ಬೆಂಗಳೂರು: ನಗರದ ಬಹುತೇಕ ಫುಟ್‌ಪಾತ್‌ಗಳು ವಿಕಲಚೇತನ, ಪಾದಚಾರಿ ಸ್ನೇಹಿಯಲ್ಲ!

ಪಾದಚಾರಿಗಳು ನಡೆಯಲು ಮಾತ್ರ ಫುಟ್‌ಪಾತ್‌ಗಳನ್ನು ನಿರ್ಮಿಸಲಾಗುತ್ತಿದೆ. ಆದರೆ ನಗರದಲ್ಲಿ ಶೇ.90ರಷ್ಟು ಜಾಗವನ್ನು ಬೊಲ್ಲರ್ಡ್, ವಾಹನಗಳು, ಬೀದಿಬದಿ ವ್ಯಾಪಾರಿಗಳು ಆಕ್ರಮಿಸಿಕೊಂಡಿದ್ದಾರೆ.
ಫುಟ್‌ಪಾತ್‌ಗಳ ಮೇಲೆ ಅಳವಡಿಸಲಾಗಿರುವ ಬೊಲ್ಲಾರ್ಡ್‌ಗಳು.
ಫುಟ್‌ಪಾತ್‌ಗಳ ಮೇಲೆ ಅಳವಡಿಸಲಾಗಿರುವ ಬೊಲ್ಲಾರ್ಡ್‌ಗಳು.

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ‘ಬ್ರ್ಯಾಂಡ್ ಬೆಂಗಳೂರು’ ಅಡಿಯಲ್ಲಿ ಬೆಂಗಳೂರಿಗೆ ಹೊರ ರೂಪ ನೀಡುತ್ತಿದ್ದರೂ, ನಗರವು ಇನ್ನು ಪಾದಚಾರಿ-ವಿಕಲಚೇತನ ಸ್ನೇಹಿಯಾಗಿಲ್ಲ.

ಬ್ರ್ಯಾಂಡ್ ಬೆಂಗಳೂರು ಅಡಿಯಲ್ಲಿ ನಗರದ ಬಹುತೇಕ ಪಾದಚಾರಿ ಮಾರ್ಗಗಳನ್ನು ಮರುರೂಪಿಸಲಾಗಿದ್ದರೂ, ಈ ಪಾದಚಾಪಿ ಮಾರ್ಗಗಳು ಪಾದಚಾರಿಗಳಿಗೆ ವಿಶೇಷವಾಗಿ ವಿಕಲಚೇತನರ, ಗಾಲಿಕುರ್ಚಿಗಳ ಮೇಲೆ ಕುಳಿತು ಚಲಿಸುವವರಿಗೆ ಸಹಾಯಕವಾಗಿಲ್ಲ. ಪಾದಚಾರಿ ಮಾರ್ಗಗಳಲ್ಲಿ ಬೊಲ್ಲಾರ್ಡ್‌ಗಳನ್ನು ಅಳವಡಿಸಲಾಗಿದ್ದು, ಅವು ಚಲನೆಗೆ ಅಡ್ಡಿಯಾಗುತ್ತಿವೆ ಎಂಬ ದೂರುಗಳು ಕೇಳಿ ಬರುತ್ತಿವೆ.

ಪಾದಚಾರಿ ಮಾರ್ಗ ಪುನರ್ನಿರ್ಮಾಣ ಯೋಜನೆಗೂ ಮೊದಲು ಪಾಲಿಕೆಯು ನಮ್ಮನ್ನು ಎಂದಿಗೂ ಸಂಪರ್ಕಿಸಲಿಲ್ಲ ಎಂದು ವಿಕಚಚೇತನರು ಬೇಸರ ವ್ಯಕ್ತಪಡಿಸಿದ್ದಾರೆ.

ಪಾದಚಾರಿಗಳ ಮಧ್ಯದಲ್ಲಿ ಬೋಲಾರ್ಡ್‌ಗಳು ಮತ್ತು ವಿದ್ಯುತ್ ಕಂಬಗಳನ್ನು ಸ್ಥಾಪಿಸಲಾಗಿದೆ. ಅಲ್ಲದೆ, ವಾಹನಗಳನ್ನು ಅಡ್ಡಾದಿಡ್ಡಿಯಾಗಿ ಇಲ್ಲಿ ನಿಲ್ಲಿಸಲಾಗುತ್ತಿದೆ. ಬೀದಿ-ಬದಿ ವ್ಯಾಪಾರಿಗಳು ಅಂಗಡಿಗಳನ್ನು ಹಾಕಿಕೊಂಡು ಜನರ ಓಡಾಟಕ್ಕೆ ಅಡ್ಡಿಪಡಿಸುತ್ತಿದ್ದಾರೆ. ಈ ಅಡೆತಡೆಗಳು ಗಾಲಿಕುರ್ಚಿ ಬಳಕೆದಾರರಿಗೆ ಮಾತ್ರವಷ್ಟೇ ಅಲ್ಲದೆ, ಹಿರಿಯ ನಾಗರಿಕರು, ಗರ್ಭಿಣಿಯರು ಮತ್ತು ಇತರೆ ಚಲನಶೀಲತೆ ಸಮಸ್ಯೆಗಳಿರುವವರಿಗೂ ಸಮಸ್ಯೆಯಾಗುತ್ತಿದೆ.

ಫುಟ್‌ಪಾತ್‌ಗಳ ಮೇಲೆ ಅಳವಡಿಸಲಾಗಿರುವ ಬೊಲ್ಲಾರ್ಡ್‌ಗಳು.
ಸುರಕ್ಷಿತ ಪಾದಚಾರಿ ಮಾರ್ಗ: ಬಿಬಿಎಂಪಿಯಿಂದ 2 ದಿನಗಳ 'ನಮ್ಮ ರಸ್ತೆ' ಎಕ್ಸಿಬಿಷನ್

ವಿಕಲಚೇತನರ ಹಕ್ಕುಗಳಿಗಾಗಿ ಹೋರಾಡುತ್ತಿರುವ ಅಂಗವಿಕಲ ಕ್ರೀಡಾ ವ್ಯಕ್ತಿಯೂ ಆಗಿರುವ ಗಾಲಿಕುರ್ಚಿ ಬಳಕೆದಾರ ಸುನಿಲ್ ಜೈನ್ ಅವರು ಮಾತನಾಡಿ, ಫುಟ್‌ಪಾತ್‌ಗಳನ್ನು ವಿನ್ಯಾಸಗೊಳಿಸುವಾಗ ವ್ಹೀಲ್‌ಚೇರ್‌ನಲ್ಲಿ ಓಡಾಡುವ ವಿಕಲಚೇತನರ ಸ್ಥಿತಿಯ ಬಗ್ಗೆ ಬಿಬಿಎಂಪಿ ಚಿಂತಿಸುವುದಿಲ್ಲ ಎಂದು ಹೇಳಿದರು.

ಪಾದಚಾರಿಗಳು ನಡೆಯಲು ಮಾತ್ರ ಫುಟ್‌ಪಾತ್‌ಗಳನ್ನು ನಿರ್ಮಿಸಲಾಗುತ್ತಿದೆ. ಆದರೆ ನಗರದಲ್ಲಿ ಶೇ.90ರಷ್ಟು ಜಾಗವನ್ನು ಬೊಲ್ಲರ್ಡ್, ವಾಹನಗಳು, ಬೀದಿಬದಿ ವ್ಯಾಪಾರಿಗಳು ಆಕ್ರಮಿಸಿಕೊಂಡಿದ್ದಾರೆ. ಅನೇಕ ಸ್ಥಳಗಳಲ್ಲಿ ಪಾದಚಾರಿ ಮಾರ್ಗಗಳ ಮೇಲ್ಮೈ ಸಮವಾಗಿಲ್ಲ. ಜನರು ಬೀಳುವ ಮತ್ತು ಗಾಯ ಮಾಡಿಕೊಳ್ಳುವ ಸಾಧ್ಯತೆಗಳಿವೆ ಎಂದು ತಿಳಿಸಿದ್ದಾರೆ.

ಮತ್ತೊಬ್ಬ ಗಾಲಿಕುರ್ಚಿ ಬಳಕೆದಾರರಾದ ರಮೇಶ್ ಮಾತನಾಡಿ, ಈ ಸಮಸ್ಯೆ ಕೆಲವು ಪ್ರದೇಶಗಳಲ್ಲಷ್ಟೇ ಅಲ್ಲ, ನಗರದಾದ್ಯಂತ ಇದೆ. ಎಂಜಿ ರಸ್ತೆ, ಬಸ್ ನಿಲ್ದಾಣಗಳ ಬಳಿ, ರೈಲು ನಿಲ್ದಾಣಗಳು ಮತ್ತು ಮೆಟ್ರೋ ನಿಲ್ದಾಣಗಳಂತಹ ವಾಣಿಜ್ಯ ಕೇಂದ್ರಗಳಲ್ಲಿನ ಫುಟ್‌ಪಾತ್‌ಗಳು ಹಲವಾರು ಅಡೆತಡೆಗಳನ್ನು ಹೊಂದಿವೆ. ಗಾಲಿಕುರ್ಚಿ ಬಳಸುವವರು ರಸ್ತೆಯನ್ನೇ ಬಳಸಬೇಕಾಗಿದ್ದು, ವಾಹನಗಳಿಗೆ ಡಿಕ್ಕಿಯಾಗುವ ಸಾಧ್ಯತೆ ಹೆಚ್ಚಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಪಾದಚಾರಿ ಮಾರ್ಗಗಳು ಸಮತಟ್ಟಾಗಿಲ್ಲ, ತೆರೆದ ಚರಂಡಿಗಳೂ ಇವೆ. ಇದರಿಂದ ಅಪಾಯ ಹೆಚ್ಚಾಗಿದೆ ಎಂದು ದೃಷ್ಟಿ ವಿಕಲಚೇತನ ವ್ಯಕ್ತಿ ಸೃಜನ್ ಅವರು ಹೇಳಿದ್ದಾರೆ.

ಈ ನಡುವೆ ಪಾಲಿಕೆ ಅಧಿಕಾರಿಗಳು ಸಮಸ್ಯೆಯನ್ನು ಒಪ್ಪಿಕೊಂಡಿದ್ದಾರೆ. ಆದರೆ ಬದಲಾವಣೆಗಳನ್ನು ಮಾತ್ರ ಕಾರ್ಯಗತಗೊಳಿಸಿಲ್ಲ. ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಪ್ರತಿಕ್ರಿಯೆಗೆ ಲಭ್ಯವಾಗಲಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com