯೇ ರಾಜ್ಯ ಸರ್ಕಾರದ ಎಲ್ಲ ಇಲಾಖೆಗಳು, ನಿಗಮ ಮಂಡಳಿಗಳು, ನಿರ್ದೇಶನಾಲಯಗಳು, ಆಯುಕ್ತಾಲಯಗಳು ಮತ್ತು ಸರ್ಕಾರಿ ಸ್ವಾಮ್ಯದ ಕಚೇರಿಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ನೂತನ ಟ್ಯಾಗ್‌ ಅನ್ನು ಧರಿಸಬೇಕು. ತಮ್ಮ ಸಿಬ್ಬಂದಿಗೆ ಈ ಟ್ಯಾಗ್‌ ಅನ್ನು ಒದಗಿಸಲು ಸಂಬಂಧಿತ ಇಲಾಖೆಗಳು ಕ್ರಮವಹಿಸಬೇಕು ಎಂದೂ ಹೇಳಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com