ಬೆಂಗಳೂರು: ಕಾಲೇಜು ಯುವತಿಯರಿಗೆ ಮರ್ಮಾಂಗ ತೋರಿಸಿ ಅನುಚಿತ ವರ್ತನೆ; ವ್ಯಕ್ತಿ ಬಂಧನ

ಜು. 8ರಂದು ವಿವಿ ಪುರಂ ರಸ್ತೆಯಲ್ಲಿ ಕಾಲೇಜು ವಿದ್ಯಾರ್ಥಿನಿಯರು ನಿಂತಿದ್ದ ಕಡೆ ಸ್ಕೂಟರ್ ನಲ್ಲಿ ಬಂದಿರುವ ಆರೋಪಿ, ವಿದ್ಯಾರ್ಥಿನಿಯರ ಗಮನ ಸೆಳೆಯಲು ವಿಕೃತ ಕುಚೇಷ್ಟೆಗಳನ್ನು ಮಾಡಿದ್ದಾನೆ.
ಬಂಧನ
ಬಂಧನ

ಬೆಂಗಳೂರು: ಕಾಲೇಜು ಯುವತಿಯರಿಗೆ ಮರ್ಮಾಂಗ ತೋರಿಸಿ ವಿಕೃತಿ ಮೆರೆದಿದ್ದ ಯುವಕನೋರ್ವನನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.

ಬಂಧಿತನನ್ನು ರೆಹಮಾನ್ (48) ಎಂದು ಗುರುತಿಸಲಾಗಿದೆ. ಜು. 8ರಂದು ವಿವಿ ಪುರಂ ರಸ್ತೆಯಲ್ಲಿ ಕಾಲೇಜು ವಿದ್ಯಾರ್ಥಿನಿಯರು ನಿಂತಿದ್ದ ಕಡೆ ಸ್ಕೂಟರ್ ನಲ್ಲಿ ಬಂದಿದ್ದ ಆರೋಪಿ, ವಿದ್ಯಾರ್ಥಿನಿಯರ ಗಮನ ಸೆಳೆಯಲು ವಿಕೃತ ಕುಚೇಷ್ಟೆಗಳನ್ನು ಮಾಡಿದ್ದಾನೆ. ಕೂಡಲೇ ಗುಂಪಿನಲ್ಲಿದ್ದ ಯುವತಿಯೊಬ್ಬಳು ಆತನ ವರ್ತನೆಗಳನ್ನು ತನ್ನ ಮೊಬೈಲಿನಲ್ಲಿ ರೆಕಾರ್ಡ್ ಮಾಡಿಕೊಳ್ಳುತ್ತಿದ್ದಳು.

ಬಂಧನ
ನಮ್ಮ ಮೆಟ್ರೋ ಸ್ಕೈವಾಕ್'ನಲ್ಲಿ ಕಾಲೇಜು ಯುವತಿಯೊಂದಿಗೆ ಅನುಚಿತ ವರ್ತನೆ: ಪ್ರಕರಣ ದಾಖಲು

ಇದನ್ನರಿಯದ ಆತ, ತನ್ನ ಕುಚೇಷ್ಟೆಗಳನ್ನು ಮುಂದುವರಿಸಿದ್ದೂ ಅಲ್ಲದೆ, ತನ್ನ ಮರ್ಮಾಂಗವನ್ನು ತೋರಿಸಿದ್ದಾನೆ. ಅದೂ ಕೂಡ ಯುವತಿಯ ಮೊಬೈಲಿನಲ್ಲಿ ರೆಕಾರ್ಡ್ ಆಗಿದೆ. ಮರ್ಮಾಂಗವನ್ನು ತೋರಿಸಿದ ಕೂಡಲೇ ಯುವತಿಯರು ಕೆಂಡಾಮಂಡಲಗೊಂಡಿದ್ದು, ಬಳಿಕ ಆರೋಪಿ ಸ್ಥಳದಿಂದ ಕಾಲ್ಕಿತ್ತಿದ್ದಾನೆ.

ನಂತರ ಯುವತಿಯರು ಸಾಕ್ಷ್ಯವನ್ನು ಹಿಡಿದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ವಿಡಿಯೋವನ್ನು ಹಸ್ತಾಂತರಿಸಿದ್ದಾರೆ. ಈ ಸಂಬಂಧ ಐಪಿಸಿ ಸೆಕ್ಷನ್ 354, 354(ಎ), ಮತ್ತು 509 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು. ಅದರ ಆಧಾರದಲ್ಲಿ ಪೊಲೀಸರು ಯುವಕನನ್ನು ಪತ್ತೆ ಮಾಡಿ ಬಂಧಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com