ಅತ್ಯಾಚಾರ ಸಂತ್ರಸ್ತರಿಗೆ ಮಹಿಳಾ ವೈದ್ಯರಿಂದ ಮಾತ್ರ ಪರೀಕ್ಷಿಸಲು ಬಿಎನ್‌ಎಸ್‌ಎಸ್‌ಗೆ ತಿದ್ದುಪಡಿ ತನ್ನಿ: ಕೇಂದ್ರಕ್ಕೆ ಕರ್ನಾಟಕ ಹೈಕೋರ್ಟ್

ತಿದ್ದುಪಡಿ ಮಾಡುವವರೆಗೆ ಅತ್ಯಾಚಾರ ಸಂತ್ರಸ್ತರ ವೈದ್ಯಕೀಯ ಪರೀಕ್ಷೆಗಳನ್ನು ಮಹಿಳಾ ನೋಂದಾಯಿತ ವೈದ್ಯಕೀಯ ವೈದ್ಯರಿಂದ ಅಥವಾ ಅವರ ಮೇಲ್ವಿಚಾರಣೆಯಲ್ಲಿ ನಡೆಸುವುದನ್ನು ಖಚಿತಪಡಿಸಿಕೊಳ್ಳುವಂತೆ ನ್ಯಾಯಮೂರ್ತಿ ಎಂ ಜಿ ಉಮಾ ಅವರು ನಿರ್ದೇಶನ ನೀಡಿದ್ದಾರೆ.
Karnataka Highcourt
ಕರ್ನಾಟಕ ಹೈಕೋರ್ಟ್online desk
Updated on: 

ಬೆಂಗಳೂರು: ವಯಸ್ಕ ಅತ್ಯಾಚಾರ ಸಂತ್ರಸ್ತರನ್ನು ಮಹಿಳಾ ವೈದ್ಯರಿಂದ ಮಾತ್ರ ಪರೀಕ್ಷಿಸಲು ಮತ್ತು ಅವರ ಖಾಸಗಿತನದ ಹಕ್ಕನ್ನು ರಕ್ಷಿಸಲು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ(ಬಿಎನ್‌ಎಸ್‌ಎಸ್)ಯ ಸೆಕ್ಷನ್ 184 ಅನ್ನು ತಿದ್ದುಪಡಿ ಮಾಡುವಂತೆ ಕರ್ನಾಟಕ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದೆ.

ತಿದ್ದುಪಡಿ ಮಾಡುವವರೆಗೆ ಅತ್ಯಾಚಾರ ಸಂತ್ರಸ್ತರ ವೈದ್ಯಕೀಯ ಪರೀಕ್ಷೆಗಳನ್ನು ಮಹಿಳಾ ನೋಂದಾಯಿತ ವೈದ್ಯಕೀಯ ವೈದ್ಯರಿಂದ ಅಥವಾ ಅವರ ಮೇಲ್ವಿಚಾರಣೆಯಲ್ಲಿ ನಡೆಸುವುದನ್ನು ಖಚಿತಪಡಿಸಿಕೊಳ್ಳುವಂತೆ ನ್ಯಾಯಮೂರ್ತಿ ಎಂ ಜಿ ಉಮಾ ಅವರ ಏಕಸದಸ್ಯ ಪೀಠ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಿದೆ.

ಅತ್ಯಾಚಾರ ಸಂತ್ರಸ್ತರನ್ನು ಸಂವೇದನಾಶೀಲತೆಯಿಂದ ನಿರ್ವಹಿಸುವ ಮಹತ್ವದ ಕುರಿತು ಪೊಲೀಸ್ ಅಧಿಕಾರಿಗಳು, ಪ್ರಾಸಿಕ್ಯೂಟರ್‌ಗಳು, ವೈದ್ಯರು, ವೈದ್ಯಕೀಯ ಸಿಬ್ಬಂದಿ ಮತ್ತು ನ್ಯಾಯಾಂಗ ಅಧಿಕಾರಿಗಳು ಸೇರಿದಂತೆ ಸಂಬಂಧಪಟ್ಟವರಿಗೆ ಶಿಕ್ಷಣ ನೀಡುವಂತೆ ಮತ್ತು ಜಾಗೃತಿ ಮೂಡಿಸುವಂತೆ ನ್ಯಾಯಾಲಯವು ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ.

Karnataka Highcourt
8 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ: ಕೊಲೆ ಮಾಡಿ ಕಾಲುವೆಗೆ ಎಸೆದಿದ್ದ 3 ಅಪ್ರಾಪ್ತ ಬಾಲಕರ ಬಂಧನ

ಅತ್ಯಾಚಾರ ಮತ್ತು ಕೊಲೆ ಯತ್ನದ ಆರೋಪ ಹೊತ್ತಿರುವ ಅಜಯ್ ಕುಮಾರ್ ಭೇರಾ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯ ತಿರಸ್ಕರಿಸುವ ಸಂದರ್ಭದಲ್ಲಿ ಹೈಕೋರ್ಟ್ ಈ ನಿರ್ದೇಶನ ನೀಡಿದೆ.

ಭೇರಾ ಅವರ ಮನವಿಯನ್ನು ತಿರಸ್ಕರಿಸಿದ ನ್ಯಾಯಾಲಯ, ಘಟನೆಯ ಸಂದರ್ಭದಲ್ಲಿ ಅತ್ಯಾಚಾರ ಸಂತ್ರಸ್ತೆಗೆ ಗಾಯವಾಗಿದೆ ಎಂದು ಸೂಚಿಸುವ ವೈದ್ಯಕೀಯ ದಾಖಲೆಗಳನ್ನು ಗಮನಿಸಿ, ಅಪರಾಧಕ್ಕೆ ಭೇರಾ ಕಾರಣ ಎಂದು ಸಾಕ್ಷ್ಯಗಳು ಸೂಚಿಸುತ್ತಿವೆ ಮತ್ತು ಅಪರಾಧ ಗಂಭೀರ ಸ್ವರೂಪದ್ದಾಗಿರುವುದರಿಂದ ಜಾಮೀನು ನಿರಾಕರಿಸಲಾಗಿದೆ ಎಂದು ನ್ಯಾಯಮೂರ್ತಿ ಉಮಾ ಹೇಳಿದ್ದಾರೆ.

ಪುರುಷ ವೈದ್ಯಾಧಿಕಾರಿಯೊಬ್ಬರು ಸಂತ್ರಸ್ತೆಯ ವೈದ್ಯಕೀಯ ಪರೀಕ್ಷೆಯನ್ನು ಸುಮಾರು ಆರು ಗಂಟೆಗಳ ಕಾಲ ನಡೆಸಿದ್ದು, ಯಾವುದೇ ವಿವರಣೆ ಅಥವಾ ಅಭಿಪ್ರಾಯವನ್ನು ನೀಡದಿರುವುದನ್ನು ಕೋರ್ಟ್ ಎತ್ತಿ ತೋರಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com