ಮಂಗಳೂರು: ತೆಂಗಿನ ಮರದಿಂದ ಬಿದ್ದು ವ್ಯಕ್ತಿ ಸಾವು!

ತೆಂಗಿನ ಮರದಿಂದ ಬಿದ್ದು, 58 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. 
ಸಾವನ್ನಪ್ಪಿದ್ದ ವಿಶ್ವಾಂಬರನ್
ಸಾವನ್ನಪ್ಪಿದ್ದ ವಿಶ್ವಾಂಬರನ್
Updated on: 

ಮಂಗಳೂರು: ತೆಂಗಿನ ಮರದಿಂದ ಬಿದ್ದು, 58 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ಮೃತರನ್ನು ಧರ್ಮಸ್ಥಳ ಮೂಲದ ವಿಶ್ವಾಂಬರನ್ ಎಂದು ಗುರುತಿಸಲಾಗಿದೆ. ಮೃತರು ಕೊಣಾಜೆ ಮೂರ್ತೆದಾರರ ಸಂಘದ ಮಾಜಿ ನಿರ್ದೇಶಕರಾಗಿದ್ದರು ಎನ್ನಲಾಗಿದೆ. 

ಉಳ್ಳಾಲ ತಾಲೂಕಿನ ಸೋಮನಾಥ ಉಳಿಯ ಸಮೀಪದ ಮನೆಯೊಂದರ ಬಳಿ  ತೆಂಗಿನ ಮರಕ್ಕೆ ಹತ್ತಿದ್ದಾಗ ಕಾಲು ಜಾರಿ ಬಿದ್ದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಸಂಬಂಧ ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com