ಚಾಮರಾಜನಗರ: ದಕ್ಷಿಣ ಭಾರತದ ಮೊದಲ ಆದಿವಾಸಿ ಗ್ರಂಥಾಲಯ 'ಕಾನು' ಉದ್ಘಾಟನೆ

ಜೇನು ಕುರುಬ, ಕಾಡು ಕುರುಬರಿಗೆ ಸಂಬಂಧಿಸಿದ ಕೃತಿಗಳನ್ನು ಪ್ರದರ್ಶಿಸಲು ಮತ್ತು ಸಂಶೋಧನೆಯನ್ನು ಉತ್ತೇಜಿಸಲು ಈ ವಿಶೇಷ ಗ್ರಂಥಾಲಯವನ್ನು ಸ್ಥಾಪಿಸಲು ನಿರ್ಧರಿಸಿದರು.
South India’s first adivasi library ‘Kaanu’
ಆದಿವಾಸಿ ಗ್ರಂಥಾಲಯ ‘ಕಾನು’
Updated on

ಮೈಸೂರು: ದಕ್ಷಿಣ ಭಾರತದ ಮೊದಲ ಆದಿವಾಸಿ ಗ್ರಂಥಾಲಯ ‘ಕಾನು’ ಆಗಸ್ಟ್ 25 ರಂದು ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನ ಬೆಟ್ಟದಲ್ಲಿ ಉದ್ಘಾಟನೆಗೊಳ್ಳಲಿದೆ. ‘ಕಾನು’ ಎಂದರೆ ಸೋಲಿಗ ಭಾಷೆಯಲ್ಲಿ ನಿತ್ಯಹರಿದ್ವರ್ಣ ಕಾಡು ಎಂದರ್ಥ. ಇದು ದಕ್ಷಿಣ ಭಾರತದ ಮೊದಲ ಆದಿವಾಸಿ ಜ್ಞಾನ ಕೇಂದ್ರವಾಗಲಿದೆ.

ದಕ್ಷಿಣ ಭಾರತದಲ್ಲಿ ಆದಿವಾಸಿಗಳಿಗೆ ಸಂಬಂಧಿಸಿದ ವಿವಿಧ ಅಂಶಗಳ ಸಂಶೋಧನೆಗೆ ಮೀಸಲಾದ ಯಾವುದೇ ಸಂಸ್ಥೆ ಇಲ್ಲ. ಬುಡಕಟ್ಟು ಸಮುದಾಯಗಳ ವಿದ್ವಾಂಸರು ಕಳೆದ ವರ್ಷ ಬಿಆರ್ ಹಿಲ್ಸ್‌ನ ವೈದ್ಯಕೀಯ ಮತ್ತು ಸಾರ್ವಜನಿಕ ಆರೋಗ್ಯ ಸಂಶೋಧಕರಾದ ಪ್ರಶಾಂತ್ ಎನ್ ಶ್ರೀನಿವಾಸ್ ಮತ್ತು ಜರ್ಮನಿಯ ವ್ರೇನರ್ ಅವರೊಂದಿಗೆ ಮಾತುಕತೆ ನಡೆಸಿದರು. ಜೇನು ಕುರುಬ, ಕಾಡು ಕುರುಬರಿಗೆ ಸಂಬಂಧಿಸಿದ ಕೃತಿಗಳನ್ನು ಪ್ರದರ್ಶಿಸಲು ಮತ್ತು ಸಂಶೋಧನೆಯನ್ನು ಉತ್ತೇಜಿಸಲು ಈ ವಿಶೇಷ ಗ್ರಂಥಾಲಯವನ್ನು ಸ್ಥಾಪಿಸಲು ನಿರ್ಧರಿಸಿದರು.

ದಕ್ಷಿಣ ಭಾರತ ಆದಿವಾಸಿ ಜ್ಞಾನ ಕೇಂದ್ರ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಕರ್ನಾಟಕ, ಕೇರಳ, ತಮಿಳುನಾಡು ಸುತ್ತಮುತ್ತಲ ಸೋಲಿಗ ಜನಾಂಗದ ಜ್ಞಾನ ಪರಂಪರೆ, ನೈಪುಣ್ಯತೆ, ಕಲೆ, ಸಂಪ್ರದಾಯ, ಸಂಸ್ಕೃತಿಗಳ ಬಗ್ಗೆ ಚರ್ಚೆ ನಡೆಯಲಿದೆ. ಹಾಡಿಗಳ ಇತಿಹಾಸ, ಅರಣ್ಯ ಆಧಾರಿತ ಕೃಷಿ, ಕಟ್ಟುಪಾಡು, ಸಾಮಾಜಿಕ ವ್ಯವಸ್ಥೆ ಮೊದಲಾದ ಸಂಕೀರ್ಣ ವ್ಯವಸ್ಥೆಗಳ ಬಗ್ಗೆ ಬಂದಿರುವ ಪ್ರಕಟಣೆಗಳ ಬಗ್ಗೆ ತಿಳಿಸಲಾಗುತ್ತದೆ.

South India’s first adivasi library ‘Kaanu’
ಆದಿವಾಸಿ ಗ್ರಂಥಾಲಯ ‘ಕಾನು’

‘ಕಾನು’ ಇನ್‌ಸ್ಟಿಟ್ಯೂಟ್ ಆಫ್ ಪಬ್ಲಿಕ್ ಹೆಲ್ತ್ ಕಟ್ಟಡದಲ್ಲಿ 1,200 ಪುಸ್ತಕಗಳು, ಸಂಶೋಧನಾ ಪ್ರಬಂಧಗಳು ಮತ್ತು ಆದಿವಾಸಿಗಳು ಮತ್ತು ಆದಿವಾಸಿಗಳಲ್ಲದ ದಕ್ಷಿಣ ಭಾರತದ ಅರಣ್ಯ ಬುಡಕಟ್ಟುಗಳ ಸಮಕಾಲೀನ ಕೃತಿಗಳೊಂದಿಗೆ ಸ್ಥಾಪಿಸಲಾಗಿದೆ. ಅರಣ್ಯಗಳಲ್ಲಿ ವಾಸಿಸುವ ಬುಡಕಟ್ಟು ಜನರ ಕುರಿತು ಸಂಶೋಧನೆ ನಡೆಸುತ್ತಿರುವ ವಿದ್ಯಾರ್ಥಿಗಳು ಮತ್ತು ವಿದ್ವಾಂಸರು ‘ಕಾನು’ಗೆ ಭೇಟಿ ನೀಡಿ ಅಲ್ಲಿನ ಸೌಲಭ್ಯಗಳನ್ನು ಬಳಸಿಕೊಳ್ಳಬಹುದು.

ಈವರೆಗೆ ಸೋಲಿಗರ ಬಗೆಗಿನ ಮೂಲ ಜ್ಞಾನ ಪರಂಪರೆ, ಮೂಲ ಶಿಕ್ಷಣ, ಮಾಹಿತಿ, ಪುಸ್ತಕ, ಲೇಖನ, ಬ್ಲಾಗ್‌ಗಳ ಬಗ್ಗೆ ತಜ್ಞರು ಮಾತನಾಡಲಿದ್ದಾರೆ ಎಂದು ಜಿಲ್ಲಾ ಬುಟಕಟ್ಟು ಸಂಘದ ಕಾರ್ಯದರ್ಶಿ ಸಿ.ಮಾದೇಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ 250 ಆದಿವಾಸಿಗಳು ಪದವಿ ಮತ್ತು ಪಿಜಿ ವ್ಯಾಸಂಗ ಮಾಡುತ್ತಿದ್ದರೂ ಅವರ ಸಮುದಾಯಕ್ಕೆ ಸಂಬಂಧಿಸಿದ ವಿವರಗಳನ್ನು ನೀಡುವ ಗ್ರಂಥಾಲಯ ಇಲ್ಲ. ಆದಿವಾಸಿಗಳು ಈಗ ಶಿಕ್ಷಣದತ್ತ ಒಲವು ತೋರುತ್ತಿದ್ದಾರೆ ಎಂದ ಅವರು, ಚಾಮರಾಜನಗರದಲ್ಲಿ ಅವರಿಗಾಗಿ ಹಲವಾರು ಪ್ರೇರಣಾ ಶಿಬಿರಗಳನ್ನು ನಡೆಸಲಾಗಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com