'ಮನೆ ಖರೀದಿದಾರರ ಕುಂದುಕೊರತೆ ಆಲಿಸಿ, ಸಮಸ್ಯೆ ನಿವಾರಿಸಿ': ಕರ್ನಾಟಕ ಸರ್ಕಾರಕ್ಕೆ PMO, ಕೇಂದ್ರ ವಸತಿ ಸಚಿವಾಲಯ ಒತ್ತಾಯ!

ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರಕ್ಕೆ RERA ಕಾಯಿದೆ 2016 ರ ನಿಷ್ಪರಿಣಾಮಕಾರಿ ಅನುಷ್ಠಾನದ ಕುರಿತು ಕರ್ನಾಟಕ ಮನೆ ಖರೀದಿದಾರರ ವೇದಿಕೆ ಅರ್ಜಿ ಸಲ್ಲಿಸಿದ್ದು, ಈ ಅರ್ಜಿಗಳ ವಿಚಾರವಾಗಿ ಪ್ರಧಾನ ಮಂತ್ರಿಗಳ ಕಾರ್ಯಾಲಯ, ಕೇಂದ್ರ ವಸತಿ ಸಚಿವಾಲಯ ಕರ್ನಾಟಕ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದೆ.
Karnataka to act on grievances of home buyers
ಸಂಗ್ರಹ ಚಿತ್ರ
Updated on

ಬೆಂಗಳೂರು: ರಾಜ್ಯದ ಮನೆ ಖರೀದಿದಾರರ ಸಂಘವು ಸಲ್ಲಿಸಿರುವ ಕುಂದುಕೊರತೆಗಳಿಗೆ ಪ್ರತಿಕ್ರಿಯಿಸುವಂತೆ ಪ್ರಧಾನ ಮಂತ್ರಿಗಳ ಕಾರ್ಯಾಲಯವು ಕರ್ನಾಟಕದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದೆ.

ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರಕ್ಕೆ RERA ಕಾಯಿದೆ 2016 ರ ನಿಷ್ಪರಿಣಾಮಕಾರಿ ಅನುಷ್ಠಾನದ ಕುರಿತು ಕರ್ನಾಟಕ ಮನೆ ಖರೀದಿದಾರರ ವೇದಿಕೆ ಅರ್ಜಿ ಸಲ್ಲಿಸಿದ್ದು, ಈ ಅರ್ಜಿಗಳ ವಿಚಾರವಾಗಿ ಪ್ರಧಾನ ಮಂತ್ರಿಗಳ ಕಾರ್ಯಾಲಯ, ಕೇಂದ್ರ ವಸತಿ ಸಚಿವಾಲಯ ಕರ್ನಾಟಕ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದೆ.

ಇದೀಗ ಕರ್ನಾಟಕ ಮನೆ ಖರೀದಿದಾರರ ವೇದಿಕೆ ಸಲ್ಲಿಸಿದ್ದ ಮನವಿಗೆ PMO ಪ್ರತಿಕ್ರಿಯೆ ನೀಡಿದ್ದು, ರಾಜ್ಯದಲ್ಲಿ ನೂರಾರು ಮನೆ ಖರೀದಿದಾರರನ್ನು ಪ್ರತಿನಿಧಿಸುವ ಸಂಸ್ಥೆಯು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಮನೋಹರ್ ಲಾಲ್ ಖಟ್ಟರ್ ಅವರಿಗೆ ಪತ್ರ ಬರೆದಿದೆ.

ಕೇಂದ್ರದ ವಸತಿ ಇಲಾಖೆಯ ಅಧೀನ ಕಾರ್ಯದರ್ಶಿ ಸೈಲೇಶ್ ಜೋಗ್ಲಾನಿ ಅವರು ರಾಜ್ಯ ವಸತಿ ಇಲಾಖೆಯ ಕಾರ್ಯದರ್ಶಿಗೆ ಪತ್ರ ಬರೆದು "ಭೂಮಿ ಮತ್ತು ವಸಾಹತು ರಾಜ್ಯದ ವಿಷಯವಾಗಿದೆ" ಮತ್ತು ಅದಕ್ಕೆ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದೆ.

Karnataka to act on grievances of home buyers
ಜುಲೈ 10ರೊಳಗೆ ರೇರಾ ಜಾರಿಗೊಳಿಸದಿದ್ದರೆ ಪ್ರತಿಭಟನೆ: ಬಿಜೆಪಿ ಎಚ್ಚರಿಕೆ

ಎರಡೂ ಕಛೇರಿಗಳಿಗೆ ಪ್ರತ್ಯೇಕವಾಗಿ ಸಲ್ಲಿಸಿದ ತನ್ನ ಅರ್ಜಿಗಳಲ್ಲಿ, ಕೆ-ರೇರಾ (ಕರ್ನಾಟಕ ರೇರಾ)ವು ಹಲವಾರು ವಿಭಾಗಗಳಲ್ಲಿ ಕರ್ತವ್ಯಲೋಪ ಎಸಗಿದೆ ಎಂದು ಕರ್ನಾಟಕ ಮನೆ ಖರೀದಿದಾರರ ಫೋರಂ ಆರೋಪಿಸಿದೆ.

ಮನೆ ಖರಿದಾರರ ಫೋರಂನ ಸಂಚಾಲಕ ಧನಂಜಯ ಪದ್ಮನಾಭಾಚಾರ್ ಅವರು ಈ ಬಗ್ಗೆ ಮಾತನಾಡಿದ್ದು, 'ಕೆ-ರೇರಾ ಆರಂಭವಾದಾಗಿನಿಂದ ಜೂನ್ 12, 2024 ರವರೆಗೆ ಮನೆ ಖರೀದಿದಾರರು 10, 247 ದೂರುಗಳನ್ನು ದಾಖಲಿಸಿದ್ದಾರೆ. 3-4 ವರ್ಷಗಳಿಂದ ಬಾಕಿ ಉಳಿದಿರುವ ಹಲವು ಪ್ರಕರಣಗಳ ದೂರುಗಳ ಸಕಾಲಿಕ ವಿಲೇವಾರಿಯಾಗುತ್ತಿಲ್ಲ. ಹಣ ವಸೂಲಿ ಮಾಡುವ ಆದೇಶ ಜಾರಿಯಾಗುತ್ತಿಲ್ಲ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ ಎಂದರು.

ಅಂತೆಯೇ, 'ಹಣವನ್ನು ಮರುಪಡೆಯಲು ಸಮಯಾವಧಿಯ ಅನುಪಸ್ಥಿತಿಯಲ್ಲಿ RERA ಆದೇಶಗಳಾಗಿವೆ. ಜನವರಿ 31, 2024 ರಂತೆ, 547 ಕೋಟಿ ರೂಪಾಯಿಗಳಲ್ಲಿ ಒಟ್ಟು 486 ಕೋಟಿ ರೂ ಮರು ಪಾವತಿ ಆದೇಶವಾಗಿದೆ. ಸೇಲ್ ಮತ್ತು ಸೇಲ್ ಡೀಡ್‌ಗೆ ಸಂಬಂಧಿಸಿದ ಒಪ್ಪಂದಗಳಲ್ಲಿನ ವ್ಯತ್ಯಾಸಗಳು, ಅಪಾರ್ಟ್‌ಮೆಂಟ್ ಹಂಚಿಕೆದಾರರ ನೋಂದಣಿ ಮತ್ತು ರೇರಾ 2016 ರ ಸೆಕ್ಷನ್ 17 ರ ಅಡಿಯಲ್ಲಿ ಸಾಮಾನ್ಯ ಪ್ರದೇಶ ವರ್ಗಾವಣೆಯ ನಿರ್ದೇಶನಗಳ ಕೊರತೆ ಇತರ ಸಮಸ್ಯೆಗಳಾಗಿವೆ.

K-RERA ಅಧಿಕಾರಿಗಳು ತಮ್ಮ ಸವಾಲುಗಳು ಮತ್ತು ಸಮಸ್ಯೆಗಳನ್ನು ಚರ್ಚಿಸಲು ಮನೆ ಖರೀದಿದಾರರೊಂದಿಗೆ ಸಭೆಗಳನ್ನು ನಡೆಸಲಿಲ್ಲ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.

Karnataka to act on grievances of home buyers
ಮೂರು ವಾರಗಳಲ್ಲಿ ರೇರಾ ಮೇಲ್ಮನವಿ ನ್ಯಾಯಾಧಿಕರಣಕ್ಕೆ ಅಧ್ಯಕ್ಷರನ್ನು ನೇಮಿಸಿ: ಸರ್ಕಾರಕ್ಕೆ ಹೈಕೋರ್ಟ್ ಸೂಚನೆ

ರಾಜ್ಯದಲ್ಲಿ ಸಾವಿರಾರು ಮನೆ ಖರೀದಿದಾರರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಮನವಿಯಲ್ಲಿ ಕೋರಲಾಗಿದೆ. ಹಿಂದಿನ ಪದಾಧಿಕಾರಿಗಳ ನಿವೃತ್ತಿಯ ನಂತರ ಇನ್ನೂ ಹೊಸ RERA ಅಧ್ಯಕ್ಷರನ್ನು ನೇಮಿಸಬೇಕಾಗಿರುವುದರಿಂದ, ಕೇಂದ್ರದಿಂದ ಕಳುಹಿಸಲಾದ ನೋಟಿಸ್‌ಗಳಿಗೆ ಪ್ರತಿಕ್ರಿಯಿಸಲು ಯಾರೂ ಇಲ್ಲ ಎಂದು ಹೇಳಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com