

ಬೆಂಗಳೂರು: ಬೆಂಗಳೂರು ನಗರ ಪೊಲೀಸರು ತಮ್ಮ ಕೆಲಸ-ಜೀವನದ ಸಮತೋಲನವನ್ನು ಸುಧಾರಿಸಲು ಮತ್ತು ಪೊಲೀಸ್ ಪಡೆಯಲ್ಲಿ ಮಹಿಳಾ ಸಿಬ್ಬಂದಿ ಉತ್ತಮವಾಗಿ ಭಾಗವಹಿಸುವುದನ್ನು ಪ್ರೋತ್ಸಾಹಿಸಲು ಮಹಿಳಾ ಅಧಿಕಾರಿಗಳಿಗೆ ಎರಡು ಮಕ್ಕಳ ಡೇಕೇರ್ ಕೇಂದ್ರಗಳನ್ನು ಸ್ಥಾಪನೆ ಮಾಡಲಾಗಿದೆ.
ವಿಧಾನಸೌಧ ಮತ್ತು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಈ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ರಾಜ್ಯ ಪೊಲೀಸ್ ಇಲಾಖೆಯ ಈ ಉಪಕ್ರಮವು ಮಹಿಳಾ ಅಧಿಕಾರಿಗಳು ತಮ್ಮ ಕರ್ತವ್ಯಗಳಿಗೆ ಹಾಜರಾಗುವಾಗಲೂ ಅನುಕೂಲಕರವಾದ ಶಿಶುಪಾಲನಾ ಆಯ್ಕೆಯನ್ನು ಒದಗಿಸುವ ಮೂಲಕ ಅವರನ್ನು ಬೆಂಬಲಿಸುವ ಗುರಿಯನ್ನು ಹೊಂದಿದೆ.
ಪೋಲೀಸರು ಸ್ಥಾಪಿಸಿರುವ ಎರಡು ಡೇಕೇರ್ ಸೆಂಟರ್ಗಳಲ್ಲಿ ಆಟಿಕೆಗಳು, ಪುಸ್ತಕಗಳು, ಮಲಗುವ ಮಂಚಗಳು, ಕುರ್ಚಿಗಳು, ಶುದ್ಧೀಕರಿಸಿದ ನೀರು, ಶೌಚಾಲಯಗಳು ಮತ್ತು ಆಹಾರ ತಯಾರಿಕೆಯ ಸೌಕರ್ಯಗಳು ಮತ್ತು ಮಕ್ಕಳ ಆರೈಕೆಗಾಗಿ ಕೆಲಸಗಾರರಂತಹ ಸೌಲಭ್ಯಗಳಿವೆ. ಎರಡು ಕೇಂದ್ರಗಳು ಸದ್ಯಕ್ಕೆ 40 ಮಕ್ಕಳನ್ನು ನೋಡಿಕೊಳ್ಳಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬೆಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್ನ ರಶ್ಮಿ ಯೋಜನೆಯಡಿ ಅವುಗಳನ್ನು ಸ್ಥಾಪಿಸಲಾಗಿದೆ. ಡೇಕೇರ್ ಸೌಲಭ್ಯವನ್ನು ಇತರ ಪೊಲೀಸ್ ಠಾಣೆಗಳಿಗೂ ವಿಸ್ತರಿಸುವ ಯೋಜನೆ ಇದೆಯಾದರೂ, ನಗರದಾದ್ಯಂತ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಇದನ್ನು ಜಾರಿಗೊಳಿಸುವುದು ಕಷ್ಟ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಸಮರ್ಥಿಸಿಕೊಂಡರು.
ಭಾನುವಾರದಂದು ‘ತಾಯಂದಿರ ದಿನ’ದಂದು, ಬೆಂಗಳೂರು ಪೊಲೀಸ್ ಇಲಾಖೆ ಈ ಮಾಹಿತಿಯನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ವೀಡಿಯೊವನ್ನು ಹಂಚಿಕೊಂಡಿದೆ. ಇದರಲ್ಲಿ ಮಹಿಳಾ ಪೊಲೀಸ್ ಅಧಿಕಾರಿಗಳು ತಮ್ಮ ಕೆಲಸವನ್ನು ಸಮತೋಲನಗೊಳಿಸುವಲ್ಲಿ ಮತ್ತು ತಮ್ಮ ಮಕ್ಕಳನ್ನು ನೋಡಿಕೊಳ್ಳುವಲ್ಲಿ ತಮ್ಮ ಕಷ್ಟಗಳನ್ನು ಹಂಚಿಕೊಂಡಿದ್ದು, ಮಾತ್ರವಲ್ಲದೇ ಶಿಶುಪಾಲನಾ ಸೌಲಭ್ಯವು ಅವರಿಗೆ ಹೇಗೆ ಸಹಾಯ ಮಾಡುತ್ತಿದೆ ಎಂದು ಅವರು ಹೇಳಿದರು.
ವಿಧಾನಸೌಧದ ವಿವಿಐಪಿ ಸೆಕ್ಯುರಿಟಿ ವಿಂಗ್ನಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾನ್ಸ್ಟೆಬಲ್ ಶೀಲಾ ಕುಮಾರಿ ಈ ಬಗ್ಗೆ ಮಾತನಾಡಿದ್ದು, 'ತನಗೆ ಪುಟ್ಟ ಮಗುವಿದ್ದು, ಮಗುವಿನೊಂದಿಗೆ ಕರ್ತವ್ಯಕ್ಕೆ ಬರುವಾಗ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದೆ. ಮಗುವನ್ನು ಮನೆಯಲ್ಲಿ ಬಿಡಲು ಸಾಧ್ಯವಿಲ್ಲ. ಏಕೆಂದರೆ ಆರೈಕೆ ಮಾಡಲು ಯಾರೂ ಇಲ್ಲ ಮತ್ತು ಮಗುವನ್ನು ಕೆಲಸದ ಸ್ಥಳಕ್ಕೆ ಕರೆತರುವುದು ಸಹ ಕಷ್ಟಕರ. ಏಕೆಂದರೆ ಮಗುವಿನ ಬಗ್ಗೆ ನಿರಂತರವಾಗಿ ಯೋಚಿಸುವಾಗ ಕೆಲಸದ ಮೇಲೆ ಕೇಂದ್ರೀಕರಿಸುವುದು ಕಷ್ಟ" ಎಂದು ಅವರು ವೀಡಿಯೊದಲ್ಲಿ ಹೇಳಿದ್ದಾರೆ.
ಮಹಿಳಾ ಹೆಡ್ ಕಾನ್ಸ್ಟೆಬಲ್ ಸುಮಾ ಅವರು ಮಾತನಾಡಿ,'ಆರು ತಿಂಗಳ ಹಿಂದೆ, ತನ್ನ ಮಗುವನ್ನು ಡೇಕೇರ್ನಲ್ಲಿ ಬಿಟ್ಟು ಹೋಗುತ್ತಿದ್ದೆ, ಅಲ್ಲಿ ಅವರು ಮಾಸಿಕ 3,000 ರೂಪಾಯಿಗಳನ್ನು ಪಾವತಿಸುತ್ತಿದ್ದೆ ಎಂದರು.