ಬೆಂಗಳೂರು: ಸೋದರಿ ಮನೆಯಲ್ಲಿಯೇ ಕಳ್ಳತನ ಮಾಡಿ ಸಿಕ್ಕಿಬಿದ್ದ 22 ವರ್ಷದ ಯುವತಿ ಬಂಧನ!

ಅಕ್ಕನ ಮನೆಯಲ್ಲಿ 52 ಲಕ್ಷ ರೂಪಾಯಿ ನಗದು ಮತ್ತು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕದ್ದಿದ್ದ 22 ವರ್ಷದ ಯುವತಿಯನ್ನು ಕೆಂಗೇರಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಲಗ್ಗೆರೆ ನಿವಾಸಿ ಉಮಾ ಎಂದು ಗುರುತಿಸಲಾಗಿದ್ದು, ಆಟೋ ಕನ್ಸಲ್ಟೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ.
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ

ಬೆಂಗಳೂರು: ಅಕ್ಕನ ಮನೆಯಲ್ಲಿ 52 ಲಕ್ಷ ರೂಪಾಯಿ ನಗದು ಮತ್ತು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕದ್ದಿದ್ದ 22 ವರ್ಷದ ಯುವತಿಯನ್ನು ಕೆಂಗೇರಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಲಗ್ಗೆರೆ ನಿವಾಸಿ ಉಮಾ ಎಂದು ಗುರುತಿಸಲಾಗಿದ್ದು, ಆಟೋ ಕನ್ಸಲ್ಟೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ.

ಉಮಾ 5 ಲಕ್ಷ ಸಾಲ ಮಾಡಿಕೊಂಡಿದ್ದರು. ಆಕೆಯ ಸಹೋದರಿ ಸುಮಾ ಹಾಗೂ ಭಾವ ಕುನ್ನೇಗೌಡ ಬಳಿ ಹಣ ಕೇಳಿದಾಗ ಅವರು ನಿರಾಕರಿಸಿದ್ದಾರೆ. ಹೀಗಾಗಿ, ಮನೆಯಲ್ಲಿ ಅಪಾರ ಪ್ರಮಾಣದ ನಗದು ಇಟ್ಟಿರುವುದನ್ನು ತಿಳಿದ ಉಮಾ ಕಳ್ಳತನಕ್ಕೆ ಸಂಚು ರೂಪಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಟೀಲ್ ಮತ್ತು ಸಿಮೆಂಟ್ ವ್ಯಾಪಾರ ಮಾಡುತ್ತಿರುವ ಕುನ್ನೇಗೌಡ ಅವರು ಕುಟುಂಬ ಸಮೇತರಾಗಿ ಮಾರ್ಚ್ 22 ರಂದು ತುಮಕೂರು ಜಿಲ್ಲೆಯ ಹುಲಿಯೂರುದುರ್ಗದಲ್ಲಿ ಜಾತ್ರೆಗೆಂದು ಹೋಗಿತ್ತು. ಅವರು ಹಿಂದಿರುಗುವವರೆಗೆ ತಮ್ಮ ಮನೆಯಲ್ಲಿ ತಂಗಲು ಸಂಬಂಧಿಕರೊಬ್ಬರಿಗೆ ಸೂಚಿಸಿದ್ದರು.

ಪ್ರಾತಿನಿಧಿಕ ಚಿತ್ರ
ಬೆಂಗಳೂರು: ವಿವಿಧ ಪಿಜಿ, ಹೋಟೆಲ್ ಗಳಲ್ಲಿ ಲ್ಯಾಪ್ ಟಾಪ್ ಕಳ್ಳತನ, ರಾಜಸ್ಥಾನ ಮೂಲದ ಮಹಿಳೆ ಬಂಧನ

ಈ ವೇಳೆ ಉಮಾ ಅವರು ನಕಲಿ ಕೀ ಬಳಸಿ ಮಾರ್ಚ್ 24 ರಂದು ಕಳ್ಳತನ ಮಾಡಿದ್ದಾರೆ. ರಾತ್ರಿ ಸಂಬಂಧಿಕರು ಬಂದಾಗ, ಯಾರೋ ಮನೆಗೆ ನುಗ್ಗಿರುವುದು ಕಂಡುಬಂದಿದೆ ಮತ್ತು ಈ ವಿಚಾರವನ್ನು ಕುನ್ನೇಗೌಡ ಅವರಿಗೆ ತಿಳಿಸಿದ್ದಾರೆ. ಅವರು ಮನೆಗೆ ಧಾವಿಸಿ ನೋಡಿದಾಗ 52 ಲಕ್ಷ ರೂ. ನಗದು ಮತ್ತು 182 ಗ್ರಾಂ ಚಿನ್ನದ ನಾಣ್ಯಗಳು ಕಳ್ಳತನವಾಗಿರುವುದು ಪತ್ತೆಯಾಗಿದೆ' ಎಂದು ಪೊಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com