
ಬೆಂಗಳೂರು: ಉಚಿತ ಆರೋಗ್ಯ ಸೇವೆ ಒದಗಿಸುವ ನಮ್ಮ ಕ್ಲಿನಿಕ್'ಗಳ ಮಾದರಿಯಲ್ಲೇ ನಗರದ ಪ್ರತಿ ವಲಯದಲ್ಲಿ ಉಚಿತ ದಂತ ಚಿಕಿತ್ಸಾಲಯಗಳ ಆರಂಭಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸಿದ್ಧತೆ ನಡೆಸಿದೆ.
ಖಾಸಗಿ ಚಿಕಿತ್ಸಾಲಯಗಳಿಂದ ಚಿಕಿತ್ಸೆ ಪಡೆಯುವುದು ದುಬಾರಿಯಾಗಿದ್ದು, ಹೀಗಾಗಿ ದಂತ ಚಿಕಿತ್ಸಾಲಯಗಳ ಪ್ರಾರಂಭಿಸುವಂತೆ ಸಾಕಷ್ಟು ಜನರು ಬಿಬಿಎಂಪಿಗೆ ಮನವಿ ಸಲ್ಲಿಸುತ್ತಿದ್ದರು.
ಇದರಂತೆ ಜನರ ಆಗ್ರಹಗಳಿಗೆ ಬಿಬಿಎಂಪಿ ಸ್ಪಂದಿಸಿದೆ. ಮುಖ್ಯ ಆರೋಗ್ಯ ಅಧಿಕಾರಿ ಡಾ ಸಿರಾಜುದ್ದೀನ್ ಮದನಿ ಅವರು ಮಾತನಾಡಿ, ಬಡವರು ಮತ್ತು ಕಾರ್ಮಿಕ ವರ್ಗದ ಜನರು ತಮ್ಮ ಹಲ್ಲಿನ ಆರೋಗ್ಯಕ್ಕಾಗಿ ಸಾಕಷ್ಟು ಹಣವನ್ನು ಖರ್ಚು ಮಾಡುತ್ತಿದ್ದಾರೆ. ಅವರ ಹೊರೆಯನ್ನು ಕಡಿಮೆ ಮಾಡಲು, ನಮ್ಮ ಚಿಕಿತ್ಸಾಲಯಗಳ ಮಾದರಿಯಲ್ಲಿ ದಂತ ಚಿಕಿತ್ಸಾಲಯಗಳನ್ನು ಸ್ಥಾಪಿಸುವ ಕುರಿತು ಚಿಂತನೆಗಳು ನಡೆಯುತ್ತಿವೆ. ಬಿಬಿಎಂಪಿ ಡೆಂಟಲ್ ಕ್ಲಿನಿಕ್ ಗಳಿಗೆ ವೈದ್ಯರ ನಿಯೋಜನೆಗೆ ಡೆಂಟಲ್ ಕಾಲೇಜುಗಳೊಂದಿಗೆ ಒಪ್ಪಂದ ಮಾಡಿಕೊಳ್ಳುವ ಕುರಿತು ಚರ್ಚೆಗಳಾಗಿವೆ ಎಂದು ಹೇಳಿದ್ದಾರೆ.
ದಂತ ಚಿಕಿತ್ಸಾಲಯಗಳ ಕುರಿತು ಬಿಬಿಎಂಪಿ ಆರೋಗ್ಯ ವಿಶೇಷ ಆಯುಕ್ತರು ಮತ್ತು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆಂದು ತಿಳಿಸಿದ್ದಾರೆ.
Advertisement