ತೆರೆದ ಚರಂಡಿಗೆ ಹರಿದು ಬರುತ್ತಿರುವ ಕೊಳಚೆ ನೀರು: ಅಪಾಯದಲ್ಲಿ ನಿವಾಸಿಗಳು

ಹರಳೂರು ರಸ್ತೆಯಲ್ಲಿನ ಅಪಾರ್ಟ್ ಮೆಂಟ್ ವೊಂದರ ಮುಂದೆ ಇರುವ ತೆರೆದ ಚರಂಡಿ ಅಪಾಯದ ಗಂಟೆ ಭಾರಿಸುವಂತಿದ್ದು, ಆತಂಕಕ್ಕೆ ಕಾರಣವೆನಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಹರಳೂರು ರಸ್ತೆಯಲ್ಲಿನ ಅಪಾರ್ಟ್ ಮೆಂಟ್ ವೊಂದರ ಮುಂದೆ ಇರುವ ತೆರೆದ ಚರಂಡಿ ಅಪಾಯದ ಗಂಟೆ ಭಾರಿಸುವಂತಿದ್ದು, ಆತಂಕಕ್ಕೆ ಕಾರಣವೆನಿಸಿದೆ.

ಹರಳೂರು ರಸ್ತೆಯಲ್ಲಿರುವ ವಿವೆರೊ ಇಂಟರ್‌ನ್ಯಾಶನಲ್ ಸ್ಕೂಲ್ ಎದುರು 24 ಫ್ಲಾಟ್ ಗಳುಳ್ಳ ವಿಎಸ್ ಸನ್‌ಶೈನ್‌ ಅಪಾರ್ಟ್ ಮೆಂಟ್ ಇದ್ದು, ಈ ಅಪಾರ್ಟ್ ಮೆಂಟ್ ಮುಂದೆ ಇರುವ ತೆರೆದ ಚಂರಡಿ ಬಗ್ಗೆ ನಿವಾಸಿಗಳು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) 120 ಯೂನಿಟ್‌ಗಿಂತ ಕಡಿಮೆ ಇರುವ ಅಪಾರ್ಟ್‌ಮೆಂಟ್‌ಗಳಿಗೆ ಕೊಳಚೆ ನೀರು ಸಂಸ್ಕರಣಾ ಘಟಕಗಳನ್ನು (ಎಸ್‌ಪಿಟಿ) ಸ್ಥಾಪಿಸುವ ಅಗತ್ಯವಿಲ್ಲ ಎಂದು ಹೇಳಿದೆ, ಹೀಗಾಗಿ ಹತ್ತಿರದ ಇತರೆ ಕಟ್ಟಡಗಳಿಂದ ಬರುವ ಕೊಳಚೆ ನೀರು ಚರಂಡಿಯಲ್ಲಿ ಹರಿಯುತ್ತಿದೆ. ಮಳೆಗಾಲದಲ್ಲಿ ಸಮಸ್ಯೆ ಮತ್ತಷ್ಟು ಬಿಗಡಾಯಿಸುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

ಸಂಗ್ರಹ ಚಿತ್ರ
ಮಳೆಗಾಲ ಪರಿಸ್ಥಿತಿ ಎದುರಿಸಲು ಬಿಬಿಎಂಪಿ ಸಜ್ಜು: ರಾಜಕಾಲುವೆಗಳಲ್ಲಿ 'ಆಪರೇಷನ್‌ ಕ್ಲೀನಿಂಗ್‌' ಆರಂಭ!

ಕಳೆದ ಕೆಲವು ವರ್ಷಗಳಿಂದ ಚರಂಡಿಯಿಂದ ಸಾಕಷ್ಟು ಅಪಾಯಗಳು ಎದುರಾಗುತ್ತಲೇ ಇದೆ. ಸಾಕಷ್ಟು ಮಂದಿ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅಧಿಕಾರಿಗಳನ್ನು ಎಚ್ಚರಿಸಲು ಹಲವು ಬಾರಿ ಪ್ರಯತ್ನಿಸಿದರೂ ಪ್ರಯೋಜನವಾಗಿಲ್ಲ. ಕಳೆದ ವರ್ಷ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ದೂರು ನೀಡಿದ್ದೆವು. ತೆರೆದ ಚರಂಡಿಯಿಂದ ಹತ್ತಿರದ ನಿವಾಸಿಗಳು ಅನಾರೋಗ್ಯ ಎದುರಿಸುತ್ತಿದ್ದಾರೆ. ಚರ್ಮದ ದದ್ದುಗಳು, ಜಠರಗರುಳಿನ ಸಮಸ್ಯೆಗಳು ಇತ್ಯಾದಿಗಳು ಹೆಚ್ಚಾಗುತ್ತಿವೆ ಎಂದು ತಿಳಿಸಿದ್ದಾರೆ.

ಈ ನಡುವೆ BWSSB ಅಧಿಕಾರಿಗಳು ಸ್ಥಳವನ್ನು ಪರಿಶೀಲನೆ ನಡೆಸಿದ್ದು, ಜವಾಬ್ದಾರಿಯಿಂದ ನುಣುಚಿಕೊಳ್ಳಲು ಯತ್ನಿಸಿದ್ದಾರೆ.

ಚರಂಡಿ ಸ್ವಚ್ಛಗೊಳಿಸುವ ಕಾರ್ಯ ಬಿಬಿಎಂಪಿಯ ಜವಾಬ್ದಾರಿಯಾಗಿದೆ ಎಂದು ಹೇಳಿದ್ದಾರೆ. ಇನ್ನು ಬಿಬಿಎಂಪಿ ಅಧಿಕಾರಿಗಳು ಈ ವಾರ್ಡ್ ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ತಿಳಿಸಿದ್ದಾರೆ.

ನಾಗರಿಕ ಸಂಸ್ಥೆಗಳು ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿವೆ ಎಂದು ಬೆಂಗಳೂರು ನವನಿರ್ಮಾಣ ಪಕ್ಷ ಕಿಡಿಕಾರಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com