ಉಜ್ಬೇಕಿಸ್ತಾನ ಮಹಿಳೆ ಹತ್ಯೆ ಪ್ರಕರಣ: ಇಬ್ಬರು ಹಂತಕರ ಬಂಧನ

27 ವರ್ಷದ ಉಜ್ಬೇಕಿಸ್ತಾನ್ ಮಹಿಳೆಯ ಕೊಲೆ ಪ್ರಕರಣವನ್ನು ಭೇದಿಸಿರುವ ಶೇಷಾದ್ರಿಪುರಂ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: 27 ವರ್ಷದ ಉಜ್ಬೇಕಿಸ್ತಾನ್ ಮಹಿಳೆಯ ಕೊಲೆ ಪ್ರಕರಣವನ್ನು ಭೇದಿಸಿರುವ ಶೇಷಾದ್ರಿಪುರಂ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಆರೋಪಿಗಳನ್ನು ಅಸ್ಸಾಂ ಮೂಲದ ಅಮೃತ್ (22) ಮತ್ತು ರಾಬರ್ಟ್ ಪಿ (26) ಎಂದು ಗುರುತಿಸಲಾಗಿದೆ. ಇಬ್ಬರೂ ಸ್ಯಾಂಕಿ ರಸ್ತೆಯಲ್ಲಿರುವ ಹೋಟೆಲ್‌ನಲ್ಲಿ ಹೌಸ್‌ಕೀಪಿಂಗ್ ಸಿಬ್ಬಂದಿಗಳಾಗಿದ್ದರು.

ಪ್ರವಾಸಿ ವೀಸಾದ ಮೇಲೆ ನಾಲ್ಕು ದಿನಗಳ ಕಾಲ ಬೆಂಗಳೂರಿಗೆ ಬಂದಿದ್ದ ಜರೀನಾ ಜೆಪರೋವಾ ಬುಧವಾರ ರಾತ್ರಿ 11 ಗಂಟೆ ಸುಮಾರಿಗೆ ಹೋಟೆಲ್‌ನ ಎರಡನೇ ಮಹಡಿಯ ಕೊಠಡಿಯಲ್ಲಿ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.

ಸಂಗ್ರಹ ಚಿತ್ರ
ಬೆಂಗಳೂರು: ಹೋಟೆಲ್ ನಲ್ಲಿ ವಿದೇಶಿ ಮಹಿಳೆ ಶವವಾಗಿ ಪತ್ತೆ; ಉಸಿರುಗಟ್ಟಿಸಿ ಕೊಲೆ?

ಚೆಕ್-ಔಟ್ ಸಮಯದ ನಂತರವೂ ಮಹಿಳೆ ಹೊರಗೆ ಬರದ ಕಾರಣ, ಹೋಟೆಲ್ ಸಿಬ್ಬಂದಿಗಳು ಫೋನ್ ಮಾಡಿದರೆ, ದೂರವಾಣಿ ಕರೆಗೆ ಪ್ರತಿಕ್ರಿಯಿಸದ ಕಾರಣ ಕೊಠಡಿ ತೆರಳಿದ್ದಾರೆ. ಮಹಿಳೆ ಬಾಗಿಲು ತೆರೆಯದ ಕಾರಣ ಮಾಸ್ಟರ್ ಕೀ ಬಳಸಿ ಬಾಗಿಲು ತೆರೆದಿದ್ದಾರೆ. ಈ ವೇಳೆ ಜರೀನಾ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.

ಪ್ರಕರಣ ಭೇದಿಸಲು ವಿಶೇಷ ತಂಡಗಳನ್ನು ರಚಿಸಲಾಗಿತ್ತು. ಇದರಂತೆ ಕೃತ್ಯದಲ್ಲಿ ಹೋಟೆಲ್ ಹೌಸ್ ಕೀಪಿಂಗ್ ಸಿಬ್ಬಂದಿ ಕೈವಾಡ ಖಚಿತವಾದ ಕೂಡಲೇ ಆ ಸಿಬ್ಬಂದಿಯ ಬೆನ್ನತ್ತಿದ್ದರು. ಕೃತ್ಯ ಎಸಗಿದ ಬಳಿಕ ಆರೋಪಿಗಳು ಮೆಜೆಸ್ಟಿಕ್ ಗೆ ಬಂದು ಕೇರಳ ಬಸ್ ನಲ್ಲಿ ಪರಾರಿಯಾಗಿದ್ದರು. ಅಂತಿಮವಾಗಿ ಕೇರಳದಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ.

ಜರೀನಾ ಕೋಣೆಗೆ ಸ್ವಚ್ಛತೆಗೆ ಆರೋಪಿಗಳು ತೆರಳಿದ್ದರು. ಆ ವೇಳೆ ಊಟದ ಬಿಲ್ ಪಾವತಿಸುವಾಗ ಆಕೆಯ ಪರ್ಸ ನಲ್ಲಿ ಹಣ ತುಂಬಿರುವುದು ಆರೋಪಿಗಳ ಕಣ್ಣಿಗೆ ಬಂದ್ದಿದೆ. ಆಗ ಜರೀನಾ ಬಳಿ ತುಂಬಾ ಹಣವಿದೆ ಎಂದು ದುರಾಸೆಯಿಂದ ಅಮೃತ್ ಹಾಗೂ ರಾಬರ್ಟ್ ಹತ್ಯೆಗೆ ನಿರ್ಧರಿಸಿದ್ದರು. ಅಂತೆಯೇ ಬುಧವಾರ ಮಧ್ಯಾಹ್ನ ಸಿಂಕ್ ಸ್ವಚ್ಛಗೊಳಿಸುವ ನೆಪದಲ್ಲಿ ಜರೀನಾ ಕೋಣೆಗೆ ತೆರಳಿದ್ದಾರೆ. ಆಗ ಆಕೆಯನ್ನು ಉಸಿರುಗಟ್ಟಿಸಿ ಹತ್ಯೆಗೈದು ಪರಾರಿಯಾಗಿದ್ದಾರೆಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com