ಅಂತಿಮ ಪಟ್ಟಿ ಪ್ರಕಟ: ರಾಜ್ಯದಲ್ಲಿ ಒಟ್ಟು 5.37 ಕೋಟಿ ಮತದಾರರು, ಮಹಿಳೆಯರ ಸಂಖ್ಯೆಯಲ್ಲಿ ಭಾರಿ ಏರಿಕೆ!

ಕರ್ನಾಟಕ ಚುನಾವಣಾ ಆಯೋಗವು ಸೋಮವಾರ ರಾಜ್ಯದ 224 ಕ್ಷೇತ್ರಗಳ ಮತದಾರರ ಅಂತಿಮ ಪಟ್ಟಿ ಪ್ರಕಟ ಮಾಡಿದ್ದು, ಒಟ್ಟು ಮತದಾರರ ಸಂಖ್ಯೆ 5.37 ಕೋಟಿ ಗೆ ಏರಿಕೆಯಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಕರ್ನಾಟಕ ಚುನಾವಣಾ ಆಯೋಗವು ಸೋಮವಾರ ರಾಜ್ಯದ 224 ಕ್ಷೇತ್ರಗಳ ಮತದಾರರ ಅಂತಿಮ ಪಟ್ಟಿ ಪ್ರಕಟ ಮಾಡಿದ್ದು, ಒಟ್ಟು ಮತದಾರರ ಸಂಖ್ಯೆ 5.37 ಕೋಟಿ ಗೆ ಏರಿಕೆಯಾಗಿದೆ.

ಅಂತಿಮ‌ ಪಟ್ಟಿಯಲ್ಲಿ ಈಗ 5,37,85,815 ಮತದಾರರು ಇದ್ದಾರೆ. ಇದರಲ್ಲಿ 2,69,33,750 ಪುರುಷರು, 2,68,47,145 ಮಹಿಳೆಯರು ಮತದಾನದ ಗುರುತಿನಿ ಚೀಟಿ ಹೊಂದಿದ್ದಾರೆ. ಬದಲಾವಣೆ, ತಿದ್ದುಪಡಿ ಇದ್ದರೆ ಫಾರ್ಮ್ 8 ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿದೆ. ಬದಲಾವಣೆ, ತಿದ್ದುಪಡಿ ಇದ್ದರೆ ಫಾರ್ಮ್ 8 ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿದೆ. ಇಂದಿನಿಂದ ನಾಮಪತ್ರ ಸಲ್ಲಿಕೆಯ ಕೊನೆಯ ದಿನಾಂಕದ ಮುಂಚಿತ 10 ದಿನದ ಒಳಗಾಗಿ ಅರ್ಜಿ ಸಲ್ಲಿಸಬಹುದು ಎಂದು ಚುನಾವಣಾ ಆಯೋಗ ಹೇಳಿದೆ.

ಅಂತಿಮ‌ ಪಟ್ಟಿಯಲ್ಲಿ ಈಗ 5,37,85,815 ಮತದಾರರು ಇದ್ದು, ಇದರಲ್ಲಿ 2,69,33,750 ಪುರುಷರು, 2,68,47,145 ಮಹಿಳೆಯರು ಇದ್ದಾರೆ. ಕರಡು ಪಟ್ಟಿಗೆ ಹೋಲಿಸಿದರೆ ಮಹಿಳಾ ಮತದರಾರು ಸಂಖ್ಯೆ 2,77,717 ರಷ್ಟು ಗಮನಾರ್ಹ ಹೆಚ್ಚಾಗಿದೆ. 17,47,518 ಮತದಾರರ ಗುರುತಿನ ಚೀಟಿಗಳನ್ನು ಪೋಸ್ಟ್ ಮೂಲಕ ಕಳುಹಿಸಲಾಗಿದೆ. ಈಗ 10,76,506 ಮತದಾರರ ಗುರುತಿನ ಚೀಟಿ ಮುದ್ರಣ ವಾಗಿದ್ದು, ರವಾನಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದು ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಮಾಹಿತಿ ನೀಡಿದರು.

ಅಂತೆಯೇ ಈಗ 10,76,506 ಮತದಾರರ ಗುರುತಿನ ಚೀಟಿ ಮುದ್ರಣವಾಗಿದ್ದು, ರವಾನಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಅಂತಿಮ ಪಟ್ಟಿಯಲ್ಲಿ 10,34,018 ಯುವ ಮತದಾರರಿದ್ದಾರೆ. ಇದರಲ್ಲಿ 3,88,527 ರಷ್ಟು ಯುವಕರು ಹೊಸದಾಗಿ ನೋಂದಾಯಿಸಿಕೊಂಡಿದ್ದಾರೆ. ಸಾಗರೋತ್ತರ (ಅನಿವಾಸಿ ಭಾರತೀಯರು) ಮತದಾರರ ಸಂಖ್ಯೆ 3,165 ಇದೆ. 80 ವರ್ಷ ಮೇಲ್ಪಟ್ಟ ವಯೋಮಾನದ ಮತದಾರರ ಸಂಖ್ಯೆ 12,71,862 ಇದೆ. 100 ವರ್ಷ ಮೇಲ್ಪಷ್ಟ ಮತದಾರರ ಸಂಖ್ಯೆ 17,937 ಇದೆ ಎಂದು ಮಾಹಿತಿ ನೀಡಿದರು.

ಒಟ್ಟು ಮತಗಟ್ಟೆಗಳ ಸಂಖ್ಯೆ 58,834 ಇದೆ. ಕರಡು ಹಾಗೂ ಅಂತಿಮ ಪಟ್ಟಿಯಲ್ಲಿ ಒಟ್ಟು 35,02,328 ಸೇರ್ಪಡೆಗೊಳಿಸಲಾಗಿದೆ. 11,14,257 ಮತದಾರರ ಹೆಸರನ್ನು ತೆಗೆದು ಹಾಕಲಾಗಿದೆ. 13,43,123 ಜನರ ಹೆಸರುಗಳನ್ನು ತಿದ್ದುಪಡಿ ಮಾಡಲಾಗಿದೆ. ಒಟ್ಟು ಜನಸಂಖ್ಯೆಯಲ್ಲಿ ಶೇ 69.74 ರಷ್ಟು ಮತದಾರರಾಗಿದ್ದಾರೆ. ಪ್ರತಿ 1000 ವೋಟರ್ ಅನುಪಾತದಲ್ಲಿ 997 ಮಹಿಳಾ ಮತದಾರರು ಇದ್ದಾರೆ.

ಇದಕ್ಕೆ ವ್ಯತಿರಿಕ್ತವಾಗಿ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ವಿಧಾನಸಭಾ ಕ್ಷೇತ್ರವು 1,67,556 ಮತದಾರರನ್ನು ಹೊಂದಿದೆ. ಸಂಸತ್ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಬೆಂಗಳೂರು ಉತ್ತರದಲ್ಲಿ 31 ಲಕ್ಷಕ್ಕೂ ಅಧಿಕ ಮತದಾರರಿದ್ದು, ಉಡುಪಿ ಚಿಕ್ಕಮಗಳೂರಿನಲ್ಲಿ ಕನಿಷ್ಠ 15 ಲಕ್ಷ ಮತದಾರರಿದ್ದಾರೆ.

ಆನ್​ಲೈನ್‌ ಮೂಲಕ ಹೆಸರು ಸರಿಯಾಗಿದೆಯಾ ಎಂದು ಪರಿಶೀಲಿಸಬಹುದು. ಚುನಾವಣಾ ಆಯೋಗದ ವೆಬ್​ಸೈಟ್​ನಲ್ಲಿ ಮತರದಾರರ ಸಂಖ್ಯೆ ನಿರಂತರವಾಗಿ ಅಪ್​ಡೇಟ್ ಆಗಲಿದೆ. ಪಾರ್ಮ್ 8 ಮೂಲಕ ಹೆಸರನ್ನು ಒಂದು ಕ್ಷೇತ್ರದಿಂದ ಇನ್ನೊಂದು ಕ್ಷೇತ್ರಕ್ಕೆ ವರ್ಗಾವಣೆ ಮಾಡಬಹುದು. ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com