'ಪಲ್ಲಕ್ಕಿ' ಸೇವೆಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ: ಮತ್ತಷ್ಟು ಬಸ್ ಗಳ ಸೇರ್ಪಡೆಗೆ ಕೆಎಸ್ಆರ್​ಟಿಸಿ ಮುಂದು!

'ಪಲ್ಲಕ್ಕಿ' ಉತ್ಸವ ಹೆಸರಿನ ಐಷಾರಾಮಿ ಸ್ಲೀಪರ್ ಬಸ್ ಸೇವಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಇನ್ನೂ 100 ಪಲ್ಲಕ್ಕಿ ಸ್ಲೀಪರ್ ಬಸ್ ಗಳ ಸೇರ್ಪಡೆಗೊಳಿಸಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ನಿರ್ಧರಿಸಿದೆ ಎಂದು ತಿಳಿದುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: 'ಪಲ್ಲಕ್ಕಿ' ಉತ್ಸವ ಹೆಸರಿನ ಐಷಾರಾಮಿ ಸ್ಲೀಪರ್ ಬಸ್ ಸೇವಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಇನ್ನೂ 100 ಪಲ್ಲಕ್ಕಿ ಸ್ಲೀಪರ್ ಬಸ್ ಗಳ ಸೇರ್ಪಡೆಗೊಳಿಸಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ನಿರ್ಧರಿಸಿದೆ ಎಂದು ತಿಳಿದುಬಂದಿದೆ.

‘ಸಂತೋಷವು ಪ್ರಯಾಣಿಸುತ್ತಿದೆ’ ಎಂಬ ಅಡಿಬರಹದ ಅಡಿಯಲ್ಲಿ ಕಾರ್ಯನಿರ್ವಹಿಸುವ ಪಲ್ಲಕ್ಕಿ ಬಸ್‌ ಸೇವೆಗಳು ಪ್ರಾರಂಭವಾದಾಗಿನಿಂದ ಪೂರ್ಣ ಸಾಮರ್ಥ್ಯದೊಂದಿಗೆ ಸಂಚರಿಸುತ್ತಿವೆ. ಬಸ್ ಗಳು ಬಜೆಟ್ ಸ್ನೇಹಿಯಾಗಿದ್ದು, ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.

ಐರಾವತ, ಅಂಬಾರಿ ರೀತಿಯಲ್ಲೇ ಅತ್ಯಾಧುನಿಕ ವ್ಯವಸ್ಥೆಗಳನ್ನು ಹೊಂದಿರುವ 'ಪಲ್ಲಕ್ಕಿ' ಉತ್ಸವ ಬಸ್‌ಗಳಿಗೆ ಅಕ್ಟೋಬರ್‌ 7ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂರಿನಲ್ಲಿ ಚಾಲನೆ ನೀಡಿದ್ದರು. ಕೆಎಸ್‌ಆರ್‌ಟಿಸಿಯು 40 ಬಸ್‌ಗಳನ್ನು ರಸ್ತೆಗಿಳಿಸಿತ್ತು.

ಪಲ್ಲಕ್ಕಿ ನಾನ್‌ ಎ.ಸಿ. ಸ್ಲೀಪರ್‌ ಬಸ್ ಆಗಿದ್ದು, 30 ಸ್ಲೀಪರ್‌ ಬರ್ತ್ ಹೊಂದಿದೆ. ಪ್ರತೀ ಸ್ಲೀಪರ್‌ನಲ್ಲಿ ಮೊಬೈಲ್‌ ಹೋಲ್ಡರ್‌, ಮೊಬೈಲ್‌ ಚಾರ್ಜರ್‌, ಪಾದರಕ್ಷೆ ಇಡುವ ವ್ಯವಸ್ಥೆ ಕೂಡ ಹೊಂದಿದೆ. ಎಮೆರ್ಜೆನಿ ಅಲರ್ಟ್‌ ವ್ಯವಸ್ಥೆ, ಆಡಿಯೋ ಮೂಲಕ ಪ್ರಯಾಣಿಕರಿಗೆ ಮಾಹಿತಿ ನೀಡುವ ಮತ್ತು ಪ್ರಯಾಣಿಕರಿಂದ ಮಾಹಿತಿ ಪಡೆಯುವ ಸೌಕರ್ಯವಿದೆ. ಸೀಟ್‌ ನಂಬರ್‌ ಮೇಲೆ ಎಲ್‌ಇಡಿ ಬೆಳಕು, ಡಿಜಿಟಲ್‌ ಗಡಿಯಾರ, ಎಲ್‌ಇಡಿ ಫ್ಲೋರ್‌ ಮುಂತಾದ ಸವಲತ್ತುಗಳಿವೆ. ಚಾಲಕನಿಗೆ ನೆರವಾಗುವ ಅತ್ಯಾಧುನಿಕ ಬ್ಯಾಕ್‌ ಕ್ಯಾಮೆರಾವೂ ಇದೆ.

ಕೆಎಸ್‌ಆರ್‌ಟಿಸಿ ಎಂಡಿ ಅನ್ಬು ಕುಮಾರ್ ಮಾತನಾಡಿ, “ಅಕ್ಟೋಬರ್‌ನಲ್ಲಿ ಪಲ್ಲಕ್ಕಿ ಸ್ಲೀಪರ್ ಬಸ್‌ಗಳನ್ನು ಪರಿಚಯಿಸಲಾಗಿತ್ತು. ಅಂದಿನಿಂದ ಇದು ಕೆಎಸ್‌ಆರ್‌ಟಿಸಿಯ ಅತ್ಯಂತ ಬೇಡಿಕೆಯ ಸೇವೆಗಳಲ್ಲಿ ಒಂದಾಗಿದೆ. ಈ ವರ್ಷ 40 ಬಸ್‌ಗಳನ್ನು ರಸ್ತೆಗಿಳಿಸಲಾಗಿತ್ತು. ಬಸ್ ಗಳಿಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆಗಳು ಬಂದಿವೆ.  ಹೀಗಾಗಿ ಈ ವರ್ಷ ಇನ್ನೂ 100 ಪಲ್ಲಕ್ಕಿ ಬಸ್‌ಗಳ ಸೇರ್ಪಡೆಗೊಳಿಸಲಾಗುವುದು ಎಂದು ಹೇಳಿದ್ದಾರೆ.

ನಮ್ಮಲ್ಲಿ ಅನೇಕ ಸ್ಲೀಪರ್ ಬಸ್ ಸೇವೆಗಳಿವೆ. ಇತ್ತೀಚೆಗೆ ಅಂಬಾರಿ ಉತ್ಸವ, ಅಂಬಾರಿ ಡ್ರೀಮ್ ಕ್ಲಾಸ್ ಬಸ್ ಗಳನ್ನು ಪರಿಚಯಿಸಲಾಗಿತ್ತು. ಇವು ಪ್ರೀಮಿಯಂ ಮತ್ತು ಹವಾನಿಯಂತ್ರಿತ ಬಸ್ ಗಳಾಗಿವೆ. ಈ ಸೇವೆಗಳ ಬೆಲೆಗಳು ಕೂಡ ಬಜೆಟ್ ಫ್ಲೆಂಡ್ಲಿಯಾಗಿದೆ. ಆದಾಗ್ಯೂ, ಪಲ್ಲಕ್ಕಿ ನಾನ್-ಎಸಿ ಸ್ಲೀಪರ್ ಬಸ್ ಗಳನ್ನು ಪರಿಚಯಿಸಲಾಗಿತ್ತು. ಇದೂ ಕೂಡ ಬಜೆಟ್ ಸ್ನೇಹಿಯಾಗಿದೆ, ಹೀಗಾಗಿ ಇದಕ್ಕೆ ಬೇಡಿಕೆ ಹೆಚ್ಚುತ್ತಿದೆ ಎಂದು ತಿಳಿಸಿದ್ದಾರೆ.

ಎಸಿ ಸ್ಲೀಪರ್ ಬಸ್‌ಗಳಲ್ಲಿ ಪ್ರಯಾಣಿಸುವುದನ್ನು ತಪ್ಪಿಸಲು ಬಯಸುವವರು ಪಲ್ಲಕ್ಕಿಯನ್ನು ಇಷ್ಟಪಡುತ್ತಾರೆ. ಈ ಬಸ್‌ಗಳು ಜನರನ್ನು ಆಯಾಸವಿಲ್ಲದೆ ದೂರದ ಸ್ಥಳಗಳ ತಲುಪಲು ಸಹಾಯ ಮಾಡುತ್ತವೆ. ಮುಂದಿನ ದಿನಗಳಲ್ಲಿ ಈ ಸೇವೆಗೆ ಇನ್ನೂ 100 ಪಲ್ಲಕ್ಕಿ ಬಸ್‌ಗಳ ಸೇರ್ಪಡೆಗೊಳಿಸಲಾಗುವುದು. ಬೆಂಗಳೂರು ಮತ್ತು ಇತರ ಜಿಲ್ಲೆಗಳಿಂದ ದೂರದ ಸ್ಥಳಗಳಿಗೆ ತೆರಳುವ ಜನರಿಗೆ ಇವು ಉತ್ತಮ ಸೇವಗಳನ್ನು ನೀಡುತ್ತವೆ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com