ನಗರದ ಕೊಳಗೇರಿ ಪ್ರದೇಶಗಳಲ್ಲಿ ನೀರಿಗೆ ಹಾಹಾಕಾರ: ವಾರಕ್ಕೆ 2 ಗಂಟೆ ಮಾತ್ರ ನೀರು ಪೂರೈಕೆ, ಆದರೂ ಸಮಸ್ಯೆ ಇಲ್ಲ ಎನ್ನುತ್ತಿದೆ BWSSB!

ಈ ಹಿಂದೆ ಪ್ರತಿದಿನ 24 ಗಂಟೆಗಳ ಕಾಲ ನಿರಂತರ ನೀರು ಪೂರೈಕೆಯಾಗುತ್ತಿದ್ದ ಡಿ.ಜೆ.ಹಳ್ಳಿ ಮತ್ತು ಚಿಕ್ಕ ಬಾಣಸವಾಡಿಯ ಕೊಳಗೇರಿ ಪ್ರದೇಶಗಳಲ್ಲಿ ಇದೀಗ ವಾರಕ್ಕೆ 2 ಗಂಟೆಗಳ ಕಾಲ ಮಾತ್ರ ನೀರು ಸಿಗುತ್ತಿದ್ದು, ಇಲ್ಲಿನ ನಿವಾಸಿಗಳು ಸಂಕಷ್ಟದಲ್ಲಿ ದಿನ ಕಳೆಯುತ್ತಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ಈ ಹಿಂದೆ ಪ್ರತಿದಿನ 24 ಗಂಟೆಗಳ ಕಾಲ ನಿರಂತರ ನೀರು ಪೂರೈಕೆಯಾಗುತ್ತಿದ್ದ ಡಿ.ಜೆ.ಹಳ್ಳಿ ಮತ್ತು ಚಿಕ್ಕ ಬಾಣಸವಾಡಿಯ ಕೊಳಗೇರಿ ಪ್ರದೇಶಗಳಲ್ಲಿ ಇದೀಗ ವಾರಕ್ಕೆ 2 ಗಂಟೆಗಳ ಕಾಲ ಮಾತ್ರ ನೀರು ಸಿಗುತ್ತಿದ್ದು, ಇಲ್ಲಿನ ನಿವಾಸಿಗಳು ಸಂಕಷ್ಟದಲ್ಲಿ ದಿನ ಕಳೆಯುತ್ತಿದ್ದಾರೆ.

ಈ ಪ್ರದೇಶದಲ್ಲಿ ಸಾಕಷ್ಟು ಮಂದಿ ವಲಸೆ ಕಾರ್ಮಿಕರು ನೆಲೆಯೂರಿದ್ದಾರೆ. ನೀರು ಸಮಸ್ಯೆಯಿಂದಾಗಿ ತಾವು ದುಡಿದ ಬಹುತೇಕ ಹಣವನ್ನು ನೀರು ಖರೀದಿಗೆ ಖರ್ಚು ಮಾಡುತ್ತಿದ್ದಾರೆ.

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಯಾವುದಾದರೂ ನಾಯಕರು ನಮ್ಮ ಬಳಿಕೆ ಬಂದು ನಮ್ಮ ನೀರಿನ ಸಮಸ್ಯೆ ಬಗ್ಗೆ ಗಮನ ಹರಿಸುತ್ತಾರೆಂಬ ನಿರೀಕ್ಷೆಯಲ್ಲಿದ್ದೆವು. ಆದರೆ, ನಮ್ಮ ಮತದಾನದ ಹಕ್ಕು ಬೇರೆಡೆ ಇರುವುದರಿಂದ ಇಲ್ಲಿ ನಮ್ಮನ್ನು ಆದ್ಯತೆಯ ನಾಗರೀಕರೆಂದು ಪರಿಗಣಿಸಲಾಗುತ್ತಿಲ್ಲ ಎಂದು ಪಶ್ಚಿಮ ಬಂಗಾಳದ ವಲಸೆ ಕಾರ್ಮಿಕರೊಬ್ಬರು ಹೇಳಿದ್ದಾರೆ.

ಕೆಲವು ಮಕ್ಕಳು ಇಲ್ಲಿನ ಶಾಲೆಗಳಿಗೆ ಹೋಗುತ್ತಿದ್ದರು, ಆದರೆ ನಮ್ಮ ದೈನಂದಿನ ಕೆಲಸಗಳಲ್ಲಿ ನಮಗೆ ಸಹಾಯ ಮಾಡಲು ನೀರನ್ನು ತರುವ ಕೆಲಸ ಮಾಡುತ್ತಿದ್ದಾರೆ. ಗುಣಮಟ್ಟವನ್ನು ಲೆಕ್ಕಿಸದೆ ಕಡಿಮೆ ದರದಲ್ಲಿ ನೀರು ಮಾರಾಟ ಮಾಡುವವರಿಂದ ನಾವು ನೀರು ಖರೀದಿ ಮಾಡುತ್ತಿದ್ದೇವೆಂದು ತಿಳಿಸಿದ್ದಾರೆ.

ಸಂಗ್ರಹ ಚಿತ್ರ
ಕಾವೇರಿ ಮೇಲಿನ ಒತ್ತಡ ಇಳಿಸಲು ಕ್ರಮ: ಪ್ರತಿದಿನ ಕೋಟಿ ಲೀಟರ್‌ ಸಂಸ್ಕರಿತ ನೀರು ಉತ್ಪಾದನೆಗೆ BWSSB ಮುಂದು!

ಆಟೋ ವಾಶ್ ಬಿಸಿನೆಸ್ ನಿಂದ ಯಾವುದ ಆದಾಯ ಬರುತ್ತಿಲ್ಲ. ಇದರಿಂದಾಗಿ ನನ್ನ ಮಕ್ಕಳ ಶಿಕ್ಷಣ ವೆಚ್ಚವನ್ನು ಭರಿಸಲು ನನಗೆ ಸಾಧ್ಯವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಡಿಜೆ ಹಳ್ಳಿಯಲ್ಲಿ ಸುಮಾರು40-50 ಮಂದಿ ವಲಸೆ ಕಾರ್ಮಿಕರು ವಾಸವಿದ್ದು, ಇಲ್ಲಿ ವಾರಕ್ಕೆ ಎರಡು ಗಂಟೆ ಮಾತ್ರ ನೀರು ಪೂರೈಸುತ್ತಿದ್ದಾರೆ. ಒಂದು ಗಂಟೆ ಕುಡಿಯುವ ನೀರು ಪೂರೈಕೆ ಮಾಡಿದರೆ, ಮತ್ತೊಂದು ಗಂಟೆ ಪ್ರತ್ಯೇಕ ದಿನಗಳಲ್ಲಿ ಶುದ್ಧೀಕರಿಸಿದ ನೀರನ್ನು ನೀಡುತ್ತಿದ್ದಾರೆ.

ನಾವು ನೆಲೆಸಿರುವ ಪ್ರದೇಶ ಅತ್ಯಂತ ಕಿರಿದಾಗಿದ್ದು, ಟ್ಯಾಂಕರ್ ಗಳು ಒಳಗೆ ಬರಲು ಸಾಧ್ಯವಾಗುತ್ತಿಲ್ಲ. ಹೆಚ್ಚಿನ ಹಣ ನೀರು ಖರೀದಿ ಮಾಡಲೂ ಸಾಧ್ಯವಾಗುತ್ತಿಲ್ಲ ಎಂದು ರೇಷ್ಮಾ ಎಂಬುವವರು ಹೇಳಿದ್ದಾರೆ.

ಇಲ್ಲಿ ನೆಲೆಸಿರುವ ಬಹುತೇಕ ಮಂದಿ ಮಾಂಸದ ಅಂಗಡಿ, ಪೀಠೋಪಕರಣ ಅಂಗಡಿ ಹಾಗೂ ಬಣ್ಣ ಹೊಡೆಯುವ ಕೂಲಿ ಕಾರ್ಮಿಕರ ಕೆಲಸ ಮಾಡುತ್ತಿದ್ದು, ವಲಸೆ ಕಾರ್ಮಿಕರು ದೈನಂದಿನ ಆದಾಯವನ್ನು ಅವಲಂಬಿಸಿ ಬದುಕುತ್ತಿದ್ದಾರೆ. ನೀರು ಸೂಕ್ತವಾಗಿ ಪೂರೈಕೆಯಾಗದ ಕಾರಣ ನಮ್ಮ ದಿನನಿತ್ಯದ ಕೆಲಸಗಳಿಗೆ ತೊಂದರೆಯಾಗುತ್ತಿದೆ ಎಂದು ಅಳಲು ತೋಡಿಕೊಂಡಿದ್ದಾರೆ.

ಸಂಗ್ರಹ ಚಿತ್ರ
BWSSBಯಿಂದ ವಿಪ್ರೋಗೆ ಪ್ರತಿದಿನ 3 ಲಕ್ಷ ಲೀಟರ್ ಸಂಸ್ಕರಿಸಿದ ನೀರು ಪೂರೈಕೆ

ಚಿಕ್ಕ ಬಾಣಸವಾಡಿ ನಿವಾಸಿ ರಮೇಶ ಎಂಬುವರು ಮಾತನಾಡಿ, ನಮ್ಮ ಮನೆಗೆ ನಿತ್ಯ 20 ಬಿಂದಿಗೆ ನೀರು ಬೇಕು. ಇದಕ್ಕಾಗಿ ಸಾಕಷ್ಟು ಹಣ ವ್ಯಯಿಸುತ್ತಿದ್ದೇನೆ. ಸಮೀಪದ ಸಾರ್ವಜನಿಕ ಬೋರ್‌ವೆಲ್ ಕೂಡ ಬತ್ತಿ ಹೋಗಿದೆ. ನಮಗೆ ಪರ್ಯಾಯ ವ್ಯವಸ್ಥೆ ಇಲ್ಲದ ಕಾರಣ ನೀರಿನ ಗುಣಮಟ್ಟವನ್ನು ಕಳಪೆಯಾಗಿ ಸಿಕ್ಕರೂ ಅದನ್ನು ಬಳಕೆ ಮಾಡುತ್ತಿದ್ದೇವೆಂದು ಹೇಳಿದ್ದಾರೆ.

ಈ ಸಮಸ್ಯೆ.ನ್ನು BWSSB ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ಅವರ ಗಮನಕ್ಕೆ ತರಲಾಯಿತು. ಆದರೆ, ಅವರು, ನಗರದಲ್ಲಿ ನೀರಿನ ಸಮಸ್ಯೆಯಿಲ್ಲ ಎಂದು ನಿರಾಕರಿಸಿದ್ದಾರೆ.

ಕೊಳಗೇರಿ ಪ್ರದೇಶದಿಂದ ಯಾವುದೇ ದೂರುಗಳು ಬಂದಿಲ್ಲ. ನೀರಿನ ಕೊರತೆ ಇರುವ ಪ್ರದೇಶಗಳ ಗುರುತಿಸಲು ತಪಾಸಣೆ ಹಾಗೂ ಆಗಾಗ್ಗೆ ಸಭೆಗಳನ್ನು ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com