ಬೆಂಗಳೂರು: ಕಾರಿನಲ್ಲಿ ಕುಳಿತಿದ್ದ ಮಹಿಳೆ ಎದುರು ಅನುಚಿತವಾಗಿ ವರ್ತಿಸಿದ ವ್ಯಕ್ತಿ, ತನಿಖೆ ಕೈಗೆತ್ತಿಕೊಂಡ ಪೊಲೀಸರು

ಬೆಂಗಳೂರು ಮೂಲದ ಮಹಿಳೆಯೊಬ್ಬರು ಬ್ಯುಸಿನೆಸ್ ಪಾರ್ಕ್‌ ಬಳಿ ಕಾರಿನೊಳಗೆ ಕುಳಿತಿದ್ದಾಗ ಪುರುಷನೊಬ್ಬ ತನ್ನ ಕಡೆಗೆ ಅನುಚಿತವಾಗಿ ವರ್ತಿಸುವ ಮತ್ತು ಅಶ್ಲೀಲ ಸನ್ನೆಗಳನ್ನು ಮಾಡುವ ಮೂಲಕ ಕಿರುಕುಳ ನೀಡಿದ್ದಾನೆ ಎಂದು ಸಾಮಾಜಿಕ ಮಾಧ್ಯಮದ ಮೂಲಕ ಆರೋಪಿಸಿದ್ದಾರೆ. 
ಲೈಂಗಿಕ ಕಿರುಕುಳ
ಲೈಂಗಿಕ ಕಿರುಕುಳ

ಬೆಂಗಳೂರು: ಬೆಂಗಳೂರು ಮೂಲದ ಮಹಿಳೆಯೊಬ್ಬರು ಬ್ಯುಸಿನೆಸ್ ಪಾರ್ಕ್‌ ಬಳಿ ಕಾರಿನೊಳಗೆ ಕುಳಿತಿದ್ದಾಗ ಪುರುಷನೊಬ್ಬ ತನ್ನ ಕಡೆಗೆ ಅನುಚಿತವಾಗಿ ವರ್ತಿಸುವ ಮತ್ತು ಅಶ್ಲೀಲ ಸನ್ನೆಗಳನ್ನು ಮಾಡುವ ಮೂಲಕ ಕಿರುಕುಳ ನೀಡಿದ್ದಾನೆ ಎಂದು ಸಾಮಾಜಿಕ ಮಾಧ್ಯಮದ ಮೂಲಕ ಆರೋಪಿಸಿದ್ದಾರೆ. 

ಈ ಕುರಿತು ಮಾಡಿರುವ ಪೋಸ್ಟ್‌ನಲ್ಲಿ, ಜನವರಿ 5 ರಂದು ಈ ಘಟನೆ ಸಂಭವಿಸಿದ್ದು, ಇಂದು ಬೆಳಕಿಗೆ ಬಂದಿದೆ. ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಮಹಿಳೆ ಮಹದೇವಪುರ ಪೊಲೀಸರಿಗೆ ಮನವಿ ಮಾಡಿದ್ದಾರೆ.

'ರಾತ್ರಿ 8.40 ರ ಸುಮಾರಿಗೆ ಮಹದೇವಪುರದ ಬಾಗಮನೆ ಕಾನ್ಸ್ಟೆಲೇಷನ್ ಬ್ಯುಸಿನೆಸ್ ಪಾರ್ಕ್ ಎದುರು ನನಗೆ ಕೆಟ್ಟ ಅನುಭವವಾಯಿತು. ಸರ್ವಿಸ್ ರಸ್ತೆಯ ಪಾರ್ಕಿಂಗ್ ಸ್ಥಳದಲ್ಲಿ ಕಾರಿನೊಳಗೆ ಕುಳಿತಿದ್ದಾಗ, ವ್ಯಕ್ತಿಯೊಬ್ಬರು ನನಗೆ ಎದುರಾದರು. ಆತ ನನ್ನನ್ನೇ ದಿಟ್ಟಿಸುತ್ತಲೇ ಅನುಚಿತವಾಗಿ ವರ್ತಿಸಲು ಆರಂಭಿಸಿದ ಮತ್ತು ನನ್ನತ್ತ ತಿರುಗಿ ಹಸ್ತಮೈಥುನ ಸೇರಿದಂತೆ ಅಶ್ಲೀಲ ಸನ್ನೆಗಳನ್ನು ಮಾಡುತ್ತಿದ್ದ' ಎಂದಿದ್ದಾರೆ.

'ಹೆದರಿಕೆ ಉಂಟಾಗಿ ನಾನು ನನ್ನ ಕಾರನ್ನು ಲಾಕ್ ಮಾಡಿ ಕುಳಿತೆ. ಆದರೆ, ಇನ್ನೊಂದು ಕಾರು ಅಡ್ಡ ಬಂದಿದ್ದರಿಂದ ನಾನು ಹೊರಹೋಗಲು ಸಾಧ್ಯವಾಗಲಿಲ್ಲ. ಈ ವೇಳೆ ಆ ವ್ಯಕ್ತಿ ನನ್ನ ಕಾರನ್ನು ಹಲವು ಬಾರಿ ಸುತ್ತು ಹಾಕಿದ. ಚಾಲಕನ ಕಡೆಯ ಕಿಟಕಿ ಬಳಿಗೆ ಬಂದು ನನ್ನ ಕಡೆಗೆ ಅಶ್ಲೀಲ ಸನ್ನೆ ಮಾಡಿದ. ನಾನು ಸ್ಟೇರಿಂಗ್ ಕೆಳಗೆ ಅಡಗಿ ಕೂರುವಂತಾಯಿತು' ಎಂದಿದ್ದಾರೆ.

'ನಾನು ಆತನನ್ನು ನಿರ್ಲಕ್ಷಿಸಲು ಪ್ರಯತ್ನಿಸಿದರೂ, ಆತ ತನ್ನ ಅನುಚಿತ ವರ್ತನೆಯನ್ನು ಮುಂದುವರಿಸಿದ. ನಾನು ಭಯದಿಂದ ತತ್ತರಿಸಿ ಹೋಗಿದ್ದೆ, ನನ್ನ ಹೃದಯ ಬಡಿತ ಜೋರಾಗಿತ್ತು. ಅದಾದ ಸುಮಾರು 10 ನಿಮಿಷಗಳ ನಂತರ, ನನ್ನ ಸ್ನೇಹಿತರೊಬ್ಬರು ಬಂದರು. ಆಗ ನಾನು ಇನ್ನೊಂದು ಬಾಗಿಲಿನಿಂದ ನನ್ನ ಕಾರಿನಿಂದ ಹೊರಬಂದು ಅವರ ಕಾರನ್ನು ಹತ್ತಿದೆ' ಎಂದು ಹೇಳಿದ್ದಾರೆ. 

'ಬಳಿಕ ನಾವು ಪಾರ್ಕಿಂಗ್ ಪ್ರದೇಶದಲ್ಲಿ ಆತನಿಗಾಗಿ ಹುಡುಕಿದೆವು. ಆದರೆ, ಆ ವ್ಯಕ್ತಿ ಕಣ್ಮರೆಯಾಗಿದ್ದನು' ಎಂದು ಮಹಿಳೆ ತಮ್ಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಪೊಲೀಸರು ತನಿಖೆಯನ್ನು ಕೈಗೆತ್ತಿಕೊಂಡಿದ್ದು, ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com