ತಮಿಳುನಾಡು ಮಾದರಿ ಅನುಸರಿಸಿ, ನಮಗೂ ಉಚಿತ ಉನ್ನತ ಶಿಕ್ಷಣ ನೀಡಿ: ಸರ್ಕಾರಕ್ಕೆ ತೃತೀಯಲಿಂಗಿಗಳ ಆಗ್ರಹ

ತಮಿಳುನಾಡು ಮಾದರಿ ಅನುಸರಿಸಿ, ನಮಗು ಉಚಿತ ಉನ್ನತ ಶಿಕ್ಷಣ ಒದಗಿಸಬೇಕೆಂದು ಸರ್ಕಾರಕ್ಕೆ ತೃತೀಯಲಿಂಗಿಗಳ ಆಗ್ರಹಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ತಮಿಳುನಾಡು ಮಾದರಿ ಅನುಸರಿಸಿ, ನಮಗು ಉಚಿತ ಉನ್ನತ ಶಿಕ್ಷಣ ಒದಗಿಸಬೇಕೆಂದು ಸರ್ಕಾರಕ್ಕೆ ತೃತೀಯಲಿಂಗಿಗಳ ಆಗ್ರಹಿಸಿದ್ದಾರೆ.

ತಮಿಳುನಾಡು ಸರ್ಕಾರ ಇತ್ತೀಚೆಗೆ ಮಂಡಿಸಿದ ಬಜೆಟ್ ನಲ್ಲ ಉನ್ನತ ಶಿಕ್ಷಣ ಕೋರ್ಸ್‌ಗಳಿಗೆ ಸೇರಲು ಇಚ್ಛಿಸುವ ತೃತೀಯಲಿಂಗಿಗಳಿಗೆ ಎಲ್ಲಾ ಶೈಕ್ಷಣಿಕ ವೆಚ್ಚಗಳನ್ನು ಭರಿಸುವುದಾಗಿ ಘೋಷಿಸಿದೆ.

ಈ ಘೋಷಣೆಯು ರಾಜ್ಯದಲ್ಲಿರುವ ತೃತೀಯಲಿಂಗಿಗಳ ಗಮನ ಸಳೆದಿದ್ದು, ರಾಜ್ಯ ಸರ್ಕಾರ ಕೂಡ ಇಂತಹ ಸೌಲಭ್ಯಗಳನ್ನು ನೀಡಬೇಕು ಎಂದು ಆಗ್ರಹಿಸುತ್ತಿವೆ.

ಸರ್ಕಾರ ‘ಟ್ರಾನ್ಸ್ಜೆಂಡರ್ ವೆಲ್ಫೇರ್ ಬೋರ್ಡ್’ ಅನ್ನು ರಚಿಸಬೇಕು, ಇದು ನಮ್ಮ ಸಮುದಾಯದ ಸಮಗ್ರ ಕಲ್ಯಾಣಕ್ಕೆ ಅಗತ್ಯವಾಗಿದೆ. ನೆರೆಯ ರಾಜ್ಯಗಳು ಇಂತಹ ಕ್ರಮಗಳನ್ನು ಕೈಗೊಳ್ಳುತ್ತಿರುವಾಗ ರಾಜ್ಯ ಸರ್ಕಾರಕ್ಕೇಕೆ ಆಗುವುದಿಲ್ಲ ಎಂದು ಪ್ರಶ್ನಿಸಿದ್ದಾರೆ.

ಸಾಂದರ್ಭಿಕ ಚಿತ್ರ
ಚಿಕ್ಕಮಗಳೂರು: ಕೃಷಿ ಮೂಲಕ ಕಳಂಕ ರಹಿತ ಬದುಕು ಕಟ್ಟಿಕೊಂಡ ತೃತೀಯಲಿಂಗಿಗಳು!

ತಮಿಳುನಾಡು ಸರ್ಕಾರ ತೃತೀಯಲಿಂಗಿಗಳ ಕಲ್ಯಾಣಕ್ಕಾಗಿ ರೂ 2 ಕೋಟಿಗಳನ್ನು ಮೀಸಲಿಟ್ಟಿದ್ದು, ಶಿಕ್ಷಣ ಮತ್ತು ಹಾಸ್ಟೆಲ್ ಶುಲ್ಕದಂತಹ ಶೈಕ್ಷಣಿಕ ವೆಚ್ಚಗಳನ್ನು ಭರಿಸುತ್ತಿದೆ. ತಮ್ಮ ಉನ್ನತ ಶಿಕ್ಷಣವನ್ನು ಪಡೆಯಲು ಮತ್ತು ಮುಖ್ಯವಾಹಿನಿಯ ಬರಲು ಬಯಸುವವರಿಗೆ ನೆರವು ನೀಡುತ್ತಿದೆ ಎಂದು ಹೇಳಿದ್ದಾರೆ.

ಟ್ರಾನ್ಸ್ ರೈಟ್ಸ್ ಸಂಸ್ಥೆಯ ಸಂಸ್ಥಾಪಕಿ ಸನಾ ಶ್ರೀ ಅವರು ಮಾತನಾಡಿ, ಉನ್ನತ ಶಿಕ್ಷಣ ಬಯಸುವ ಸಾಕಷ್ಟು ಜನರಿಗೆ ನಾನು ಸಹಾಯ ಮಾಡುತ್ತೇನೆ. ಆದರೆ, ಅದು ಬೆರಳೆಣಿಕೆಯಷ್ಟು ಜನರು ಮಾತ್ರ ಎಂದು ಹೇಳಿದ್ದಾರೆ.

“ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ (ಬಿಯು) ಶೇ.1ರಷ್ಟು ಮೀಸಲಾತಿ ಇದೆ. ಆದರೆ, ಅದು ಸಾಕಾಗುವುದಿಲ್ಲ, ತಮಿಳುನಾಡು ಸರ್ಕಾರ ತೃತೀಯಲಿಂಗಿಗಳ ಸಂಪೂರ್ಣ ಜವಾಬ್ದಾರಿಯನ್ನು ಹೇಗೆ ತೆಗೆದುಕೊಂಡಿದೆಯೋ ಹಾಗೆ ಇಲ್ಲಿನ ಸರ್ಕಾರ ಕೂಡ ಮಾಡಬೇಕು. ಶೈಕ್ಷಣಿಕ ಕ್ಷೇತ್ರದಲ್ಲಿ ಮೀಸಲಾತಿಯನ್ನು ತೃತೀಯಲಿಂಗಿಗಳ ಮೂಲಭೂತ ಹಕ್ಕಾಗಿ ನೋಡಬೇಕು. ನಾವು ಉನ್ನತ ಶಿಕ್ಷಣವನ್ನು ಮುಂದುವರಿಸಲು ಬಯಸುತ್ತಿದ್ದೇವೆ. ಆದರೆ, ನಮ್ಮ ಮುಂದೆ ಕಡಿಮೆ ಆಯ್ಕೆಗಳಿವೆ ಎಂದು ತಿಳಿಸಿದ್ದಾರೆ.

ಸಾಂದರ್ಭಿಕ ಚಿತ್ರ
ಕರ್ನಾಟಕ ವಿಧಾನಸಭಾ ಚುನಾವಣೆ; ನಮ್ಮ ಮತಕ್ಕೂ ಮೌಲ್ಯವಿದೆ: ತೃತೀಯಲಿಂಗಿಗಳು

ಅದಲ್ಲದೇ, ಮೈತ್ರಿ ಪಿಂಚಣಿಯನ್ನು ಕೇವಲ 400 ರೂ.ಗಳಿಂದ 800 ರೂ.ಗಳಿಗೆ ಹೆಚ್ಚಿಸಲಾಗಿದೆ. ನಾವೂ ಕೂಡ ಕಾಲೇಜಿಗೆ ಹೋಗಬೇಕು. ನಮ್ಮ ಗುರ್ತಿಕೆಯನ್ನು ಪಡೆಯಬೇಕು. ಇಷ್ಟು ಸಣ್ಣ ಮೊತ್ತದಲ್ಲಿ ನಮ್ಮ ಖರ್ಚುಗಳನ್ನು ಹೇಗೆ ಪೂರೈಸಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ.

ತೃತೀಯಲಿಂಗಿ ಹಕ್ಕುಗಳ ಕಾರ್ಯಕರ್ತೆ ಅಕ್ಕೈ ಪದ್ಮಶಾಲಿ ಅವರು ಮಾತನಾಡಿ, ಪ್ರಸಕ್ತ ಸಾಲಿನ ಬಜೆಟ್ ನಲ್ಲಿ ತೃತೀಯಲಿಂಗಿಗಳಿಗೆ ಏನನ್ನೂ ನೀಡಲಾಗಿಲ್ಲ. ಈ ಬಾರಿಯ ಬಜೆಟ್ ಹೆಚ್ಚು ಅನುಕೂಲಕರವಾಗಿಲ್ಲ. ನಮ್ಮ ಬೇಡಿಕೆಗಳನ್ನು ನಿರಂತರವಾಗಿ ನಿರ್ಲಕ್ಷಿಸಲಾಗಿದೆ. 2017ರಲ್ಲಿ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ತೃತೀಯಲಿಂಗಿ ಕಲ್ಯಾಣ ಮಂಡಳಿಗೆ ಸಂಪುಟ ಅನುಮೋದನೆ ನೀಡಿತ್ತು. ಈ ವರ್ಷ ಹೊಸ ನಿರ್ಣಯಗಳನ್ನು ನಿರೀಕ್ಷಿಸಿದ್ದೆವು. ಆದರೆ, ಎಲ್ಲವೂ ಹುಸಿಯಾಯಿತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ತೃತೀಯಲಿಂಗಿಗಳ ಎನ್‌ಜಿಒ ಖಜಾಂಚಿ ರಕ್ಷಿತಾ ಅವರು ಮಾತನಾಡಿ, ಸಮುದಾಯದ ಶಿಕ್ಷಣ ಸೇರ್ಪಡೆಗಾಗಿ ಶಿಫಾರಸುಗಳ ಪಟ್ಟಿಯೊಂದಿಗೆ ನಾವು ಇತ್ತೀಚೆಗೆ ಪ್ರಾಥಮಿಕ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರನ್ನು ಭೇಟಿ ಮಾಡಿದ್ದೆವು. ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಅವರು ಭರವಸೆ ನೀಡಿದ್ದರು ರಾಜ್ಯದ ಕೆಲವು ಖಾಸಗಿ ವಿಶ್ವವಿದ್ಯಾನಿಲಯಗಳು ತೃತೀಯಲಿಂಗಿಗಳಿಗೆ ವಿದ್ಯಾರ್ಥಿವೇತನ ನೀಡಲು ಮುಂದೆ ಬಂದಿವೆ. ಆದರೆ, ಈ ಸಂಖ್ಯೆ ಕಡಿಮೆಯಾಗಿದೆ. ಸರ್ಕಾರದ ನೆರವಿನ ಅಗತ್ಯವಿದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com