ಹಣ ನೀಡದ ಚಿಕ್ಕಮ್ಮನ ಕೊಂದು ಬೆಂಕಿ ಇಟ್ಟು ಎಸ್ಕೇಪ್: ಬಿಟೆಕ್ ವಿದ್ಯಾರ್ಥಿ ಬಂಧನ

ತನ್ನ ದುಶ್ಚಟಗಳಿಗೆ ಹಣ ನೀಡದ ಚಿಕ್ಕಮ್ಮನ ಕತ್ತು ಹಿಸುಕಿ ಹತ್ಯೆಗೈದು, ಬಳಿಕ ಮೃತದೇಹದ ಮೇಲೆ ಪೆಟ್ರೋಲ್‌ ಸುರಿದು ಬೆಂಕಿಹಚ್ಚಿ ಸುಟ್ಟು ಪರಾರಿಯಾಗಿದ್ದ ಬಿಟೆಕ್‌ ವಿದ್ಯಾರ್ಥಿಯನ್ನು ಎಲೆಕ್ಟ್ರಾನಿಕ್‌ ಸಿಟಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ತನ್ನ ದುಶ್ಚಟಗಳಿಗೆ ಹಣ ನೀಡದ ಚಿಕ್ಕಮ್ಮನ ಕತ್ತು ಹಿಸುಕಿ ಹತ್ಯೆಗೈದು, ಬಳಿಕ ಮೃತದೇಹದ ಮೇಲೆ ಪೆಟ್ರೋಲ್‌ ಸುರಿದು ಬೆಂಕಿಹಚ್ಚಿ ಸುಟ್ಟು ಪರಾರಿಯಾಗಿದ್ದ ಬಿಟೆಕ್‌ ವಿದ್ಯಾರ್ಥಿಯನ್ನು ಎಲೆಕ್ಟ್ರಾನಿಕ್‌ ಸಿಟಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಸುಕನ್ಯಾ (37) ಹತ್ಯೆಯಾದ ದುರ್ದೈವಿ. ಜಶ್ವಂತ್ ಬಂಧಿತ ಆರೋಪಿ. ಫೆಬ್ರವರಿ 12 ರಂದು ಮಹಿಳೆ ನಾಪತ್ತೆಯಾಗಿದ್ದಳು. ಈ ಸಂಬಂಧ ಆಕೆಯ ಪತಿ ದೂರು ದಾಖಲಿಸಿದ್ದರು. ಇದಾದ ಒಂದು ವಾರದ ನಂತರ ಬೆಂಗಳೂರಿನ ಹೊರವಲಯದಲ್ಲಿರುವ ಎಸ್ ಬಿಂಗಿಪುರ ಗ್ರಾಮದ ಬಳಿ ಸುಟ್ಟ ತಲೆಬುರುಡೆ ಹಾಗೂ ಮೂಳೆಗಲು ಪತ್ತೆಯಾಗಿದ್ದವು.

ನಾಪತ್ತೆ ದೂರು ದಾಖಲಾಗಿದ್ದನ್ನು ಗಮನಿಸಿದ್ದ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿದ್ದರು. ಇದರಂತೆ ಜಶ್ವಂತ್ ಜೊತೆ ಸುಕನ್ಯಾ ಅವರು ಬನ್ನೇರುಘಟ್ಟದಲ್ಲಿರುವುದನ್ನು ಪತ್ತೆ ಮಾಡಿದ್ದರು.

ಸಂಗ್ರಹ ಚಿತ್ರ
ಬೆಂಗಳೂರು ನಗರದಲ್ಲಿ ಶೇ. 25ರಷ್ಟು ಸೈಬರ್ ಅಪರಾಧ: ಅಲೋಕ್ ಮೋಹನ್

ತಂದೆ ಇಲ್ಲದ ಜಶ್ವಂತ್ ಸುಕನ್ಯಾ ಅವರ ಮನೆಯಲ್ಲಿಯೇ ಬೆಳೆದಿದ್ದ. ಅಗತ್ಯವಿದ್ದಾಗಲೆಲ್ಲಾ ಸುಕನ್ಯಾ ಬಳಿ ಹಣ ಕೇಳುತ್ತಿದ್ದ. ಇದರಂತೆ ಕೆಲ ದಿನಗಳ ಹಿಂದೆ ಕೂಡ ಸುಕನ್ಯಾ ಬಳಿ ಹಣ ಕೇಳಿದ್ದಾನೆ. ಆದರೆ, ಈವೇಳೆ ಆಕೆ ನಿರಾಕರಿಸಿದ್ದು, ಇದರಿಂದಾಗಿ ತನ್ನ ಅಗತ್ಯತೆ ಪೂರೈಸಿಕೊಳ್ಳಲು ಜಶ್ವಂತ್ ಆಕೆಯ ಚಿನ್ನದ ಸರ ದೋಚಲು ಕೊಲೆ ಮಾಡಲು ರೂಪಿಸಿದ್ದಾನೆ. ಇದರಂತೆ ಹೊಸೂರಿನಲ್ಲಿ ಪೆಟ್ರೋಲ್ ಖರೀದಿಸಿದ್ದಾನೆ.

ಸುಕನ್ಯಾ ಅವರನ್ನು ಬನ್ನೇರುಘಟ್ಟ ಸಮೀಪದ ದೂರ ಪ್ರದೇಶಕ್ಕೆ ಕರೆದೊಯ್ದಿರುವ ಆರೋಪಿ, ನಂತರ ಆಕೆಯ ಕತ್ತು ಹಿಸುಕಿ ಹತ್ಯೆ ಮಾಡಿದ್ದಾನೆ. ಬಳಿಕ ಆಕೆಯ ಮೃತದೇಹಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ತನಿಖೆ ವೇಳೆ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ. ಈ ಸಂಬಂಧ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com