'ಸ್ಥಿರವಾದ ನಿಧಿ ಪೂರೈಕೆ ಭಾರತದಲ್ಲಿ ಸಂಶೋಧನೆ ವಾತಾವರಣವನ್ನು ಬದಲಾಯಿಸುತ್ತದೆ': ಕ್ರಿಸ್ ಗೋಪಾಲಕೃಷ್ಣನ್

ವೈಜ್ಞಾನಿಕ ಸಂಶೋಧನೆಯನ್ನು ಮುಖ್ಯವಾಹಿನಿಯ ಸಂಭಾಷಣೆಗೆ ತರುವುದು ಇಂದಿನ ಅಗತ್ಯವಾಗಿದ್ದು, ಇದು ಭಾರತದ ವೈಜ್ಞಾನಿಕ ಪರಿಸರವನ್ನು ಬಲಪಡಿಸುವುದು ಮಾತ್ರವಲ್ಲದೇ ವಿಜ್ಞಾನಿಗಳ ಗುರುತಿಸುವಿಕೆ ಮತ್ತು ಸ್ಥಿರವಾದ ಧನಸಹಾಯವು ಭಾರತದ ಸಂಶೋಧನಾ ವಾತಾವರಣವನ್ನು ಪರಿವರ್ತಿಸುತ್ತದೆ ಎಂದು ಇನ್ಫೋಸಿಸ್ ಸೈನ್ಸ್ ಫೌಂಡೇಶನ್ ಅಧ್ಯಕ್ಷ ಕ್ರಿಸ್ ಗೋಪಾಲಕೃಷ್ಣನ್ ಶನಿವಾರ ಹೇಳಿದ್ದಾರೆ.
ಇನ್ಫೋಸಿಸ್ ಕಾರ್ಯಕ್ರಮದಲ್ಲಿ ಕ್ರಿಸ್ ಗೋಪಾಲಕೃಷ್ಣನ್
ಇನ್ಫೋಸಿಸ್ ಕಾರ್ಯಕ್ರಮದಲ್ಲಿ ಕ್ರಿಸ್ ಗೋಪಾಲಕೃಷ್ಣನ್
Updated on

ಬೆಂಗಳೂರು: ವೈಜ್ಞಾನಿಕ ಸಂಶೋಧನೆಯನ್ನು ಮುಖ್ಯವಾಹಿನಿಯ ಸಂಭಾಷಣೆಗೆ ತರುವುದು ಇಂದಿನ ಅಗತ್ಯವಾಗಿದ್ದು, ಇದು ಭಾರತದ ವೈಜ್ಞಾನಿಕ ಪರಿಸರವನ್ನು ಬಲಪಡಿಸುವುದು ಮಾತ್ರವಲ್ಲದೇ ವಿಜ್ಞಾನಿಗಳ ಗುರುತಿಸುವಿಕೆ ಮತ್ತು ಸ್ಥಿರವಾದ ಧನಸಹಾಯವು ಭಾರತದ ಸಂಶೋಧನಾ ವಾತಾವರಣವನ್ನು ಪರಿವರ್ತಿಸುತ್ತದೆ ಎಂದು ಇನ್ಫೋಸಿಸ್ ಸೈನ್ಸ್ ಫೌಂಡೇಶನ್ ಅಧ್ಯಕ್ಷ ಕ್ರಿಸ್ ಗೋಪಾಲಕೃಷ್ಣನ್ ಶನಿವಾರ ಹೇಳಿದ್ದಾರೆ.

ಇನ್ಫೋಸಿಸ್ ಸೈನ್ಸ್ ಫೌಂಡೇಶನ್ (ಐಎಸ್‌ಎಫ್) 2023 ರ ಇನ್ಫೋಸಿಸ್ ಪ್ರಶಸ್ತಿಯ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು,  ಭಾರತವು ಪ್ರಸ್ತುತ ತನ್ನ GDP ಯ 0.7 ಪ್ರತಿಶತವನ್ನು R&D ನಲ್ಲಿ ಹೂಡಿಕೆ ಮಾಡುತ್ತಿದೆ ಮತ್ತು ಇದನ್ನು 3 ಪ್ರತಿಶತಕ್ಕೆ ಹೆಚ್ಚಿಸಿದರೆ ಸಮೃದ್ಧ ಲಾಭಾಂಶವನ್ನು ನೀಡುತ್ತದೆ. ಇದಕ್ಕೆ ಸಾರ್ವಜನಿಕ ಮತ್ತು ಖಾಸಗಿ ಸಂಸ್ಥೆಗಳು ಕೊಡುಗೆ ನೀಡಬೇಕಾಗಿದೆ ಎಂದು ಹೇಳಿದರು. 

ತಂತ್ರಜ್ಞಾನದ ಬೆಳವಣಿಗೆ ಮತ್ತು ನೈಜ-ಪ್ರಪಂಚದ ಸನ್ನಿವೇಶಗಳಲ್ಲಿ ಅದರ ಅನ್ವಯಗಳ ಕುರಿತು ಮಾತನಾಡಿದ ಗೋಪಾಲಕೃಷ್ಣ, “2023 AI ಮುಖ್ಯವಾಹಿನಿಗೆ ಬಂದ ವರ್ಷ. ಇದು ಪ್ರಜಾಸತ್ತಾತ್ಮಕವಾಗಿತ್ತು ಮತ್ತು ಅದರ ಪ್ರವೇಶವು ಸಾಮಾನ್ಯ ವ್ಯಕ್ತಿಗಳಿಗೆ ಲಭ್ಯವಿತ್ತು. ಜನರೇಟಿವ್ AI ಎಲ್ಲೆಡೆ ವ್ಯವಹಾರಗಳನ್ನು ಅಡ್ಡಿಪಡಿಸುತ್ತಿದೆ. ಇದು ಸಂಶೋಧನೆಯಲ್ಲಿ ನಾವೀನ್ಯತೆ ಮತ್ತು ನೈಜ-ಪ್ರಪಂಚದ ಸಮಸ್ಯೆಗಳನ್ನು ಪರಿಹರಿಸಲು ಸಹಾಯ ಮಾಡುತ್ತದೆ ಎಂದರು.

ಇನ್ನು ಕಾರ್ಯಕ್ರಮದಲ್ಲಿ ಇಂಜಿನಿಯರಿಂಗ್ ಮತ್ತು ಕಂಪ್ಯೂಟರ್ ಸೈನ್ಸ್, ಹ್ಯುಮಾನಿಟೀಸ್, ಲೈಫ್ ಸೈನ್ಸಸ್, ಮ್ಯಾಥಮೆಟಿಕಲ್ ಸೈನ್ಸಸ್, ಫಿಸಿಕಲ್ ಸೈನ್ಸ್ ಮತ್ತು ಸೋಶಿಯಲ್ ಸೈನ್ಸಸ್ - ಆರು ಕ್ಷೇತ್ರಗಳಲ್ಲಿ ವಿಜೇತರಿಗೆ ಬಹುಮಾನವನ್ನು ನೀಡಲಾಯಿತು. ವಿಜ್ಞಾನಿಗಳನ್ನು ಶುದ್ಧ ಚಿನ್ನದ ಪದಕ, ಉಲ್ಲೇಖ ಮತ್ತು USD 100,000 ಬಹುಮಾನದೊಂದಿಗೆ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಇನ್ಫೋಸಿಸ್ ಸಹ ಸಂಸ್ಥಾಪಕ ಮತ್ತು ಫೌಂಡೇಶನ್‌ನ ಟ್ರಸ್ಟಿ ಎನ್‌ಕೆ ನಾರಾಯಣ ಮೂರ್ತಿ ಉಪಸ್ಥಿತರಿದ್ದರು.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com